ಕಳೆದ ವಾರ ರಾಜ್ಯ ಸರ್ಕಾರ ಮಂಡಿಸಿದ ಮತಾಂತರ ನಿಷೇಧದ ಕಾಯ್ದೆಯ ಕುರಿತಾಗಿ ಸುವರ್ಣಾ ಟಿವಿಯಲ್ಲಿ ಅಜಿತ್ ಹನುಮಕ್ಕನವರ್ ಅವರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದಲ್ಲೇ ಹುಟ್ಟಿ ಅದರಲ್ಲೂ ಬೆಂಗಳೂರಿನಲ್ಲೇ ಅಲ್ಪಸಂಖ್ಯಾತರಿಗೆ ಸಿಗಬಹುದಾದ ಸಕಲ ಸೌಲಭ್ಯಗಳನ್ನೂ ಬಳಸಿಕೊಂಡು ಬೆಳೆದಿರುವ ಕ್ರಿಶ್ಚಿಯನ್ ಧರ್ಮವನ್ನು ಪ್ರತಿನಿಧಿಸುತ್ತಿದ್ದ ಮತಾಂಧ ರಾಬರ್ಟ್ ಕ್ಲೈವ್ ಎಂಬಾತ ಭಾರತದ ಇತಿಹಾಸವನ್ನು ಅರಿಯದೇ ಓತಪ್ರೋತವಾಗಿ ನಾಲಿಗೆಯನ್ನು ಹರಿಬಿಟ್ಟು, ನಮ್ಮ ಶಿಕ್ಷಣ ಬೇಕು,
ನಮ್ಮ ಅಸ್ಪತ್ರೆಗಳೇ ಆರೋಗ್ಯ ಕಾಪಾಡಬೇಕು, ನಮ್ಮಿಂದಲೇ ದಾನಗಳನ್ನು ಪಡೆದು ನಮ್ಮನ್ನೇ ಏಕೆ ಟಾರ್ಗೆಟ್ ಮಾಡ್ತೀರೀ? ಎಂದು ಅರುಚಾಡುತ್ತಿದ್ದದ್ದನ್ನು ನೋಡಿದಾಗ, ಛೇ, ಸ್ವಾತ್ರಂತ್ರ್ಯ ಬಂದು 75 ವರ್ಷಗಳು ಕಳೆದರೂ ಅವರಿಗೆ ಇನ್ನೂ ದೇಶ ಮತು ಧರ್ಮದ ನಡುವಿನ ಅಂತರವೇ ತಿಳಿಯದೇ ವಿನಾಕಾರಣ ಸಾರ್ವಜನಿಕವಾಗಿ ತನ್ನ ಜನ್ಮಭೂಮಿಯನ್ನೇ ವಾಚಾಮಗೋಚರವಾಗಿ ಅವಹೇಳನ ಮಾಡುತ್ತಾನಲ್ಲಾ ಎಂದೆನಿಸಿ, ಕೇವಲ ಬ್ರಿಟಿಷರು ಭಾರತಕ್ಕೆ ಬರುವ ಮಂಚೆಯಲ್ಲಾ, ಕ್ರಿಶ್ಚಿಯನ್ ರಿಲೀಜಿಯನ್ ಹುಟ್ಟುವ ಮೊದಲೇ ಭಾರತದಲ್ಲಿ ಶಿಕ್ಷಣ, ಆರೋಗ್ಯ, ಜೀವನ ಶೈಲಿ ಹೇಗಿತ್ತು? ಎಂಬುದನ್ನು ತಿಳಿಯಪಡಿಸುವುದಕ್ಕಾಗಿಯೇ ಈ ಲೇಖನ.

ಪ್ರಾಚೀನ ಭಾರತದಲ್ಲಿ, ಶಿಕ್ಷಣ ವ್ಯವಸ್ಥೆಯು ಔಪಚಾರಿಕ ಮತ್ತು ಅನೌಪಚಾರಿಕವಾಗಿ ಅಂದಿನಿಂದಲೂ ಅಸ್ತಿತ್ವದಲ್ಲಿತ್ತು. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಮಕ್ಕಳು ಸಂಸ್ಕಾರ ಮತ್ತು ಶಿಕ್ಷಣವನ್ನು ತಮ್ಮ ಮನೆ ಹತ್ತಿರದ ದೇವಸ್ಥಾನ, ಪಾಠಶಾಲೆ, ಕೂಲಿಮಠಗಳಲ್ಲಿ ಜೀವನಾವಶ್ಯಕವಿದ್ದ ವಿದ್ಯೆಗಳನ್ನು ಕಲಿಯುತ್ತಿದ್ದರೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸ್ಥಳೀಯ ಗುರುಕುಲಗಳಲ್ಲಿ ಛಪ್ಪನ್ನಾರು 64 ವಿಧದ ವಿದ್ಯೆಗಳನ್ನು ಕಲಿಸಿ ಕೊಡಲಾಗುತ್ತಿತ್ತು. ಈ ಗುರುಕುಲಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿತ್ತು. ಅದಲ್ಲದೇ ಮನೆಗಳಲ್ಲಿನ ಹಿರಿಯರು ಹಳ್ಳಿಗಳಳಲ್ಲಿ ನೆಡೆಯುತ್ತಿದ್ದ ನೃತ್ಯ ನಾಟಕಗಳ ಮೂಲಕವಲ್ಲದೇ, ಊರಿನಲ್ಲಿದ್ದ ದೇವಾಲಯಗಳಲ್ಲಿಯೂ ಚಿಕ್ಕ ಮಕ್ಕಳಿಗೆ ಧಾರ್ಮಿಕ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನಗಳನ್ನು ನೀಡುವ ವ್ಯವಸ್ಥೆ ಇತ್ತು.

ಇನ್ನು ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಭಾರತಾದ್ಯಂತ ಗುರುಕುಲದ ಶಿಕ್ಷಣ ವ್ಯವಸ್ಥೆ ಇದ್ದು ಹೊಂದಿದ್ದ ಕಾರಣ, ಈಸ್ಟ್ ಇಂಡಿಯಾ ಕಂಪನಿ ತಮ್ಮ ಮೊದಲ 60 ವರ್ಷಗಳ ಕಾಲದ ಆಳ್ವಿಕೆಯಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿಯೇ ಇರಲಿಲ್ಲ. ಬ್ರಿಟೀಷರು ಭಾರತವನ್ನು ತಮ್ಮ ಕೈವಶ ಮಾಡಿಕೊಂಡ ನಂತರ ಆಡಳಿತ ನಡೆಸುವುದಕ್ಕೆ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ಅಸಾಧ್ಯ ಎನಿಸಿದ ಕಾರಣ, ಸ್ಥಳೀಯರನ್ನೇಕೆ ಬಳಸಿಕೊಳ್ಳಬಾರದು ಎಂದು ಯೋಚಿಸಿದಾಗ, ಭಾರತದಲ್ಲಿ ಅಂದಿನ ಮಕ್ಕಳು ಸ್ಥಳೀಯ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತಿದ್ದರಿಂದ ಥಾಮಸ್ ಬಾಬಿಂಗ್ಟನ್ ಮೆಕಾಲೆ ಎಂಬ ಬೃಹಸ್ಪತಿ ಭಾರತೀಯ ಶಾಲೆಗಳಲ್ಲಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರಬೇಕು ಹಾಗಾದಾಗಲೇ ಭಾ






