*ಸಾಂದರ್ಭಿಕ ಬರಹ..*

*ಡಾ.ಶಶಿಕಿರಣ್ ಶೆಟ್ಟಿ, ಉಡುಪಿ* *9945130630*

*PUC ರಿಸಲ್ಟ್ ಬಂದಿದೆ ಸಂತೋಷ 580,600 ಪ್ಲಸ್ ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ  ಪತ್ರಿಕೆ, ಟಿವಿ, ಯಲ್ಲೇ ಇರಲಿ, ವಾಟ್ಸಪ್ ಗ್ರೂಪ್ನಲ್ಲಿ, ಸೋಷಿಯಲ್ ಮಿಡಿಯಾ ಎಲ್ಲೇ ಇರಲಿ ಅವರ ಮಗ 600+, ಇವರ ಮಗಳು 610 ಅಂತೆ ಎನ್ನುವುದರ ನಡುವೆ, ಏನೂ ತಪ್ಪು ಮಾಡದ 50% ಮಾರ್ಕ್ ತೆಗೆದ, ಫೇಲ್ ಆದ ಮಕ್ಕಳನ್ನು ಕೇಳುವವರಿಲ್ಲ ನೋಡಿ.....*

*ಇನ್ನೇಷ್ಟೋ ಕಡೆ ನೀನು ವೇಸ್ಟ್ ಬಾಡಿ, ನಮ್ಮ ಮರ್ಯಾದೆ ತೆಗೆದೆ, ನಮ್ಮ ಶಾಲೆಗೆ ಕಪ್ಪು ಚುಕ್ಕೆ, ದನ ಮೇಯಿಸು, ಸಾಯ್ಬಾರದಿತ್ತಾ, ಅವರ ಮಗ ನೋಡು,ಇವರ ಮಗಳನ್ನು ನೋಡು ಮುಂತಾದ ಚುಚ್ಚು ನುಡಿ ಇದು ಬೆಳೆಯುವ ಸಿರಿ ಯೊಂದನ್ನು ಮೊಳಕೆಯಲ್ಲೇ ಚಿವುಟುವ ಸಮಾಜ, ಬಾಂದವರು, ಒಡಹುಟ್ಟಿದವರು, ತಂದೆ ತಾಯಿ ಒಮ್ಮೆ ಇವರ ಬಗ್ಗೆ ಯೋಚಿಸ ಬಾರದೇಕೆ??*

examination 2
Teenage Boy Being Bullied At School, covered his face - group of students threatening to hit classmate or junior at university - Concept of teasing, bulling or warning at college campus

*5 ಬೆರಳು ಒಂದೇ ರೀತಿ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೇಕೆ ಅರ್ಥವಾಗುವುದಿಲ್ಲ?, ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕಾದರೆ rank ಬರುವುದು ಅನಿವಾರ್ಯವೇ? ಟಾಟಾ ಬಿರ್ಲಾ, ಅದಾನಿ, ಅಂಬಾನಿ, ಸಚಿನ್ ತೆಂಡೂಲ್ಕರ್ ನಂತಹ rank ಬಾರದ ಅದೆಷ್ಟು ಯಶಸ್ವೀ ವ್ಯಕ್ತಿ ಗಳಿಲ್ಲವೇ?...*

*ಬನ್ನಿ ಸ್ವಲ್ಪ ಬದಲಾಗೋಣ...*

*1) ಕಡಿಮೆ ಅಂಕ ಬಂದ ಮಕ್ಕಳನ್ನು ಪ್ರೀತಿ ಯಿಂದ ಮಾತಾಡೋಣ*

*2) ಅವರಲ್ಲಿ ಧೈರ್ಯ ತುಂಬೋಣ*

*3) ಪರ್ಯಾಯ ಆಯ್ಕೆ ಗಳ ಬಗ್ಗೆ ತಿಳಿ ಹೇಳೋಣ*

*4)ಎರಡನೇ ಯತ್ನದಲ್ಲಿ ಯಶಸ್ವೀ ಯಾದವರ ಕಥೆ ಹೇಳೋಣ..*

*5) 1 ವರ್ಷ sslc ಮಾತ್ರ ಹೋಗಿದ್ದು ಜೀವನ ಇನ್ನೂ ಇದೆ ಎನ್ನುವ ಸತ್ಯ ತಿಳಿ ಹೇಳೋಣ..*

*6) ಅವರಲ್ಲಿರುವ ಟ್ಯಾಲೆಂಟ್ ಅನ್ನು ಗುರುತಿಸೋಣ...*

*ಒಟ್ಟಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಉಪಚಾರಿಸಿ ಹೊಸರೆಕ್ಕೆ ಕಟ್ಟಿ ಆಗಸಕ್ಕೆ ಹಾರಿ ಬಿಡೋಣ ...*

*ಕೊನೆಗೊಂದು ಎಲ್ಲೊ ಓದಿದ ಕಥೆಯೊಂದನ್ನು ಹೇಳುತ್ತೇನೆ ಕೇಳಿ.. ಅಪ್ಪ ಈಗಷ್ಟೇ ತಂದ ಹೊಸ ಕಾರಿನ ಕೆಂಪು ಪೈಂಟ್ ಮೇಲೆ ಚಿಕ್ಕ ಮಗ ಕಲ್ಲಲ್ಲಿ ಏನೋ ಗೀಚುತಿದ್ದ ಸಿಟ್ಟಲ್ಲಿದ್ದ ಅಪ್ಪ ಅಲ್ಲೇ ಇದ್ದ ಕಬ್ಬಿಣದ ರೋಡ್ ಅಲ್ಲಿ ಮಗನ ಕೈಗೆ ಹೊಡೆದನಂತೆ ಮಗನ ಕೈ ಫ್ರಾಕ್ಚರ್ ಆಗಿತ್ತು, ಆಸ್ಪತ್ರೆ ಗೆ ಕೊಂಡು ಹೋದರೆ ಹೊಡೆತ ಜೋರಾಗಿ ಬಿದ್ದಿದ್ದರಿಂದ ಹೆಬ್ಬೆರಳು ಪುಡಿ ಪುಡಿ ಆಗಿದ್ದು ಮಗು ವಿನ ಹೆಬ್ಬೆರಳು ಕತ್ತರಿಸಬೇಕು ಎಂದು ಬೆರಳು ಕತ್ತರಿಸಿದರಂತೆ .. ಅಪ್ಪ ಬೇಸರದಿಂದ ಮನೆಗೆ ಬಂದರೆ ಕೆಂಪು ಕಾರ್ ಮೇಲೆ ಅಪ್ಪ ಈ ಲವ್ ಯು ಎಂದು ಕಲ್ಲಲ್ಲಿ ಗೀಚಿದ್ದ ಮಗ.. ಅಲ್ಲಿ ರಕ್ತ ದ ಕಲೆ ಗಳಿದ್ದವು... ಅಪ್ಪ ದುಃಖ ತಡೆಯಲಾರದೇ ಅಲ್ಲೇ ಕೂತಿದ್ದ.. ಹಿಂದೆ ನಿಂದ ಬಂದ ಮಗ ಬ್ಯಾಂಡೆಜ್ ಮಾಡಿದ್ದ ಕೈ ತೋರಿಸಿ ಹೇಳಿದನಂತೆ ಅಪ್ಪ ನೀನು ಟೆನ್ಶನ್ ತಗೋಬೇಡ ನಾನು ಬರೆಯೋದು ಎಡ ಕೈ ಯಲ್ಲಿ ಮೊನ್ನೆ ಬಲ ಕೈ ಅಲ್ಲಿ ಟ್ರೈ ಮಾಡುತಿದ್ದೆ, ಬಲ ಕೈ ಹೆಬ್ಬೆರಳು ಹೋದರೆ ಹೊಗಲಿ ಬಿಡು ಅಂದನಂತೆ.....*

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ