ಬಿಗ್ ಬಾಸ್ ಬಗ್ಗೆ ಅನೇಕ ಬಾರಿ ಬರೆಯ ಬೇಕು ಎಂದು ಕೈ ತುರಿಸುತ್ತಿದ್ದರೂ, ಸಗಣಿ ಜೊತೆ ಸರಸಕ್ಕಿಂತ ಗಂಧದೊಡನೆ ಗುದ್ದಾಟವೇ ಲೇಸು ಎಂದು ನಾಡು ನುಡಿಗಳ ಸಂಸ್ಕಾರ ಸಂಪ್ರದಾಯಗಳ ಕುರಿತಾದ ವಿಷಯದ ಬಗ್ಗೆ ಬರೆಯುತ್ತಿದ್ದೆ. ಕೆಲವು ವರ್ಷಗಳ ಹಿಂದೆ ಇದೇ ಬಿಗ್ ಬಾಸ್ ಎಂಬುದು ಕನ್ನಡ ಮತ್ತು ಕರ್ನಾಟಕ ವಿರೋಧಿ ಕಾರ್ಯಕ್ರಮ ಅದನ್ನು ಈ ಕೂಡಲೇ ನಿಲ್ಲಿಸಬೇಕು. ಅದನ್ನು ಸಕಲ ಕನ್ನಡಿಗರೂ ಭಹಿಷ್ಕರಿಸಬೇಕು ಎಂದು ಅಬ್ಬರಸಿ ಬೊಬ್ಬಿರಿದಿದ್ದ ಮತ್ತು ನೀವೇನಾದರೂ ಬಿಗ್ ಬಾಸಿಗೆ ಹೋಗುತ್ತೀರಾ?

boss2

ಎಂದು ಮಾಧ್ಯಮದವರು ಕೇಳಿದ್ದಕ್ಕೆ ನಾನಂತೂ ಅದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದ ಸ್ವಘೋಷಿತ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅದ್ದೂರಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟಾಗ  ಮತ್ತು ಅದಾಗಲೇ ಹಿಂದೂ ಪರ ಸಮಾಜ ಸೇವಕ ಎಂದು ಗುರುತಿಸಿಕೊಂಡಿರುವ ಮತ್ತು ಈ ಹಿಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಂದು ರೀತಿ ಜಗಳಗಂಟನೆಂದೇ ಕುಖ್ಯಾತಿ ಪಡೆದಿದ್ದ ಪ್ರಕಾಶ್ ಸಂಬರ್ಗಿಯೂ ಸಹಾ ಅದೇ ಕಾರ್ಯಕ್ರಮದಲ್ಲಿ ಇರುವಾಗ ಖಂಡಿತವಾಗಿ ಅಲ್ಲೊಂದು ಹೋರಾಟ ನಡದೇ ತೀರುತ್ತದೆ ಎಂದು ಊಹಿಸಿದ್ದು ಮೊದಲನೇ ವಾರವೇ ಸತ್ಯವಾಯಿತು.

boss3

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಪ್ರತಿಯೊಬ್ಬರೂ ತಮ್ಮ ವಯಕ್ತಿಕ ವ್ಯಕ್ತಿತ್ವದ ಮೇಲೆ ಆಟವಾಡಲು ಹೋಗಿರುತ್ತಾರೆಯೇ ಹೊರತು, ಹೊರ ಜಗತ್ತಿನಲ್ಲಿ ಅವರ ಸಿದ್ದಾಂತ ಮತ್ತು ಕೆಲಸ ಕಾರ್ಯಗಳ ಮೇಲೆ ಹೋಗಿರುವುದಿಲ್ಲ. ಆದರೆ ನನ್ನದು ವೃತ್ತಿ ಮತ್ತು ಪ್ರವೃತ್ತಿ ಎಲ್ಲವೂ ಕನ್ನಡವೇ. ನಾನು ಹುಟ್ಟು ಹೋರಾಟಗಾರ ಎಂದೇ ಮನೆಯಲ್ಲಿ ಪರಿಚಯಿಸಿಕೊಂಡ ರೂಪೇಶ್ ರಾಜಣ್ಣ, ತಾನು ಇಡೀ ಕನ್ನಡ ಮತ್ತು ಕನ್ನಡಿಗರ ಪ್ರತಿನಿಧಿ. ಇಲ್ಲಿ ಎಲ್ಲರೂ ತನ್ನ ಮೂಗಿನ ನೇರದಲ್ಲಿ ನಡೆಯಬೇಕು. ತಾನು ಆಡಿದ್ದೇ ಶ್ರೇಷ್ಠ ಕನ್ನಡ ಉಳಿದವರದ್ದೆಲ್ಲಾ ನಿಕೃಷ್ಠ ಎಂದು ಮೊದಲನೇ ದಿನದಿಂದಲೇ ತೋರಿಸುವ ಪ್ರಯತ್ನ ಮಾಡಿದಾಗ ಸಹಜವಾಗಿಯೇ ಇಡೀ ಮನೆಯವರ ಆಕ್ರೋಶಕ್ಕೆ ಪಾತ್ರರಾಗಿದ್ದಂತೂ ಸುಳ್ಳಲ್ಲ. ಇದನ್ನು ಮಯೂರಿ ಮತ್ತು ಗೊಂಬೆಯವರು ನೇರವಾಗಿ ರೂಪೇಶ್ ರಾಜಣ್ಣನವರ ಬಳಿ ಹೇಳಿದಾಗ ಅದನ್ನು ಕೇಳಿ ಸರಿ ಪಡಿಸಿಕೊಂಡು ಹೋಗುವ ಸೌಜನ್ಯವನ್ನೂ ತೋರದೇ ಹೋದದ್ದನ್ನು ಗಮನಿಸಿ ಅ ಮನೆಯಲ್ಲಿರುವ ಅತ್ಯಂತ ಹಿರಿಯ ಮತ್ತು ಕನ್ನಡದ ನಾಡು ನುಡಿ ಎಲ್ಲದರಲ್ಲೂ ಅತ್ಯಂತ ಹೆಚ್ಚಿನ ಅನುಭವ ಪಡೆದಿರುವ ಅರುಣ್ ಸಾಗರ್ ಸಹಾ ಕನ್ನಡ ಹೋರಾಟ ಎಂದರೆ ಏನು? ಅದನ್ನು ಎಲ್ಲಿ ಹೇಗೆ? ಯಾವರೀತಿಯಲ್ಲಿ ಮಾಡಬೇಕು ಎಂಬುದನ್ನು ಅತ್ಯಂತ ಹೃದಯಕ್ಕೆ ನಾಟುವ ರೀತಿಯಲ್ಲಿ ತಿಳಿಸಿದ್ದರು.

rupesh

ಆದರೆ ಮಾತು ಮಾತಿಗೂ ತಾನೊಬ್ಬ ಹೋರಾಟಗಾರ. ನಾನೇ ಬೇರೇ ನನ್ನ ಸ್ಟೈಲೇ ಬೇರೆ ಎನ್ನುವ ಅಹಂ ಸದಾಕಾಲವೂ ತಲೆಯ ಮೇಲೆ ಹೊತ್ತುಕೊಂಡೇ ತಿರುಗುವ ರಾಜಣ್ಣ ಅದರಿಂದಲೇ ಆಟಗಳಲ್ಲೂ ಆರಂಭದಲ್ಲಿ ಅದರ ಪರಿಣಾಮ ಬೀರಿದ ಪರಿಣಾಮ ಆಟಗಳಲ್ಲಿ ಸೋತಾಗ, ತಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿರುವುದು ವೈಯಕ್ತಿಕವಾಗಿರುವಾಗ ಅಲ್ಲಿನ ಸಮಸ್ತ ಸಾಧಕ ಬಾದಕಗಳಿಗೆ ತಾನೇ ಜವಾಬ್ದಾರನೇ ಹೊರತು ಇದಕ್ಕು ಕನ್ನಡಕ್ಕೂ ಮತ್ತು ಕನ್ನಡಿಗರಿಗೂ ಸಂಬಂಧವೇ ಇಲ್ಲ ಎನ್ನುವ ಇತಿಮಿತಿ‌ಯನ್ನೂ ಅರಿಯದೇ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಇದು ನನಗಾದ ಅವಮಾನಕ್ಕಿಂತ ಕನ್ನಡಿಗರಿಗಾದ ಅವಮಾನ, ಕನ್ನಡ ಹೋರಾಟಗಾರರಿಗೆ ಆದ ಅವಮಾನ,ಎಂದು ಕೂಗಾಡಿದ್ದು ನಿಜಕ್ಕೂ ಬಾಲಿಶ ಎನಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ