ಬೆಂಗಳೂರಿನ ಜಕ್ಕೂರು ಬಳಿಯ ಶ್ರೀರಾಮಪುರ ಕ್ರಾಸ್‌ ಹತ್ತಿರ ಕೆಲವು ತಿಂಗಳುಗಳ ಹಿಂದೆ `ಮಾದರಿ ಪಾರಂಪರಿಕ ಗ್ರಾಮ'ವೊಂದು ತಲೆ ಎತ್ತಿದೆ. ಬೆಂಗಳೂರಿನ ಪ್ರವಾಸಿ ನಕ್ಷೆಯಲ್ಲಿ ಈ ಮೂಲಕ ಸುಂದರ ತಾಣವೊಂದು ಸೇರ್ಪಡೆಯಾದಂತಾಗಿದೆ.

ಕರ್ನಾಟಕ ಸರ್ಕಾರದ ಗ್ರಾಮೀಣಾಭಿೃದ್ಧಿ ಇಲಾಖೆ 11 ಕೋಟಿ ರೂ.ಗಳ ವೆಚ್ಚದಲ್ಲಿ ಈ ಪಾರಂಪರಿಕ ಗ್ರಾಮವನ್ನು ನಿರ್ಮಿಸಿದೆ. ಸಾವಿರಾರು ಶಿಲ್ಪ ಕಲಾವಿದರ 3 ವರ್ಷಗಳ ಅಗಾಧ ಪರಿಶ್ರಮದಿಂದ ಈ ಗ್ರಾಮ ಸೃಷ್ಟಿಯಾಗಿದೆ. ಡಾ. ಬಿ.ಜಿ. ಸೊಲಬಕ್ಕನವರ ಸಮರ್ಥ ನೇತೃತ್ವದಲ್ಲಿ ಈ ಊರಿನ ಒಂದೊಂದು ಶಿಲ್ಪಗಳು ಅರಳಿ ನಿಂತಿವೆ.

ಅವರು ಈ ಮುಂಚೆ ಹಾವೇರಿ ಜಿಲ್ಲೆಯ ಗೊಟಗೋಡಿನಲ್ಲಿ ಉತ್ಸವ ರಾಕ್‌ ಗಾರ್ಡನ್‌ ಸ್ಥಾಪನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರರಾಗಿದ್ದರು. ಆ ಬಳಿಕ ಅವರು ಆಲಮಟ್ಟಿಯಲ್ಲಿ ರಾಕ್‌ ಗಾರ್ಡನ್‌, ಕೃಷ್ಣಾ ಉದ್ಯಾನವನ, ಲವಕುಶ ಉದ್ಯಾನವನ ಹಾಗೂ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಿದರು. 2018ರಲ್ಲಿ ಅವರು ಬೆಂಗಳೂರಿನ ಈ ಅದ್ಭುತ ಹಳ್ಳಿಯ ಕೆಲಸ ಕೈಗೆತ್ತಿಕೊಂಡು 2020ರ ನವೆಂಬರ್‌ನಲ್ಲಿ ಮುಗಿಸಿಕೊಟ್ಟರು. ಅದಾದ ಕೆಲವೇ ದಿನಗಳಲ್ಲಿ ಅವರು ಮೃತರಾದದ್ದು ಮಾತ್ರ ವಿಷಾದದ ಸಂಗತಿ.

ಇಲ್ಲಿ ಏನೇನಿದೆ?

ಇಲ್ಲಿ ಏನೇನಿದೆ ಎನ್ನುವುದಕ್ಕಿಂತ ಇಲ್ಲಿ ಏನಿಲ್ಲ ಎಂದು ಕೇಳಿದರೆ ಹೆಚ್ಚು ಸೂಕ್ತ ಎನಿಸುತ್ತದೆ. ಒಂದು ಹಳ್ಳಿಯ ಜನಜೀವನ ಹೇಗಿರುತ್ತದೆ, ಅಲ್ಲಿನ ವ್ಯವಸ್ಥೆ, ಅಲ್ಲಿನ ದೈನಂದಿನ ಚಟುವಟಿಕೆಗಳ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ಶಿಲ್ಪಗಳಲ್ಲಿ ಸೃಷ್ಟಿಸಲಾಗಿದೆ. ಈ ಮಾದರಿ ಪಾರಂಪರಿಕ ಗ್ರಾಮಕ್ಕೆ ಬರಲು ಯೋಜಿಸುವಿರಾದರೆ ಸಾಕಷ್ಟು ಸಮಯ ಇಟ್ಟುಕೊಂಡು ಬನ್ನಿ.

ಬೆಳಗ್ಗೆ 11ರೊಳಗೆ ಬಂದರೆ ಬಿಸಿಲಿನ ಪ್ರಖರತೆ ಏರುವುದರೊಳಗೆ ನೋಡಿಕೊಂಡು ಹೋಗಬಹುದು. ಇಲ್ಲಿನ ಮಾದರಿ ಗ್ರಾಮದಲ್ಲಿ ಆಯಾ ಮನೆಗಳು ಹಾಗೂ ಪ್ರತಿಯೊಂದು ಘಟಕವನ್ನು ಕೂಲಂಕಷವಾಗಿ ಗಮನಿಸುತ್ತಾ, ಅಲ್ಲಿ ಕೊಟ್ಟಿರುವ ಮಾಹಿತಿ ಫಲಕವನ್ನು ಓದಿದರೆ ಮಾತ್ರ ದೃಶ್ಯ ವೈಭವವನ್ನು ಅರ್ಥ ಮಾಡಿಕೊಳ್ಳಬಹುದು.

ಮಾದರಿ ಗ್ರಾಮದೊಳಗೆ ಹೆಜ್ಜೆಯಿಟ್ಟಾಗ....ಕೌಂಟರಿನಲ್ಲಿ ಟಿಕೆಟ್‌ ಪಡೆದು (50 ರೂ.) ಒಳಗೆ ಹೆಜ್ಜೆ ಇಡುತ್ತಿದ್ದಂತೆ, ಹಳ್ಳವೊಂದರ ಜಗಲಿಕಟ್ಟೆ ನಿಮ್ಮ ಕಣ್ಣಿಗೆ  ಬೀಳುತ್ತದೆ. ಅಲ್ಲಿ ಒಬ್ಬ ತಾತ ಮಲಗಿದ್ದಾನೆ. ಕೆಳಗೆ 4-5 ಜನ ಕಡೆ ಆಟದಲ್ಲಿ ಮಗ್ನರಾಗಿದ್ದಾರೆ. ಆ ನಾಲ್ಕೈದು ಜನರ ಸಮೂಹ ವಿವಿಧ ಧರ್ಮಗಳ ಸಂಗಮವೇ ಆಗಿದೆ. ಆ ಮೂಲಕ ಶಿಲ್ಪಕಲಾ ತಜ್ಞರು ಗ್ರಾಮೀಣ ಭಾಗದ ಭಾವೈಕ್ಯತೆಯನ್ನು ಬಿಂಬಿಸಿದ್ದಾರೆ. ಇನ್ನೊಂದು ಬದಿಯಲ್ಲಿ ಮಕ್ಕಳು ಗೋಲಿ ಆಟದಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ.

ಅಲ್ಲಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ನಾಟಿ ವೈದ್ಯರ ಮನೆ ಕಾಣಿಸುತ್ತದೆ. ಗ್ರಾಮ್ಯ ಭಾಗದಲ್ಲಿ ಜನಪ್ರಿಯನಾಗಿರುವ ಒಬ್ಬ ವೈದ್ಯ ಕೈಗೆ ಕಟ್ಟು ಹಾಕಿ ಸಲಹೆ ಕೊಡುತ್ತಿರುವುದು ಗೋಚರಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿ ಪುಟ್ಟ ಕಿರಾಣಿ ಅಂಗಡಿಯೊಂದರಲ್ಲಿ ವ್ಯಾಪಾರಿ ವ್ಯಾಪಾರದಲ್ಲಿ ಮಗ್ನರಾಗಿರುವುದು ಕಾಣಬರುತ್ತದೆ. ಅದರ ಪಕ್ಕದಲ್ಲಿ ಸಿಂಪಿಗನ ಮನೆ, ಪತ್ತಾರನ ಮನೆಗಳಿವೆ. ಒಂದೆಡೆ ಅಂಗಡಿ, ಇನ್ನೊಂದೆಡೆ ಅವರ ಮನೆಯವರು ಕುಟುಂಬದ ಉದ್ಯೋಗಕ್ಕೆ ಕೈಜೋಡಿಸುತ್ತಿರುವುದು ಎದ್ದು ಕಾಣುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ