ಯುವ ಉದ್ಯಮಿ ಜೈ ಅಗರ್ವಾಲ್ ಅವರು ಪೋರ್ಚುಗಲ್‌ನ 'ಗಾರ್ಡಾ ಎಫ್‌ಸಿ' (Guarda FC) ಫುಟ್‌ಬಾಲ್ ಕ್ಲಬ್‌ನ ಹೆಚ್ಚಿನ ಷೇರುಗಳನ್ನು ಖರೀದಿಸುವುದರ ಜೊತೆಗೆ, ಕ್ಲಬ್‌ನ ಕಾರ್ಯಕಾರಿ ಉಪಾಧ್ಯಕ್ಷರಾಗಿ (Executive Vice-President) ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಫುಟ್‌ಬಾಲ್ ಕ್ರೀಡೆಯ ಮೇಲೆ ಕೇವಲ ಆಸಕ್ತಿ ತೋರುವುದಲ್ಲದೆ, ವಿದೇಶಿ ಕ್ಲಬ್‌ನಲ್ಲಿ ಹೂಡಿಕೆ ಮಾಡಿ ಅದನ್ನು ಕಾರ್ಯರೂಪಕ್ಕೆ ತಂದ ಹೆಗ್ಗಳಿಗೆಗೆ ಅವರು ಪಾತ್ರರಾಗಿದ್ದಾರೆ.

ಕ್ಲಬ್‌ನ ಹೊಸ ಮಾಲೀಕತ್ವದ ಅಡಿಯಲ್ಲಿ, ಜೈ ಅಗರ್ವಾಲ್ ಅವರನ್ನು 'ಗಾರ್ಡಾ ಫುಟ್‌ಬಾಲ್ ಕ್ಲಬ್ – ಎಸ್‌ಎಡಿ' (Guarda FC – SAD) ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಿಸಲಾಗಿದೆ. ಪೋರ್ಚುಗಲ್‌ನಲ್ಲಿ ಕ್ಲಬ್‌ನ ಕ್ರೀಡಾ ಮತ್ತು ವಾಣಿಜ್ಯ ಬೆಳವಣಿಗೆಗೆ ಬೆಂಬಲ ನೀಡಲು ಹಾಗೂ ಅದರ ಅಂತಾರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರು ಕಾರ್ಯತಂತ್ರದ ಪಾಲುದಾರರಾಗಿ (Strategic Partner) ಈ ತಂಡಕ್ಕೆ ಸೇರಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜೈ ಅಗರ್ವಾಲ್, "ತಮ್ಮದೇ ಆದ ಒಂದು ಫುಟ್‌ಬಾಲ್ ಕ್ಲಬ್ ಹೊಂದಬೇಕು ಎಂಬುದು ನನ್ನ ಬಹುಕಾಲದ ಕನಸಾಗಿತ್ತು. ದೊಡ್ಡ ಕ್ಲಬ್‌ಗಳ ಹಿಂದೆ ಬೀಳುವ ಬದಲು, ನಾನೇ ಸ್ವತಃ ಬದಲಾವಣೆ ತರಲು ಸಾಧ್ಯವಿರುವ ಉತ್ತಮ ಪ್ರಾಜೆಕ್ಟ್ ಹುಡುಕುತ್ತಿದ್ದೆ; ಅದು ಗಾರ್ಡಾ ಎಫ್‌ಸಿಯಲ್ಲಿ ಸಿಕ್ಕಿತು. ಏಷ್ಯಾದ ಪ್ರತಿಭಾವಂತ ಯುವ ಆಟಗಾರರಿಗೆ ಯುರೋಪಿಯನ್ ಫುಟ್‌ಬಾಲ್ ಅನುಭವ ಕಲ್ಪಿಸುವುದು ಮತ್ತು ಕ್ಲಬ್ ಅನ್ನು ಯಶಸ್ವಿಯಾಗಿ ಬೆಳೆಸುವುದು ನನ್ನ ಗುರಿ. ಇದು ಭಾರತ ಮತ್ತು ಯುರೋಪ್ ಫುಟ್‌ಬಾಲ್ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಅರ್ಥಪೂರ್ಣ ಹೆಜ್ಜೆಯಾಗುತ್ತದೆ" ಎಂದರು.

ಗಾರ್ಡಾ ಎಫ್‌ಸಿ ಎಸ್‌ಎಡಿ ಅಧ್ಯಕ್ಷರಾದ ಗ್ಯಾಬ್ರಿಯಲ್ ಕ್ಯಾಲ್ಡಿಯೆರಾ ಅಲ್ವೆಸ್ (Gabriel Caldiera Alves) ಮಾತನಾಡಿ, "ಜೈ ಅವರನ್ನು ಗಾರ್ಡಾ ಎಫ್‌ಸಿ ಕುಟುಂಬಕ್ಕೆ ಸ್ವಾಗತಿಸಲು ಅತ್ಯಂತ ಸಂತೋಷವಾಗುತ್ತಿದೆ. ನಮ್ಮ ಮೊದಲ ಸಂಭಾಷಣೆಯಿಂದಲೇ, ಯುವ ಪ್ರತಿಭೆಗಳನ್ನು ಬೆಳೆಸುವ ಮತ್ತು ತನ್ನದೇ ಆದ ಗುರುತು ಹಾಗೂ ಸ್ಥಳೀಯ ಸಮುದಾಯದ ಮೇಲಿನ ಬದ್ಧತೆಯನ್ನು ಉಳಿಸಿಕೊಳ್ಳುವ ಕ್ಲಬ್ ಅನ್ನು ನಿರ್ಮಿಸುವ ನಮ್ಮ ಮಹತ್ವಾಕಾಂಕ್ಷೆಯನ್ನು ಅವರೂ ಹಂಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು. ಅವರ ಜಾಗತಿಕ ದೃಷ್ಟಿಕೋನ, ಉದ್ಯಮಶೀಲತೆಯ ಮನೋಭಾವ ಮತ್ತು ದೀರ್ಘಕಾಲೀನ ದೂರದೃಷ್ಟಿಯು ಕ್ಲಬ್‌ಗೆ ಹೊಸ ಆಯಾಮ ತಂದಿದೆ. ಗಾರ್ಡಾ ಎಫ್‌ಸಿಯ ಈ ಹೊಸ ಅಧ್ಯಾಯವನ್ನು ನಾವು ಒಟ್ಟಾಗಿ ಆರಂಭಿಸುತ್ತಿರುವುದಕ್ಕೆ ಉತ್ಸುಕರಾಗಿದ್ದೇವೆ" ಎಂದರು.

ಸದ್ಯ ಲಾಲಿಗಾ ಬಿಸಿನೆಸ್ ಸ್ಕೂಲ್‌ನಲ್ಲಿ (LaLiga Business School) ಜಾಗತಿಕ ಕ್ರೀಡಾ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (Master's) ಪಡೆಯುತ್ತಿರುವ ಜೈ ಅಗರ್ವಾಲ್, ಕಳೆದ ಕೆಲವು ವರ್ಷಗಳಿಂದ ಯುರೋಪಿಯನ್ ಫುಟ್‌ಬಾಲ್ ರಚನೆಗಳು, ಆಟಗಾರರ ಅಭಿವೃದ್ಧಿ ಮತ್ತು ಕ್ಲಬ್ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಅಧ್ಯಯನ ಮಾಡಿದ್ದಾರೆ. ಯುರೋಪ್‌ನಲ್ಲಿ ಸುಸ್ಥಿರವಾಗಿ ಬೆಳೆಯುವ ಹಾಗೂ ವಿಶ್ವದ ಎಲ್ಲ ಭಾಗಗಳ ಆಟಗಾರರನ್ನು ಪೋರ್ಚುಗಲ್‌ನ ಈ ಭಾಗಕ್ಕೆ ಬಂದು ತರಬೇತಿ ಪಡೆಯಲು, ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಉತ್ತೇಜಿಸುವ ಮಾದರಿಯನ್ನು ಅಭಿವೃದ್ಧಿಪಡಿಸಲು ಅವರು ತಮ್ಮ ಈ ಎಲ್ಲ ಕಲಿಕೆಯನ್ನು ಬಳಸಿಕೊಳ್ಳಲು ಆಶಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ