ಸ್ಪೈಸ್ ಜೆಟ್ ಪ್ರಾಯೋಜಕತ್ವದಲ್ಲಿ ಆರಂಭವಾಗಿರುವ ಅಕ್ಸೆಲ್ ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ರ ಮೊದಲ ದಿನವೇ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತು. ಕಳೆದ ಬಾರಿಯ ರನ್ನರ್-ಅಪ್ ವೇದಾಂತ ಲಿಯೋಪರ್ಡ್ಸ್ ತಂಡವು ಆಸಿ ಮೇವರಿಕ್ಸ್ ಜಾಗುವಾರ್ಸ್ ವಿರುದ್ಧ 18-16 ಅಂತರದಿಂದ ರೋಚಕ ಜಯ ಸಾಧಿಸಿತು.
ಪಂದ್ಯ 1: ಆಸಿ ಮೇವರಿಕ್ಸ್ ಜಾಗುವಾರ್ಸ್ ವಿರುದ್ಧ ವೇದಾಂತ ಲಿಯೋಪರ್ಡ್ಸ್
ದಿನದ ಮೊದಲ ಪಂದ್ಯದಲ್ಲಿ ಜಾಗುವಾರ್ಸ್‌ನ ಅಲೆಜಾಂಡ್ರಾ ಅಲೋನ್ಸೊ ಮತ್ತು ಕ್ಲೌಡಿಯಾ ಜೆನ್ಸೆನ್ ಜೋಡಿಯು, ಲಿಯೋಪರ್ಡ್ಸ್‌ನ ಮಾರ್ತಾ ಒರ್ಟೆಗಾ ಮತ್ತು ವೆರೋನಿಕಾ ವಿರ್ಸೆಡಾ ಅವರನ್ನು ಎದುರಿಸಿತು. ತೀವ್ರ ಪೈಪೋಟಿಯಿಂದ ಕೂಡಿದ ಮಹಿಳಾ ಡಬಲ್ಸ್‌ನಲ್ಲಿ ಜಾಗುವಾರ್ಸ್ 7-5 ಅಂತರದಿಂದ ಮೊದಲ ಸೆಟ್ ಗೆದ್ದುಕೊಂಡಿತು.
ಎರಡನೇ ಸೆಟ್‌ನಲ್ಲಿ ಪ್ರಸಕ್ತ ಸೀಸನ್‌ನ ಮೊದಲ ಟೈ-ಬ್ರೇಕ್ ರೋಚಕತೆ ಕಂಡುಬಂತು. ಈ ಹಂತದಲ್ಲಿ ಇಗ್ನಾಸಿಯೋ ಪಿಯೊಟ್ಟೊ ಮತ್ತು ಎಂಜೊ ಜೆನ್ಸೆನ್ ಜೋಡಿಯು ಡಿಯಸ್ ಸಹೋದರರಾದ ಮಿಗುಯೆಲ್ ಹಾಗೂ ನುನೊ ಅವರನ್ನು ಎದುರಿಸಿತು. ಅತ್ಯಂತ ಎಚ್ಚರಿಕೆಯ ಆಟ ಪ್ರದರ್ಶಿಸಿದ ಲಿಯೋಪರ್ಡ್ಸ್ ಆಟಗಾರರು 7-6 ಅಂತರದಿಂದ ಈ ಸೆಟ್ ಅನ್ನು ವಶಪಡಿಸಿಕೊಂಡರು.
ಅಂತಿಮ ಹಾಗೂ ನಿರ್ಣಾಯಕ ಪುರುಷರ ಡಬಲ್ಸ್‌ನಲ್ಲಿ ಜಾಗುವಾರ್ಸ್‌ನ ಪಾಲ್ ಹೆರ್ನಾಂಡೆಜ್ ಮತ್ತು ಗುಿಲ್ಲೆ ಕೊಲ್ಲಾಡೊ ಜೋಡಿಯು, ಲಿಯೋಪರ್ಡ್ಸ್‌ನ ಫ್ರಾನ್ ಗೆರೆರೊ ಹಾಗೂ ಜಾವಿ ರೂಯಿಜ್ ಅವರ ವಿರುದ್ಧ ಸೆಣಸಾಡಿತು. ಈ ನಿರ್ಣಾಯಕ ಸೆಟ್‌ನಲ್ಲಿ 6-3 ಅಂತರದಿಂದ ಭರ್ಜರಿ ಜಯ ಸಾಧಿಸಿದ ಲಿಯೋಪರ್ಡ್ಸ್, ಒಟ್ಟಾರೆ 18-16 ಅಂತರದೊಂದಿಗೆ ಅದ್ಭುತ ಪುನರಾಗಮನದ ಜಯವನ್ನು ತನ್ನದಾಗಿಸಿಕೊಂಡಿತು.
ಪಂದ್ಯ 2: ವಿಬಿ ರಿಯಾಲ್ಟಿ ಚೀತರ್ಸ್ ವಿರುದ್ಧ ಹಬ್‌ಟೌನ್ ಪನೋರಮಾ ಪಂಥರ್ಸ್
ವಿಬಿ ರಿಯಾಲ್ಟಿ ಚೀತರ್ಸ್ ವಿರುದ್ಧ ಹಬ್‌ಟೌನ್ ಪನೋರಮಾ ಪ್ಯಾಂಥರ್ಸ್ ತಂಡವು ಸಂಪೂರ್ಣ ಆಧಿಪತ್ಯ ಮೆರೆದು 16-9 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದ ಆರಂಭದಲ್ಲಿ ಮೊದಲ ಸೆಟ್ ಅನ್ನು 4-6 ಅಂತರದಿಂದ ಕಳೆದುಕೊಂಡರೂ, ಬಳಿಕ ಅದ್ಭುತವಾಗಿ ಚೇತರಿಸಿಕೊಂಡ ಪ್ಯಾಂಥರ್ಸ್ ತಂಡವು ಮುಂದಿನ ಎರಡು ಸೆಟ್‌ಗಳಲ್ಲಿ 6-1 ಮತ್ತು 6-2 ಅಂತರದ ಭರ್ಜರಿ ಜಯದೊಂದಿಗೆ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಪಂದ್ಯದ ಆರಂಭಿಕ ಸೆಟ್‌ನಲ್ಲಿ ಪಂಥರ್ಸ್‌ನ ಜುವಾನ್ ಟೆಲ್ಲೋ ಮತ್ತು ಎಡ್ವರ್ಡೊ ಅಲೋನ್ಸೊ ಜೋಡಿಯು, ಚೀತರ್ಸ್‌ನ ಲೂಚೊ ಕಪ್ರಾ ಹಾಗೂ ಜೀಸಸ್ ಮೋಯಾ ಅವರನ್ನು ಎದುರಿಸಿತು. ತೀವ್ರ ಹೋರಾಟದ ಬಳಿಕ ಚೀತರ್ಸ್ 6-4 ಅಂತರದಿಂದ ಈ ಸೆಟ್ ಗೆದ್ದುಕೊಂಡಿತು. ನಂತರ ಮಹಿಳಾ ಡಬಲ್ಸ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಪಂಥರ್ಸ್‌ನ ಮಾರ್ತಾ ಕಪಾರೋಸ್ ಮತ್ತು ಮಾರ್ತಾ ಬರೆರಾ ಜೋಡಿಯು, ಅರಾನ್ಜಾಜು ಒಸೊರೊ ಹಾಗೂ ಜುಲಿಯೆಟಾ ಬಿಡಹೊರಿಯಾ ವಿರುದ್ಧ 6-1 ಅಂತರದ ಭರ್ಜರಿ ಜಯ ಸಾಧಿಸಿ ತಂಡಕ್ಕೆ ನಿರ್ಣಾಯಕ ಮುನ್ನಡೆ ತಂದುಕೊಟ್ಟಿತು.
ಪಂದ್ಯದ ಅಂತಿಮ ಹಂತದಲ್ಲಿ ಎನ್ರಿಕ್ ಗೊಯೆಗಾ ಮತ್ತು ರಾಮಾ ವೆಂಕೆಲುಜಾ ಜೋಡಿಯು ಕೋಕಿ ನಿಎಟೊ ಹಾಗೂ ಜಾನ್ ಸಂಜ್ ವಿರುದ್ಧ 6-2 ಅಂತರದ ಅಮೋಘ ಜಯ ಸಾಧಿಸಿ, ಪಂಥರ್ಸ್ ತಂಡಕ್ಕೆ ಒಟ್ಟಾರೆ 16-9 ಅಂತರದ ಸ್ಪಷ್ಟ ಜಯ ತಂದುಕೊಟ್ಟಿತು.





