ರಾಜಸ್ಥಾನದ ನಾಥಧ್ವಾರದಲ್ಲಿ ಅತಿ ಎತ್ತರದ ಹನುಮಂತನ ಪ್ರತಿಮೆ ನಿರ್ಮಾಣ ಪೂರ್ಣಗೊಂಡಿದ್ದು, ಮಾ.26ರಂದು ಅನಾವಣಗೊಳಿಸಲಾಗಿದೆ.

ಉತ್ತರ ಭಾರತದ ಕೆಲವು ಕಡೆ ಮಾ.26ರ ಗುರುವಾರ ರಾಮನವಮಿ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿಮೆಯನ್ನು ಅನಾವಣಗೊಳಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀನಾಥ್​ಜಿ ಮಂದಿರದ ತಿಲಕಾಯತ್​ ರಾಕೇಶ್​ ಮಹಾರಾಜ್​ ಸೇರಿದಂತೆ ಹಲವು ಸಾಧು-ಸಂತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ರಾಜಸಮಂದ್​ ಜಿಲ್ಲೆಯ ನಾಥದ್ವಾರದ ಬಳಿಯ ಗಿರಿರಾಜ್​ ಬೆಟ್ಟದ ಮೇಲೆ ಈ ಪ್ರತಿಮೆ ವಿರಾಜಮಾನಗೊಂಡಿದೆ. ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಎನಿಸಿರುವ “ವಿಶ್ವಾಸ ಸ್ವರೂಪಂ” ಎದುರು ದಕ್ಷಿಣಾಭಿಮುಖ ಹನುಮನ ಪ್ರತಿಮೆ ಸ್ಥಾಪಿಸಲಾಗಿದೆ.

131 ಅಡಿ ಎತ್ತರದ ಈ “ಶ್ರೀ ಶ್ರೀಜಿ ಹನುಮಾನ್​ಜಿ” ಪ್ರತಿಮೆಯು 30 ಕಿ.ಮೀ. ದೂರದಿಂದಲೂ ಕಾಣಿಸುವಷ್ಟು ಎತ್ತರದಲ್ಲಿದೆ.

ಮೂರು ವರ್ಷದ ಶ್ರಮ: 150 ಟನ್​ ತೂಕದ ಪ್ರತಿಮೆ ನಿರ್ಮಾಣಕ್ಕೆ ಕುಶಲಕರ್ಮಿಗಳು ಹಾಗೂ ಎಂಜಿಯರ್​ಗಳ ತಂಡವು ಮೂರು ವರ್ಷಗಳ ಶ್ರಮ ಹಾಕಿದ್ದಾರೆ. ಈ ಬೃಹತ್​ ಪ್ರತಿಮೆಗೆ ಥಾಯ್ಲೆಂಡ್​ನಿಂದ ಆಮದು ಮಾಡಿಕೊಳ್ಳಲಾದ ವಿಶೇಷ ಸುವರ್ಣ ಬಣ್ಣದ ಲೇಪನ ಮಾಡಲಾಗಿದೆ. ಇದರಿಂದ ಅದರ ಹೊಳಪು ದೀರ್ಘಕಾಲ ಉಳಿಯಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ