ಲಾಕ್‌ ಡೌನ್‌ ಕಾರಣ ಡಿ.ಡಿ.ಯಲ್ಲಿ ಹಿಂದೆ ಪ್ರಸಾರವಾಗಿದ್ದ ರಾಮಾಯಣ, ಮಹಾಭಾರತ ಪೌರಾಣಿಕ ಧಾರಾವಾಹಿಗಳು ಮರು ಪ್ರಸಾರ ಆಗುತ್ತಿದ್ದವು. ಮನೆಮಂದಿಯೆಲ್ಲಾ ಆಸಕ್ತಿಯಿಂದ ಇದನ್ನು ವೀಕ್ಷಿಸುತ್ತಿದ್ದರು.

ಮಗ : ಅಪ್ಪ, ರಾಮನಿಗೆ ಮೂರು ಜನ ತಾಯಂದಿರು. ನನಗೇಕೆ ಒಬ್ಬರೇ ಒಬ್ಬರು?

ತಂದೆ : ಅದನ್ನು ನಿಮ್ಮಮ್ಮನ್ನೇ ಕೇಳಪ್ಪ.... ಮಗ ತಾಯಿಯ ಕಡೆ ತಿರುಗಿ ನೋಡಿದ. ಅವಳು ವೈಯಾರದಿಂದ ಗಂಡನ ಕಡೆ ತಿರುಗಿ ನೋಡಿದಳು.

ತಾಯಿ : ಸ್ವಲ್ಪ ಹೊತ್ತಿನ ಮೇಲೆ ಮಹಾಭಾರತ ಬರುತ್ತೆ. ಅದರಲ್ಲಿ ದ್ರೌಪದಿಗೆ ಎಷ್ಟು ಜನ ಗಂಡಂದಿರು ಅಂತ ನಿಮ್ಮಪ್ಪನ್ನೇ ಕೇಳಪ್ಪ.....!

ಪತ್ನಿ : ಹಲೋ..... ಏನ್ರಿ ಕೇಳಿಸ್ತಿದೆಯಾ? ಮನೆಗೆ ಬರುವಾಗ ಬ್ರೆಡ್‌ ತರುವುದನ್ನು ಮರೆಯಬೇಡಿ. ಅಪರೂಪಕ್ಕೆ ನಮ್ಮ ಮನೆಗೆ ನಿಮ್ಮ ಗರ್ಲ್ ಫ್ರೆಂಡ್‌ ದಿವ್ಯಾ ಬಂದಿದ್ದಾಳೆ. ಒಳ್ಳೆ ಸ್ಯಾಂಡ್‌ವಿಚ್‌ ಮಾಡೋಣ ಅಂದುಕೊಂಡೆ.....

ಪತಿ : ಯಾವ ದಿವ್ಯಾನೇ?

ಪತ್ನಿ : ಸುಮ್ಮನೆ ಹೇಳಿದೆ, ಕಣ್ರೀ. ನನ್ನ ಮೆಸೇಜ್‌ ನೀವು ಚೆಕ್‌ ಮಾಡಿದ್ರೋ ಇಲ್ಲವೋ ಅಂತ ಹಾಗೆ ಹೇಳಿದೆ.

ಪತಿ : ಆದರೆ... ನಿನಗೊಂದು ವಿಷಯ ಗೊತ್ತಾ, ಈಗ ನಾನು ದಿವ್ಯಾ ಜೊತೇನೇ ಟೈಂಪಾಸ್‌ ಮಾಡ್ತಾ ಇದ್ದೀನಲ್ಲ.... ನೀನು ನಮ್ಮನ್ನು ನೋಡಿಬಿಟ್ಟೆಯೇನೋ ಅಂತ ಒಂದು ಕ್ಷಣ ಹೆದರಿಕೆ ಆಗ್ಹೋಯ್ತು!

ಪತ್ನಿ : ವಾಟ್‌ ನಾನ್‌ಸೆನ್ಸ್! ಎಲ್ಲಿದ್ದೀರಿ ಈಗ ನೀವಿಬ್ಬರೂ....?

ಪತಿ : ಇಲ್ಲೇ ಕಣೆ..... ನಮ್ಮ ಪಕ್ಕದ ರಸ್ತೆಯ ಬೇಕರಿಯಲ್ಲಿ.

ಪತ್ನಿ : ಅಲ್ಲೇ ಇರಿ..... 2 ನಿಮಿಷದಲ್ಲಿ ಬಂದೆ.

(5 ನಿಮಿಷಗಳ ನಂತರ......) ಪತ್ನಿ : ಎಲ್ಲಿ ಇದ್ದೀರಾ....? ನಾನು ಬೇಕರಿ ಮುಂದೇನೇ ಇದ್ದೀನಿ, ನೀವೆಲ್ಲೂ ಕಾಣಿಸ್ತಿಲ್ಲ.....

ಪತಿ : ಸುಮ್ಮನೆ ನಿನ್ನನ್ನು ಪರೀಕ್ಷಿಸಲು ಹಾಗೇ ಹೇಳಿದ್ದು.... ನಾನು ಆಫೀಸ್‌ನಲ್ಲೇ ಇದ್ದೇನೆ. ಹೇಗೂ ಬೇಕರಿಗೆ ಬಂದಿದ್ದೀಯಾ, ಬ್ರೆಡ್‌ ಜೊತೆ ಬೆಣ್ಣೆ ಬಿಸ್ಕತ್ತು ತಗೊಂಡ್ಹೋಗು!

ಪತಿ ಪತ್ನಿ ಅಪರೂಪಕ್ಕೆ ಕೈಕೈ ಹಿಡಿದು ಸಂಜೆ ಮಾರ್ಕೆಟ್‌ ಕಡೆ ಸುತ್ತಾಡುತ್ತಿದ್ದರು. ಆಗ ಎದುರಿಗೆ ಗಂಡನ ಗೆಳೆಯ ರಾಜು ಎದುರಾದ.

ರಾಜು : ಆಹಾ ಕುಮಾರ್‌..... ಎಷ್ಟು ಅನ್ಯೋನ್ಯ ದಾಂಪತ್ಯ ಕಣಯ್ಯ ನಿಮ್ಮದು! ಮದುವೆಯಾಗಿ 4 ವರ್ಷ ಕಳೆದರೂ ಹೊಸ ಮದುಮಕ್ಕಳಂತೆ ಇನ್ನೂ ಕೈ ಕೈ ಹಿಡಿದುಕೊಂಡು ಓಡಾಡ್ತಾ ಇದ್ದೀರಿ.....

ಕುಮಾರ್‌ : ಕರ್ಮ! ಬಡ್ಕೊಂಡ್ರು ಕಣೋ.... ನನ್ನ ಕೈ ಬಿಟ್ಟರೆ ನಾನು ಎಲ್ಲಿ ದಂ ಹೊಡೆಯಲು ಹೋಗಿಬಿಡ್ತೀನೋ ಅಂತ ಸರ್ಪಗಾಲು ಕಣಯ್ಯ ಅವಳದು (ಮೆಲ್ಲಗೆ ಗೆಳೆಯನ ಕಿವಿಯಲ್ಲಿ ಪಿಸುಗುಟ್ಟಿದ).

ವಾಣಿ : ಒಂಟಿ ಸೀನು ಬಂದ್ರೆ ಅಪಶಕುನ....

ರಾಣಿ : ಅದೇ ರೀತಿ 4-5 ಸೀನು ಬಂದ್ರೆ ಕೊರೋನಾ!

ಟೀಚರ್‌ : ಗುಂಡ, ಎಲ್ಲಿ 1-10 ಎಣಿಸಿ ಹೇಳು ನೋಡೋಣ.

ಗುಂಡ : 1, 2, 3, 5, 6, 7. 8, 9, 10.

ಟೀಚರ್‌ : 4 ಎಲ್ಲೋ? ನೀನು ಹೇಳಲೇ ಇಲ್ಲ.

ಗುಂಡ : ಅದು ಸತ್ತು ಹೋಯ್ತು ಟೀಚರ್‌, ಅದಕ್ಕೆ ಹೇಳಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ