ಸೀನ : ಅವಳು ಆಡಿದ ಒಂದು ಮಾತು.... ಝಾಡ್ಸಿ ಎದೆ ಮೇಲೆ ಒದ್ದಂಗಾತು ನೋಡಪಾ....
ನಾಣಿ : ಅವಳು ಅಂಥದ್ದು ಏನು ಹೇಳಿದಳು?
ಸೀನ : …………..
ರಾಮು : ಈ ಜನರ ರೀತಿ ನೀತಿ ಒಂದೂ ಅರ್ಥ ಆಗಲ್ಲ. ಭಾಳ ವಿಚಿತ್ರ ಮಾಡ್ತಾರಾ....
ಶ್ಯಾಮು : ಅದೇನಾಯ್ತು? ಯಾಕೆ ಹಾಗೆ ಕೊರಗುತ್ತಿದ್ದಿ?
ರಾಮು : ದಿನಾ ಮಾತಾಡ್ತಿದ್ರೆ.... ಏನ್ ತಲೆ ತಿಂತೀಯಾ.... ಮಾಡಕ್ ಬೇರೆ ಏನೂ ಕೆಲಸ ಇಲ್ವಾ ಅಂತಾರೆ. ಯಾವಾಗಲೋ ಒಮ್ಮೆ ಮಾತಾಡ್ತಿದ್ರೆ, ಏನೋ ಭಾರಿ ಬಿಝಿ ಅನ್ನೋ ತರಹ ಆಡ್ತಾನೆ ಅಂತಾರೆ, ಕೆಲಸ ಇದ್ದಾಗ ಮಾತಾಡ್ತಿದ್ರೆ.... ಕೇವಲ ಕೆಲಸ ಇರೋವಾಗ ಮಾತ್ರ ಮಾತಾಡಿಸ್ತಾನೆ ಅಂತಾರೆ, ಆದಷ್ಟೂ ಮಾತಾಡೋದನ್ನು ಕಡಿಮೆ ಮಾಡಿದರೆ ಆಹಾಹಾ, ದುರಂಹಕಾರ ನನ್ನ ಮಗನಿಗೆ ಅಂತಾರೆ!
ಮರಿ ಗುಂಡ : ಯಾಕಪ್ಪ ನಿನ್ನ ತಲೆಗೂದಲ ಎಷ್ಟೋ ಕಡೆ ಬೆಳ್ಳಗಾಗಿದೆ.....?
ಗುಂಡ : ನೀನು ಸುಳ್ಳು ಹೇಳಿದಾಗ, ತಪ್ಪು ಮಾಡಿದಾಗೆಲ್ಲ ಅಪ್ಪನ ತಲೆಗೂದಲು ಹೀಗೆ ಒಂದೊಂದಾಗಿ ಬೆಳ್ಳಗಾಗುತ್ತಿರುತ್ತದೆ....
ಮರಿ ಗುಂಡ : ಓಹೋ.... ಈಗ ಗೊತ್ತಾಯ್ತು.... ತಾತನ ತಲೆ ಯಾಕೆ ಬೋಳಾಗಿದೆ ಅಂತ!
ನೀತಿ : ಮಕ್ಕಳ ಮುಂದೆ ಸ್ಮಾರ್ಟ್ ನೆಸ್ ಬೇಡ!
ಲೀಲಾ : ಒಬ್ಬರನ್ನು ನೋಡಿ ನಕ್ಕರೆ ಅವರ ಗತೀನೇ ನಮಗೂ ಬರುತ್ತೆ ಅಂತಾರೆ.... ಆದರೆ ಇದು ನಿಜ ಅಲ್ಲ.
ಲೀಮಾ : ಹೇಗೆ ಹೇಳ್ತೀಯಾ?
ಲೀಲಾ : ನಾನು ದಿನಾ ಆಲಿಯಾ ಭಟ್, ದೀಪಿಕಾರ ಫೋಟೋ ನೋಡಿ ನಗ್ತೀನಿ, ಅವರ ತರಹ ಹಿರೋಯಿನ್ ಆಗ್ತಿಲ್ವೇ......?
ನಾಗೇಶ್ : ಅಲ್ಲ, ದೇವರು ಪ್ರತ್ಯಕ್ಷನಾಗಿ ನಿನ್ನ ಮುಂದೆ ಬಂದು ನಿಂತು, ಏನು ವರ ಬೇಕಾದರೂ ಕೋರಿಕೋ ಅಂತಂದರೆ, ಏನು ಕೇಳಿಕೊಳ್ತೀಯಾ?
ಮಹೇಶ್ : ಇರು, ಇರು.... ಮೊದಲಿಗೆ ದೇವರು ನಾವು ಇರುವ ಕಡೆಗೆ ಬಂದು ವರ ಕೊಡ್ತಿದ್ದಾನೋ ಅಥವಾ ನಾವೇ ದೇವರು ಇರುವ ಕಡೆಗೆ ಹೋಗಿದ್ದೇವೋ ಅಂತ ಖಚಿತಪಡಿಸಿಕೊಳ್ಳಬೇಕು.
ಮಗು : ಅಮ್ಮ ಗಾಂಧಿ ತಾತನ ತಲೆ ಯಾಕೆ ಬೋಳಾಗಿದೆ?
ತಾಯಿ : ಯಾಕಂದ್ರೆ ತಾತಾ ಸದಾ ಸತ್ಯವನ್ನೇ ಹೇಳ್ತಿದ್ದರು.....
ಮಗು : ಓಹೋ.... ಈಗ ಗೊತ್ತಾಯ್ತು.... ಯಾಕೆ ಹೆಂಗಸರಿಗೆಲ್ಲ ಅಷ್ಟು ಉದ್ದದ ಕೂದಲು ಇರುತ್ತೆ ಅಂತ.....
ಟೀಚರ್ : ಸೀನ, ನಿನ್ನ ವಯಸ್ಸೆಷ್ಟು?
ಸೀನ : ನನಗೆ ಈಗ 10 ವರ್ಷ.
ಟೀಚರ್ : ಮತ್ತೆ ನಿನ್ನ ಅಪ್ಪನ ವಯಸ್ಸು ಎಷ್ಟು?
ಸೀನ : ಅವರಿಗೂ 10 ವರ್ಷ ಅಷ್ಟೇ!
ಟೀಚರ್ : ಏನೋ ಇದು? ಇದು ಹೇಗೆ ಸಾಧ್ಯ?
ಸೀನ : ಅವರು ಅಪ್ಪ ಆಗಿದ್ದೇ ನಾನು ಹುಟ್ಟಿದ ಮೇಲೆ ತಾನೇ.....?
ಸುರೇಶ್ : ಅಲ್ಲ.... ಸೌದಿ ಅರೇಬಿಯಾ ಮತ್ತು ಇನ್ನಿತರ ಕೊಲ್ಲಿ ರಾಷ್ಟ್ರಗಳಲ್ಲಿ ಚದುರಂಗ (ಚೆಸ್) ಆಟವನ್ನು ದೊಡ್ಡ ಮಟ್ಟದಲ್ಲಿ ಬ್ಯಾನ್ ಮಾಡುತ್ತಾರೆಂಬ ವದಂತಿ ಇದೆ. ಹೌದಾ....?
ಮಹೇಶ್ : ಇರಬಹುದೇನೋ.... ಏಕೆಂದರೆ ಚದುರಂಗದಾಟದಲ್ಲಿ ರಾಣಿ ಬುರ್ಖಾ ಧರಿಸುವುದಿಲ್ಲ, ಹಿಜಾಬ್ ಇಲ್ಲವೇ ಇಲ್ಲ. ರಾಣಿ ಇಡೀ ಹಾಸಿನಲ್ಲಿ ಎಲ್ಲೆಂದರಲ್ಲಿ ಫ್ರೀಯಾಗಿ ಸುತ್ತಾಡಬಹುದು. ರಾಣಿ ರಾಜನಿಗಿಂತಲೂ ಬಲು ಶಕ್ತಿಶಾಲಿ! ಒಬ್ಬಳೇ ಶತ್ರು ಪಕ್ಷಕ್ಕೂ ನುಗ್ಗಬಹುದು, ಎಲ್ಲಕ್ಕೂ ಮುಖ್ಯ ಅಂದ್ರೆ.... ರಾಜನಿಗೆ ಇಲ್ಲಿ ಒಬ್ಬಳೇ ರಾಣಿ!