ರವಿ : ನೋಡಿದ್ಯಾ, ನಮ್ಮ ಕ್ಲಾಸಿಗೆ ಬಂದಿರೋ ಹೊಸ ಹುಡುಗಿ ನನ್ನ ಕಡೆ ನೋಡಿ ನಗುತ್ತಿದ್ದಾಳೆ.....
ರಾಜು : ಪುಣ್ಯಕ್ಕೆ ಅವಳು ನಿನ್ನ ಮುಸುಡಿ ನೋಡಿ ನಕ್ಕಳಷ್ಟೆ. ಬೇರೆಯವಳಾಗಿದ್ದರೆ ಇಂಥ ದರಿದ್ರ ಮುಖ ಕಂಡು ನಾಲ್ಕು ತದುಕಿರೋಳು, ಹುಷಾರ್..... ಮತ್ತೆ ಅವಳ ಕಡೆ ಹಲ್ಲು ಕಿಸಿಯಬೇಡ.
ಮದುವೆಯಾದ ಹೊಸತು. ಹೊಸ ಸೊಸೆ ಏನೇನೋ ಸರ್ಕಸ್ ಮಾಡಿ ಅತ್ತೆ ಮನೆಯವರನ್ನು ತನ್ನ ಪಾಕಕಲೆಯಿಂದ ಇಂಪ್ರೆಸ್ ಮಾಡಲು ಯತ್ನಿಸುತ್ತಿದ್ದಳು. ಪ್ರತಿ ಸಲ ಅವಳು ಪುಸ್ತಕ ಓದಿಕೊಂಡು, ಅದರಲ್ಲಿ ಬರೆದಿರುವಂತೆ ರೆಸಿಪಿ ತಯಾರಿಸುತ್ತಿದ್ದಳು.
ಒಂದು ದಿನ ಮಹಿಳಾ ಸಮಾಜದಿಂದ ಹಿಂದಿರುಗಿದ ಅತ್ತೆ, ತಣ್ಣೀರು ಕುಡಿಯಲೆಂದು ಫ್ರಿಜ್ ತೆರೆದಾಗ ಹೌಹಾರಿದರು!
ಅತ್ತೆ : ಇದೇನಮ್ಮ ತಾರಾ, ಈ ಫ್ರಿಜ್‌ನಲ್ಲಿ ಘಂಟೆ ತಂದು ಇಟ್ಟವರು ಯಾರು?
ಸೊಸೆ : ನಾನೇ ಅತ್ತೆ!
ಅತ್ತೆ : ಅದ್ಯಾಕಮ್ಮ ಹಾಗೆ ಮಾಡಿದೆ?
ಸೊಸೆ : ಈ ಪುಸ್ತಕದಲ್ಲಿ ಹಾಗೆ ಕೊಟ್ಟಿದ್ದಾರೆ ಅತ್ತೆ, ಮಿಶ್ರಣ ಕಲಸಿದ ಮೇಲೆ 1 ಗಂಟೆ ಫ್ರಿಜ್ ನಲ್ಲಿ ಇರಿಸಿ ಅಂತ.... ಆದರೆ ಎಷ್ಟು ಹೊತ್ತು ಆ ಘಂಟೆ ಫ್ರಿಜ್ ನಲ್ಲಿರಬೇಕೋ ತಿಳಿಯದೆ, ಬೆಳಗ್ಗಿನಿಂದ ಕಾಯ್ತಾನೇ ಇದ್ದೀನಿ....
ಜಡ್ಜ್ : ನೋಡ್ರಿ, ಕೋರ್ಟ್ ನಲ್ಲಿ ಸಾಬೀತು ಪಡಿಸಲಾದ ಎಲ್ಲಾ ಸಾಕ್ಷ್ಯಾಧಾರಗಳ ಪ್ರಕಾರ, ನೀವು ನಿಮ್ಮ ಹೆಂಡತಿಯನ್ನು 10 ವರ್ಷಗಳಿಂದ ಕಮಕ್ ಕಿಮಕ್ ಎಂದು ಬಾಯಿಬಿಡದಂತೆ ನಿಮ್ಮ ಕಂಟ್ರೋಲ್ ನಲ್ಲೇ ಇಟ್ಟುಕೊಂಡು ಶೋಷಣೆ ನಡೆಸಿದ್ದೀರಿ ಅನ್ನೋದು ಸ್ಪಷ್ಟವಾಗಿದೆ....
ಆಪಾದಿತ : ಹೌದು ಸ್ವಾಮಿ.... ಆದರೆ ವಿಷಯ ಏನೂ ಅಂದ್ರೆ.....
ಜಡ್ಜ್ : ಶಿಕ್ಷೆ ಮನೆ ಹಾಳಾಯ್ತು! ಯಾವ ವಿಧಾನದಿಂದ ಹೀಗೆ ಕಂಟ್ರೋಲ್ ನಲ್ಲಿಡ್ತೀಯಾ ಅಂತ ಮೊದಲು ಹೇಳಯ್ಯ....
ಹುಡುಗಿಯ ಹೆತ್ತವರು : ನೋಡಿ.... ನಿಮ್ಮ ಹುಡುಗ ಸ್ವಲ್ಪ ಇಷ್ಟ ಆಗಲಿಲ್ಲ...
ಹುಡುಗನ ಹೆತ್ತವರು : ನಮಗೂ ಇಷ್ಟವಿಲ್ಲ. ಏನು ಮಾಡೋದು? ಅವನನ್ನ ಮನೆಯಿಂದ ಓಡಿಸಲು ಆಗುತ್ತದೆಯೇ?
ಗುಂಡ ಚೆಕ್ ಎನ್ ಕ್ಯಾಶ್ ಮಾಡಿಕೊಳ್ಳಲು ಬ್ಯಾಂಕ್ ನಲ್ಲೇ 2 ಗಂಟೆ ಕಾಲ ಕಾದಿದ್ದೇ ಬಂತು. ಅಂತೂ ಅವನ ಟೋಕನ್ ನಂಬರ್ ಕೂಗಿದಾಗ ಹೊಟ್ಟೆಯಲ್ಲಿ ಇಲಿಗಳು ಓಡಾಡುತ್ತಿದ್ದವು. ಕ್ಯಾಶಿಯರ್ ಬಳಿ ಹೋದವನೇ ಗುಂಡ ರೇಗಾಡಿದ.
ಗುಂಡ : ರೀ, ಬೇಗ ದುಡ್ಡು ಕೊಡ್ರಿ! ಕಾದೂ ಕಾದೂ ಸಾಕಾಗಿದೆ....
ಕ್ಯಾಶಿಯರ್ : ದುಡ್ಡು ಇಲ್ಲ ಕಣ್ರೀ....!
ಗುಂಡ : ಆ ಹಾಳಾದ ಮಲ್ಯ, ನಿರ್ಮಲ್ ಮೋದಿ ಮುಂತಾದವರಿಗೆ ನಿಮ್ಮ ಬ್ಯಾಂಕಿನಿಂದಲೇ ಕೋಟಿ ಕೋಟಿ ಬಾಚಿಕೊಟ್ಟಿರಿ. ಅದನ್ನು ತಗೊಂಡು ಸಾಲ ತೀರಿಸಲಾಗದೆ ಅವರು ನಮ್ಮ ದೇಶ ಬಿಟ್ಟು ಓಡಿಹೋದ್ರು. ಅದೆಲ್ಲ ನನಗೆ ಗೊತ್ತಿಲ್ಲ, ಮೊದಲು ನನಗೆ ದುಡ್ಡು ಕೊಡಿ!
ಕ್ಯಾಶಿಯರ್ : ಅಯ್ಯೋ... ಬ್ಯಾಂಕ್ ನಲ್ಲಿ ದುಡ್ಡು ಇದೆ, ಆದ್ರೆ ನಿನ್ನ ಖಾತೇಲಿ ದುಡ್ಡಿಲ್ಲ!
ಮಹೇಶ : ಏನೋ ಮುಂದಿನ ವಾರ ನಾಣಿ ಮದುವೆಗೆ ನೀನು ಉಡುಪಿಗೆ ಬರೋದು ಗ್ಯಾರಂಟಿ ತಾನೇ.....?