ಒಂದು ಸಣ್ಣ ವಿಷಯ ನಿಮ್ಮ ಗಮನಕ್ಕೆ !! ದಿನಾಂಕ 23/02/2025ನೇ ಭಾನುವಾರದಂದು ಭೈರಪ್ಪನವರ ಹುಟ್ಟೂರು ಸಂತೆಶಿವರದಲ್ಲಿ :ನಮ್ಮಭೈರಪ್ಪ ನಮ್ಮ ಹೆಮ್ಮೆ:, ಎಂಬ ಭೈರಪ್ಪನವರನ್ನು ಅಭಿವಂದಿಸುವ ಕಾರ್ಯಕ್ರಮ ಅಯೋಜನೆ ಆಗಿದೆ.ಈ ಕಾರ್ಯಕ್ರಮದ ಅತೀ ಮುಖ್ಯ ಉದ್ದೇಶ ಒಂದು ಅಂಗೈ ಅಗಲದ ಕೃಷಿ ಭೂಮಿ ತನ್ನೂರಲ್ಲಿ ಇಲ್ಲದಿದ್ದರೂ ನನ್ನೂರಿನ,ನನ್ನ ಸುತ್ತಮುತ್ತಲಿನ ಊರುಗಳ ಜನರಿಗೆ ನೀರಿನ ಅನುಕೂಲ ಆಗಬೇಕು ಎನ್ನುವ ಒತ್ತಾಸೆಯಿಂದ 4 ವರ್ಷದಿಂದ ಸತತವಾಗಿ ಸರ್ಕಾರಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಈ ವರ್ಷ ಸಂತೆಶಿವರ ಮತ್ತು ಬೆಳುಗುಲಿಅಗ್ರಹಾರದ ಕೆರೆಗಳಿಗೆ ನೀರು ಹರಿಸುವ ಮೂಲಕ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳ ಅಂತರ್ಜಲದ ಮಟ್ಟ ಏರಿಸಲು ಸಹಕರಿಸಿದ್ದಾರೆ.ಅದಕ್ಕಾಗಿ ಸುತ್ತ ಮುತ್ತಲಿನ ಊರುಗಳ ಎಲ್ಲಾ ಗ್ರಾಮಸ್ತರು ಅವರನ್ನು ಅಭಿವಂದಿಸಲು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಸಿ ಎನ್ ಬಾಲಕೃಷ್ಣ ಸಾರ್,ತಾಲ್ಲೂಕು ಆಡಳಿತ,ಹಾಗು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅಯೋಜಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಬೇಕು ಎಂಬ ಆಸೆಯಿಂದ ಭೈರಪ್ಪನವರ ಅಭಿಮಾನಿಗಾಳಾಗಿ ಒಂದೆರಡು ಸಣ್ಣಪುಟ್ಟ ಕಾರ್ಯಗಳನ್ನು ಅಯೋಜಿಸಲಾಗುತ್ತಿದೆ.
1 ಭೈರಪ್ಪನವರ 26 ಕಾದಂಬರಿಗಳ ಟ್ಯಾಬ್ಲೊಗಳನ್ನು ಮೆರವಣಿಗೆ ಮಾಡುವುದು, ಅದರಲ್ಲಿ ಮೂಲ ಕಾದಂಬರಿಯ ಮುಖಪುಟ,ಹಿಂಪುಟ,ಅದು ಬಿಡುಗಡೆಯಾದ ವರ್ಷ, ಇಲ್ಲೀವರೆಗು ಆಗಿರುವ ಮರುಮುದ್ರಣಗಳು,ಅದು ತರ್ಜುಮೆಯಾಗಿರುವ ಬಾಷೆಗಳ ವಿವರದ ಜೊತೆಗೆ, ಅದನ್ನು ಪ್ರಾಯೋಜಿಸುವವರ ವಿವರವಿರುತ್ತದೆ.
2 ಕಲಾಪ್ರಕಾರಗಳ ಪ್ರದರ್ಶನ ಮತ್ತು ಮೆರವಣಿಗೆ.
3 ಸಂಜೆ ಕುರುಕ್ಷೇತ್ರ ನಾಟಕದ ಪ್ರದರ್ಶನ. ಮೊದಲೆ ಹೇಳಿದಂತೆ ಇದೆಲ್ಲವು ನಿಮ್ಮ ಗಮನಕ್ಕೆ,ಈ ಕಾರ್ಯಕ್ರಮಗಳಿಗೆ ಅಭಿಮಾಗಳಾಗಿ ನಾವು ನಮ್ಮ ನೆರವನ್ನು ನೀಡುತ್ತೇವೆ,ನಮಗು ಅವಕಾಶವಿದ್ದರೆ ಮಾಡುತ್ತೇವೆ ಎನ್ನುವ ಸಹೃದಯಿ ಮನಸುಗಳಿಗಾಗಿ,ಯಾವುದೇ ಒತ್ತಾಯವಿಲ್ಲ,ಅಮಿಷಗಳಿಲ್ಲ,ನನಗು ಗೊತ್ತಾಗಿದ್ದರೇ ನಾನು ಏನಾದರು ಮಾಡುತ್ತಿದ್ದೆ ಎನ್ನುವ ಹಳಹಳಿ ಆಗಬಾರದು ಅನ್ನುವ ಕಾರಣಕ್ಕೆ ನಿಮ್ಮೇಲ್ಲರ ಗಮನಕ್ಕು ತರುತ್ತಿದ್ದೇನೆ.ಇದರಾಚೆಗೆ ಅಂದು ನಾವೆಲ್ಲರೂ ಸೇರಿ ನಮ್ಮ ಪ್ರೀತಿ,ಅಭಿಮಾನ,ಗೌರವದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
- ಎಸ್ ಎಲ್ ಭೈರಪ್ಪ ಕಾದಂಬರಿ ಅಭಿಮಾನಿಗಳ ಕೂಟ