ಕಾಲೇಜಿನ ಬ್ಯೂಟಿ ಕ್ವೀನ್‌ ದಿವ್ಯಾ ಸದಾ ಕೊಚ್ಚಿಕೊಳ್ಳುತ್ತಿದ್ದುದು ಎಂದರೆ, ತಾನು ಮುಂದೆ ಸೂಪರ್‌ ಮಾಡೆಲ್ ‌ಆಗ್ತೀನಿ ಅಂತ.

ಎಷ್ಟೋ ವರ್ಷಗಳ ನಂತರ ಮಂಡ್ಯದಲ್ಲಿ ಅವಳನ್ನು ಕಂಡ ಗುಂಡ ದಂಗಾದ. ಬೆಲೂನು ಮಾರುವವನ ಹತ್ತಿರ ಅವಳು, ``ನೋಡಪ್ಪಾ 10/ ರೂ.ಗೆ 3 ಬೆಲೂನು ಕೊಟ್ಟರೆ ಮಾತ್ರ ನನ್ನ ಮೂವರು ಮಕ್ಕಳಿಗೂ ಅದನ್ನು ಕೊಡಿಸ್ತೀನಿ,'' ಅಂತ ಹೇಳುತ್ತಿದ್ದಳು.

 

ಈ ಜನ ನಿಜಕ್ಕೂ ಎಷ್ಟು ನಿರ್ದಯಿಗಳು! ನಿನ್ನೆ ತಾನೇ ನಾನು ಹೈಸ್ಕೂಲಿನಿಂದ ಪ್ರೇಮಿಸುತ್ತಿದ್ದ ಹುಡುಗಿ, ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಂಡು ಹೊರಟು ನಿಂತಿದ್ದಳು. ದುಃಖ ಮರೆತು ನಾನು ಎಲ್ಲರಿಗೂ ಬಡಿಸಲು ನಿಂತರೆ, `ಇನ್ನಷ್ಟು ಮೃದುವಾದ ಪೂರಿ ತಗೊಂಬಾರಪ್ಪ,' ಎಂದು ನನ್ನನ್ನೇ ಗದರುವುದೇ?

 

ಪೊಲೀಸ್‌ : ಈ ಸಲ ಪಾಪ ಅಂತ ನಿನ್ನನ್ನು ಬಿಟ್ಟುಬಿಡ್ತೀನಿ, ಮುಂದೆ ಎಂದೂ ಇಂಥ ಜೇಬು ಕತ್ತರಿ ಕೆಲಸ ಮಾಡಲ್ಲ ಅಂತ ಪ್ರಾಮಿಸ್‌ ಮಾಡು!

ಕಳ್ಳ : ನಾನು ಖಂಡಿತಾ ಪ್ರಾಮಿಸ್‌ ಮಾಡ್ತೀನಿ, ಮುಂದೆ ನಿಂತು ಇಂಥ ಕೆಲಸ ಮಾಡಲ್ಲ, ಜನರ ಹಿಂದೆ ನಿಂತೇ ಈ ರೀತಿ ಮಾಡ್ತೀನಿ!

 

ವಧುವರನ ಜಾತಕ ಹೊಂದಾಣಿಕೆ ಆಗಿ ಬಂತು. ಶಾಸ್ತ್ರೀಗಳು ಮದುವೆ ಲಗ್ನ ಕುದುರಿಸಿ, 36 ಗುಣಗಳು ಕೂಡಿ ಬಂದಿವೆ ಎಂದರು. ಆದರೆ ಮಾರನೇ ದಿನ ವರನ ಕಡೆಯಿಂದ ಈ ಮದುವೆ ಬೇಡ ಅಂತ ನಿರಾಕರಣೆ ಬರುವುದೇ?

ವಧು ತಂದೆ : 36 ಗುಣಗಳು ಕೂಡಿ ಬರುತ್ತಿವೆ ಅಂತ ಶಾಸ್ತ್ರೀಗಳು ಖಚಿತವಾಗಿ ಹೇಳಿದ ಮೇಲೂ ಇದೇಕೆ ಮದುವೆ ಕ್ಯಾನ್ಸಲ್ ಮಾಡಿದಿರಿ?

ವರನ ತಂದೆ : ನಮ್ಮ ಮಗನಿಗೆ ಎಂಥ ಲೋಫರ್‌ ಬುದ್ಧಿ ಇದೆ ಎಂದು ನಮಗೆ ಗೊತ್ತು. ಸೊಸೆಯೂ ಹಾಗೇ ಆಗಿಹೋದರೆ ಮುಂದೆ ನಮ್ಮ ಗತಿ.....?

 

ಪುಟ್ಟ ಮಲ್ಲಿಕಾ ಅಂಗಡಿಗೆ ಹೋಗಿ ಹೇಳಿದಳು, ``ಏನ್ರಿ, ಮುಂದೆ ನಾನು ದೊಡ್ಡವಳಾದ ಮೇಲೆ ನನ್ನನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ತೀರಾ?''

ಅಂಗಡಿಯವನು ಅದಕ್ಕೆ, ``ಅಷ್ಟೇ ತಾನೆ.... ನೀನೇ ನಮ್ಮ ಮನೆ ಸೊಸೆ ಕಣಮ್ಮ!'' ಎಂದ.

``ಹಾಗಾದರೆ ನಿಮ್ಮ ಭಾವಿ ಸೊಸೆ ಬಳಿ ಕಾಸು ಯಾಕೆ ಕೇಳ್ತೀರಾ? ನನಗೆ 2 ಚಾಕಲೇಟ್‌ ಕೊಡಿ,'' ಎನ್ನುವುದೇ?

 

ನಾಣಿ ಹೋಗಿ ಎಕ್ಸ್-ರೇ ಮಾಡಿಸಿಕೊಂಡು ಬಂದ.

ಡಾಕ್ಟರ್‌ : ಈ ಎಕ್ಸ್-ರೇನಲ್ಲಿ ನಿಮ್ಮ ಕಾಲಿನ ಒಂದು ಮೂಳೆ ಮುರಿದಿದೆ ಅಂತ ಕಂಡು ಬರುತ್ತಿದೆ.

ನಾಣಿ : ಸಧ್ಯ! ಎಕ್ಸ್-ರೇನಲ್ಲಿ ತಾನೇ....? ಅಸಲಿಗೆ ನನ್ನ ಕಾಲು ಮುರಿದಿಲ್ಲ ತಾನೇ?

 

ಪತ್ನಿ : ಕಾಲೇಜಿನಲ್ಲೆಲ್ಲ ನನಗೆ ಏನು ಹೇಳ್ತಿದ್ದರು ಗೊತ್ತಾ? ಆ ಭಗವಂತ ನನ್ನನ್ನು ಪುರಸತ್ತಾಗಿದ್ದಾಗ ಸೃಷ್ಟಿಸಿದನಂತೆ!

ಪತಿ : ಅದು ನಿಜ ಬಿಡು! ಪುರಸತ್ತಾಗಿದ್ದಾಗ ತಾನೇ ಅನಗತ್ಯ ಕೆಲಸ ಮಾಡಲು ತೋಚೋದು?

 

ಕೆಲಸದ ನಿಂಗಿ : ಮೇಡಂ ಬೇಗ ಬನ್ನಿ, ನಿಮ್ಮ ಮಗು ಸೊಳ್ಳೆಗಳನ್ನು ನುಂಗಿಬಿಟ್ಟಿದ್ದಾನೆ!

ಕವಿತಾ : ಇನ್ನು ಅರ್ಧ ಗಂಟೇಲಿ ಬಂದುಬಿಡ್ತೀನಿ, ಮಗೂನಾ ಸ್ವಲ್ಪ ಹುಷಾರಾಗಿ ನೋಡಿಕೋ! ಬೇಗ ಡಾಕ್ಟರಿಗೆ ಫೋನ್‌ ಮಾಡಿ ಮನೆಗೆ ಕರೆಸು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ