ಸೀನ ಪಾರ್ಕಿನಲ್ಲಿ ಕುಳಿತು ಜೋರಾಗಿ ಬಿಕ್ಕಳಿಸುತ್ತಿದ್ದ. ``ನಾನು ನನ್ನ ಹೆಂಡತಿಯಿಂದ 5 ತಿಂಗಳ ಹಿಂದೆ 3 ಸಾವಿರ ಹಣ ಸಾಲ ಪಡೆದಿದ್ದೆ. ಅದನ್ನು 3 ಸಲ ಮರಳಿಸಿದರೂ, ಅದು ಬಡ್ಡಿಗಾಯ್ತು.... ಇನ್ನೂ ಅಸಲು 3 ಸಾವಿರ ಉಳಿದಿದೆ ಅಂತಾಳಲ್ಲ.... ಏನು ಮಾಡಲಿ?''
ಇವನಿಗೆ ಸಮಾಧಾನ ಹೇಳಿದ ನಾಣಿ, ``ಅದಕ್ಕೆ ಹೇಳೋದು.... ಹೆಂಡತಿ ಹತ್ತಿರ ಎಂದೂ ಸಾಲ ಮಾಡಬಾರದು ಅಂತ!''
ಪುಂಡ ಪೋಕರಿಗಳ ತಲೆನೋವಿನ ಮೆಸೇಜ್ ಗಳಿಂದ ಪಾರಾಗುವುದು ಹೇಗೆ? ಇಲ್ಲಿದೆ ಒಂದು ಉದಾ :
ಮಜ್ನು : ಮೋಸ ಮಾಡಲೆಂದೇ ಬುವಿಗೆ ಬಂದೆಯಾ? ನನ್ನ ಹೃದಯ ಸುಟ್ಟು ನೀನು ಬೂದಿ ಮಾಡಿಬಿಟ್ಟೆಯಾ......?
ರಜನಿ : ಏನೂ ಲಾಸ್ ಆಗಲ್ಲ ಬಿಡು, ಆ ಬೂದಿ ನನ್ನ ಕಾಲೇಜ್ ವಿಳಾಸಕ್ಕೆ ಕಳಿಸು, ಪಾತ್ರೆ ತೊಳೆಯಲು ಬಳಸಿಕೊಳ್ಳುತ್ತೇವೆ!
ಗಂಡ ಹೆಂಡತಿ ಅಪರೂಪಕ್ಕೆ ಹೋಟೆಲ್ ಗೆ ಡಿನ್ನರ್ ಗೆಂದು ಬಂದಿದ್ದರು. ಊಟ ಮುಗಿದ ಮೇಲೆ ಎಂದಿನಂತೆ ಗಂಡ ತಟ್ಟೆ, ಬಟ್ಟಲು ತೊಳೆಯಲೆಂದು ಎಲ್ಲವನ್ನೂ ಜೋಡಿಸತೊಡಗಿದ.
ಇದರಿಂದ ಕುಪಿತಳಾದ ಹೆಂಡತಿ ಕಿರುಚಿದಳು, ``ಇದೇನು ಮನೇನಾ? ಬಂದಿರೋದು ಹೋಟೆಲ್ ಗೆ ಅಂತ ನೆನಪಿಡಿ!''
ಬೀರುವಿನ ಮೇಲಿದ್ದ ಹಳೆ ಪೇಪರ್ ಗಳ ಮಧ್ಯೆ ಹೆಂಡತಿಯ ಶಾಲೆಯವರು ಅವಳ ನಡತೆ ಬಗ್ಗೆ ನೀಡಿದ್ದ ಸರ್ಟಿಫಿಕೇಟ್ ಓದತೊಡಗಿದ ಗುಂಡ.
`ಮಧುರಭಾಷಿಣಿ, ಶಾಂತಪ್ರಿಯೆ, ಬೆರೆತುಕೊಳ್ಳುವ ಸ್ವಭಾವ, ಹೊಂದಾಣಿಕೆಯ ಗುಣ.....' ಇದನ್ನು ಜೀರ್ಣಿಸಿಕೊಳ್ಳಲಾರದ ಗುಂಡ ಮೂರ್ಛೆ ಹೋದ.
ಡಾಕ್ಟರ್ : ನೋಡ್ರಿ ಮೂರ್ತಿ, ಈ ವಿಷಯ ಈಗ ತಾನೇ ಮೆಡಿಕಲ್ ರಿಪೋರ್ಟ್ ನಿಂದ ಕನ್ ಫರ್ಮ್ ಆಗಿದೆ. ನಿಮ್ಮ ಹೆಂಡತಿ ಕೇವಲ ಈ ಭೂಮಿಯಲ್ಲಿ ಇನ್ನು 2-3 ತಿಂಗಳ ಅತಿಥಿ ಮಾತ್ರ....
ಮೂರ್ತಿ : ಓಹ್ ನೋ... ಇದು ನಿಜಾನಾ ಡಾಕ್ಟರ್!
ಡಾಕ್ಟರ್ : ಹೌದು ರೀ, ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಿ ಮಿಸ್ಟರ್, ಈ ಕಷ್ಟ ನಿಮಗೆ ಬರಬಾರದಿತ್ತು!
ಮೂರ್ತಿ : ಅಯ್ಯೋ ಬಿಡಿ, ಕಳೆದ 12 ವರ್ಷಗಳಿಂದ ಸಂಭಾಳಿಸಿದ್ದೇನೆ, ಇನ್ನೇನು 2-3 ತಿಂಗಳು ತಾನೇ...?
ಬಾಯ್ ಫ್ರೆಂಡ್ : ಸಂಗೀತಕ್ಕೆ ನಿಜಕ್ಕೂ ಅಪಾರ ಶಕ್ತಿ ಇದೆ. ತಾನ್ ಸೇನ್ ಅಂಥವರು ದೀಪಕ ರಾಗ ಹಾಡಿದರೆ, ದೀಪ ತಾನೇ ಹೊತ್ತಿ ಉರಿಯುತ್ತಿತ್ತು..... ಮೇಘಮಲ್ಹಾರ ಹಾಡಿದರೆ ಮಳೆ ತಾನಾಗಿ ಸುರಿಯುತ್ತಿತ್ತು....
ಗರ್ಲ್ ಫ್ರೆಂಡ್ : ನಿಜಕ್ಕೂ ಹೌದೇ?
ಬಾಯ್ ಫ್ರೆಂಡ್ : ನಿನಗೆ ಗೊತ್ತೇ? ತೋಡಿ ರಾಗದಲ್ಲಿ ಹಾಡಿದರೆ ತಣ್ಣೀರು ಸಹ ಬಿಸಿಯಾಗಿ ಬಿಡುತ್ತಂತೆ!
ಗರ್ಲ್ ಫ್ರೆಂಡ್ : ನಿನ್ನ ಗಾರ್ದಭ ಗಾಯನ ಕೇಳಿ ನನ್ನ ರಕ್ತವೇ ಕುದಿಯುತ್ತಿದೆ, ಹಾಗಿರುವಾಗ ನೀರು ಬಿಸಿ ಆಗುವುದೇನು ಮಹಾ....?
ಪತ್ನಿ : ನೋಡಿ, ನಾಳೆ ಇಡೀ ದಿನ ಪೂರ್ತಿ ನಾನು ನಿಮ್ಮ ಜೊತೆ ಮಾತೇ ಆಡೋಲ್ಲ!
ಪತಿ : ಓ.ಕೆ. ಸರಿ ಬಿಡು.
ಪತ್ನಿ : ಇದೇನು ಇಷ್ಟು ಸಲೀಸಾಗಿ ತಗೊಂಡು ಬಿಟ್ರಿ! ಯಾಕೆ ಏನು ಅಂತ ವಿಚಾರಿಸೋದಿಲ್ವಾ?