ಕಳೆದ ವರ್ಷ ಮಾರ್ಚ್‌ನಲ್ಲಿ `ಮೆಟರ್ನಿಟಿ ಬೆನಿಫಿಟ್ಸ್' ಅಂದರೆ `ಹೆರಿಗೆ ರಜೆ ಮಸೂದೆ' ಅಂಗೀಕಾರಗೊಂಡಾಗ ಮಹಿಳೆಯರು ಆ ನಿರ್ಧಾರವನ್ನು ಸ್ವಾಗತಿಸಿದ್ದರು. ಆದರೆ ಕೆಲವು ತಿಂಗಳುಗಳ ಹಿಂದೆ `ಎಂಪ್ಲಾಯ್‌ಮೆಂಟ್‌ ಸರ್ವೀಸಸ್‌ ಕಂಪನಿ ಟೀಮ್ ಲೀಸ್‌' ನಡೆಸಿದ ಒಂದು ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ, ಸರ್ಕಾರದ ಈ ನಿರ್ಧಾರದಿಂದ ಮಹಿಳೆಯರ ತೊಂದರೆ ಕಡಿಮೆ ಮಾಡುವ ಬದಲಿಗೆ ಅವರ ತೊಂದರೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಅಂದಹಾಗೆ, ಈ ಕಾನೂನು ರೂಪುಗೊಂಡ ಬಳಿಕ ಚಿಕ್ಕ ಹಾಗೂ ಮಧ್ಯಮ ಕಂಪನಿಗಳು ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿವೆ. 6 ತಿಂಗಳ ಕಾಲ ಒಬ್ಬ ಉದ್ಯೋಗಿಗೆ ಕೆಲಸವಿಲ್ಲದೆ ವೇತನ ನೀಡುವುದು ಒಂದು ದೊಡ್ಡ ಸವಾಲೇ ಹೌದು. ಅಷ್ಟು ದೀರ್ಘಾವಧಿಯತನಕ ಕೆಲಸದ ಮೇಲೂ ಪರಿಣಾಮ ಉಂಟಾಗುತ್ತದೆ. ಕಂಪನಿ ಆ ಉದ್ಯೋಗಿಯ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ನೇಮಕ ಮಾಡಿಕೊಳ್ಳಬೇಕಾಗಬಹುದು. ಇಂತಹದರಲ್ಲಿ ಆ ಕೆಲಸಕ್ಕಾಗಿ ದ್ವಿಗುಣ ಸಂಬಳದ ಹೊರೆಯನ್ನು ಹೊತ್ತುಕೊಳ್ಳಬೇಕಾಗಿ ಬರುತ್ತದೆ. ಒಂದು ವೇಳೆ ಮಹಿಳೆಯ ಆ ಮಹತ್ವದ ಕೆಲಸವನ್ನು ಹೊಸ ಉದ್ಯೋಗಿಗೆ ವಹಿಸದಿದ್ದರೂ, ಈಗಿರುವ ಯಾರಿಗಾದರೂ ಅದನ್ನು ವಹಿಸಿಕೊಡಬೇಕಾಗಿ ಬರುತ್ತದೆ.

ಟೀಮ್ ಲೀಸ್‌ ಮುಖಾಂತರ 350 ಸ್ಟಾರ್ಟ್‌ ಅಪ್ಸ್ ಹಾಗೂ ಉದ್ಯೋಗಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಂಡಂತೆ, ಶೇ.26ರಷ್ಟು ಕಂಪನಿಗಳು 6 ತಿಂಗಳು ಮೆಟರ್ನಿಟಿ ಲೀವ್‌ನ ಖರ್ಚನ್ನು ಗಮನದಲ್ಲಿಟ್ಟುಕೊಂಡು ಪುರುಷ ಉದ್ಯೋಗಿಗಳಿಗೆ ಆದ್ಯತೆ ಕೊಡಲು ನಿರ್ಧರಿಸಿದೆ.

ಸರ್ವೆಯಲ್ಲಿ ಪಾಲ್ಗೊಂಡ ಶೇ.40ರಷ್ಟು ಕಂಪನಿಗಳು ತಾವು ಮಹಿಳೆಯರನ್ನೇನೊ ನೇಮಿಸಿಕೊಳ್ಳುತ್ತೇವೆ. ಆದರೆ ಅವರಲ್ಲಿ ಅಷ್ಟು ಸಾಮರ್ಥ್ಯ ಇದೆಯಾ ಎಂದು ಕಂಡುಕೊಂಡು ನೇಮಿಸಿಕೊಳ್ಳುತ್ತೇವೆ ಎಂದು ಹೇಳಿದರು. ಆದರೆ ಶೇ.22ರಷ್ಟು ಕಂಪನಿಗಳು ಸರ್ಕಾರದ ಹೆರಿಗೆ ರಜೆಗಳ ವಿಸ್ತರಣೆ ತಮ್ಮ ನೇಮಕಾತಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದವು.

ಸಮೀಕ್ಷೆಯಲ್ಲಿ ಪಾಲ್ಗೊಂಡ ಕಂಪನಿಗಳು ಹಾಗೂ ಸಂಘಟನೆಗಳಲ್ಲಿ ಶೇ.39ರಷ್ಟು ಸರ್ಕಾರದ ಈ ನಿರ್ಧಾರದಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಹೇಳಿದವು. ಆದರೆ ಶೇ.35ರಷ್ಟು ಕಂಪನಿಗಳ ಪ್ರಕಾರ, 6 ತಿಂಗಳ ಹೆರಿಗೆ ರಜೆಯಿಂದ ಖರ್ಚು ಹಾಗೂ ಲಾಭ ಎರಡರ ಮೇಲೂ ಪರಿಣಾಮ ಉಂಟಾಗುತ್ತದೆ. ಶೇ.10ರಷ್ಟು ಜನರ ಪ್ರಕಾರ, ಈ ನಿರ್ಧಾರದಿಂದ ಯಾವುದೇ ಪ್ರಭಾವ ಆಗದು.

ಈಗಾಗಲೇ ಉದ್ಯೋಗದಲ್ಲಿರುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯ ಲಾಭವಂತೂ ಆಗಿಯೇ ಆಗುತ್ತದೆ. ಆದರೆ ಹೊಸದಾಗಿ ಉದ್ಯೋಗ ಅರಸುವ ಹುಡುಗಿಯರಿಗೆ ಮಾತ್ರ ಇದು ಸಂಕಟಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ತಮ್ಮ ಸಾಮರ್ಥ್ಯ ತೋರಿಸಬಯಸುವ ಹುಡುಗಿಯರಿಗೆ ಸುಲಭವಾಗಿ ಉದ್ಯೋಗ ಸಿಗಬಹುದೆ? ಅವರ ಕನಸಿನ ರೆಕ್ಕೆಗಳಿಗೆ ಬಲ ಸಿಗಬಹುದೇ?

ಅಂದಹಾಗೆ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳುವ ಕುರಿತಂತೆ, ಇರುವ ಯಾವಾಗ ಬೇಕಾದರೂ ಗರ್ಭ ಧರಿಸಿ ರಜೆ ಪಡೆದು ಹೋಗಬಹುದು ಮುಂದೆ ಹೇಗೆ? ಎಂಬ ಚಿಂತೆ ಕಂಪನಿಗಳನ್ನು ಕಾಡದೇ ಇರುವುದಿಲ್ಲ.

ಮಹಿಳೆಯರು ಜಗತ್ತಿನಾದ್ಯಂತ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಈಗ ಹೆರಿಗೆ ರಜೆ 6 ತಿಂಗಳು ಆಗಿರುವುದು ಅವರ ಆರ್ಥಿಕ ಅಸುರಕ್ಷತೆ ಹಾಗೂ ನಿರೋದ್ಯೋಗಕ್ಕೂ ಕಾರಣವಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ