ಅತಿ ಎತ್ತರಕ್ಕೆ ಮುಗಿಲು ಚುಂಬಿಸುವ ಕಟ್ಟಡಗಳನ್ನು ಎಬ್ಬಿಸಬೇಕು ಎಂಬ ಗೀಳು ಮನುಷ್ಯನಲ್ಲಿ ಕುಡಿಯೊಡೆದದ್ದು 20ನೇ ಶತಮಾನದ ಆರಂಭದಲ್ಲಿ ಎನ್ನಬೇಕು. ಈ ಗೀಳಿನ ಮೊದಲ ಪ್ರಯತ್ನಗಳ ಫಲಶೃತಿಗಳು ಅಮೆರಿಕಾದಲ್ಲಿ ಕಾಣಬಂತು. 1931ರಲ್ಲಿ ನಿರ್ಮಾಣಗೊಂಡ ನ್ಯೂಯಾರ್ಕಿನ `ಎಂಪೈರ್‌ ಸ್ಟೇಟ್‌ ಕಟ್ಟಡ' 1971ರವರೆಗೂ ಜಗತ್ತಿನ ಅತಿ ಎತ್ತರದ ಕಟ್ಟಡವಾಗಿತ್ತು. ಆಮೇಲೆ ಅದೇ ನೂಯಾರ್ಕಿನ `ವರ್ಲ್ಡ್ ಟ್ರೇಡ್‌ ಸೆಂಟರ್‌' ಎರಡು ವರ್ಷಗಳ ಕಾಲ ಎತ್ತರದ ದಾಖಲೆ ಹೊಂದಿತ್ತು. ಆನಂತರ ಶಿಕಾಗೋದ `ಸಿಯರ್ಸ್‌ ಟವರ್‌,' ಕೌಲಾಲಂಪುರದ `ಪೆಟ್ರೊನಾಸ್‌ ಟವರ್‌,' ತೈಪೆಯ `ತೈಪೆ 101' ಕಟ್ಟಡಗಳು 2010ರವರೆಗೆ ಅತಿ ಎತ್ತರದ ದಾಖಲೆಯನ್ನು ಕ್ರಮವಾಗಿ ಎತ್ತರಿಸುತ್ತ ಬಂದವು.

ಅದೇ ವರ್ಷ ಈ ಎಲ್ಲವುಗಳ ದಾಖಲೆಯನ್ನು ಮುರಿದದ್ದು ದುಬೈನ `ಬುರ್ಜ್‌ ಖಲೀಫಾ.' ಸದ್ಯಕ್ಕೆ ಅದೇ ಜಗತ್ತಿನ ಅತಿ ಎತ್ತರದ ಕಟ್ಟಡ (828 ಮೀಟರ್‌ಗಳು). ಈಗ ಸೌದಿ ಅರೇಬಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ `ಜೆಡ್ಡಾ ಟವರ್‌' (1,000 ಮೀಟರ್‌ಗಳು). 2021ರಲ್ಲಿ ಬುರ್ಜ್‌ ಖಲೀಫಾದಿಂದ ಆ ದಾಖಲೆಯನ್ನು ಕಸಿದುಕೊಳ್ಳಲಿದೆಯಂತೆ. ಇದನ್ನೂ ಮೀರಿಸುವ ಕಟ್ಟಡವೊಂದಕ್ಕೆ ದುಬೈನಲ್ಲೇ ಈಗಾಗಲೇ ಅಡಿಪಾಯ ಹಾಕಲಾಗುತ್ತಿದೆ! ಈ ಪೈಪೋಟಿ ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಪೈಪೋಟಿ ಆರಂಭಿಸಿದ ಅಮೆರಿಕಾ ಈಗ ಮಧ್ಯಮ ಗಾತ್ರದ ಕಟ್ಟಡಗಳನ್ನು ಕಟ್ಟಿಕೊಂಡು ಸುಮ್ಮನಾಗಿಬಿಟ್ಟಿದೆ.

ಸಂಯುಕ್ತ ಅರಬ್‌ ಎಮಿರೇಟ್ಸ್ ನಲ್ಲಿ ಒಂದು ನಗರವಿದೆ. ಅದುವೇ ಅಬುಧಾಬಿ. ದೇಶದ ರಾಜಧಾನಿ ನಗರ. ಸಿರಿವಂತ ನಗರ, ಸ್ವಚ್ಛ, ಪ್ರಶಾಂತ, ಅಚ್ಚುಕಟ್ಟುತನವೇ ಎದ್ದುಕಾಣುವ ನಗರ. ಈ ನಗರದ ಕಟ್ಟಡಗಳು ಮಾತ್ರ ಮುಗಿಲು ಮುಟ್ಟಲು ಹೆಚ್ಚು ಹಾತೊರೆಯದೆ ವಿಭಿನ್ನ ವಿನ್ಯಾಸ ಮತ್ತು ಆಕಾರಗಳಿಂದ ಜಗತ್ತಿನೆಲ್ಲೆಡೆಯಿಂದ ಬರುವ ಪ್ರವಾಸಿಗರ ಗಮನ ಸೆಳೆಯುತ್ತವೆ.

`ವಾವ್‌! ವಾಸ್ತುಶಿಲ್ಪವೆಂದರೆ ಹೀಗಿರಬೇಕು,' ಎನ್ನಿಸುವಂತಿರುವ ಇಲ್ಲಿನ ಕೆಲವು ಕಟ್ಟಡಗಳು `ಫೋಟೋಸ್ಟಾಪ್‌'ಗಾಗಿಯೇ ಕೈಬೀಸಿ ಕರೆಯುತ್ತವೆ. ಪಕ್ಕದ ದುಬೈನಲ್ಲಿರುವ ಕಟ್ಟಡಗಳ ಜೊತೆ ಎತ್ತರದಲ್ಲಿ ಇವು ಸ್ಪರ್ಧೆಗೆ ನಿಲ್ಲಲಾರವು. ಆದರೆ ತಮ್ಮದೇ ಬಗೆಯಲ್ಲಿ ಆಕರ್ಷಕವೆನಿಸುತ್ತವೆ. ಇದರ ಅರಿವು ಇರುವುದರಿಂದಲೋ ಏನೋ ಅಬುಧಾಬಿಯ ಆಡಳಿತ ಈ ಬಗೆಯ ಕಟ್ಟಡಗಳನ್ನೇ ಪ್ರೋತ್ಸಾಹಿಸುತ್ತಿದೆ.

ಕಟ್ಟಡಗಳ ಬೆನ್ನು ಹತ್ತಿ ನಾವು ಸಂಯುಕ್ತ ಅರಬ್‌ ಎಮಿರೇಟ್ಸ್ ಗೆ ಭೇಟಿ ಕೊಡುವುದು ಖಚಿತವಾದಾಗ, ನಮ್ಮ ಭೇಟಿಯ ಪಟ್ಟಿಯಲ್ಲಿ ಅಬುಧಾಬಿಯ ಕಟ್ಟಡಗಳನ್ನು ಪ್ರಜ್ಞಾಪೂರ್ಕವಾಗಿ ಸೇರಿಸಿಕೊಂಡೆವು. ಅವುಗಳ ಒಳಗಣ ವೈಭವ ಮತ್ತು ಸೌಂದರ್ಯವನ್ನು ಸವಿಯಲು ಸಮಯ ಸಾಕಷ್ಟು ಇರಲಿಲ್ಲವಾದರೂ ಹೊರಗಿನಿಂದಲೇ ವಾಸ್ತುಶಿಲ್ಪವನ್ನು ಕಂಡುಬಂದೆವು. ಅಂತಹ ಕೆಲವನ್ನು ಇಲ್ಲಿ ಪರಿಚಯಿಸುವೆ. ಅಬುಧಾಬಿಯ ಎತ್ತರದ ಮುಗಿಲಚುಂಬಿಯೆಂದರೆ `ಬುರ್ಜ್‌ ಮೊಹಮ್ಮದ್‌ ಬಿನ್‌ ರಷೀದ್‌' ಕಟ್ಟಡ. ಇದು ವಿಖ್ಯಾತ ಕಾರ್ನಿಷೆ ರಸ್ತೆಯಲ್ಲಿದೆ. ತಲೆಯನ್ನು ಓರೆಯಾಗಿ ತಟ್ಟನೆ ಕತ್ತರಿಸಿದಂತೆ ಇದರ ಎತ್ತರ ಕೊನೆಗೊಳ್ಳುತ್ತದೆ. ಇದರ ಒಂದು ಬದಿಯಲ್ಲಿರುವ `ಲ್ಯಾಂಡ್‌ಮಾರ್ಕ್‌' ಕಟ್ಟಡ ಅಬುಧಾಬಿಯ ಎರಡನೇ ಎತ್ತರದ ಕಟ್ಟಡ. ಬುಡದಲ್ಲಿ ಇಸ್ಲಾಮಿಕ್‌ ಶೈಲಿಯ ಜ್ಯಾಮಿತಿಯನ್ನು ಹೋಲುವ ರಚನೆ ಇದರ ವಿಶೇಷ.ಇದರ ಎದುರಿಗಿರುವ `ಅಬುಧಾಬಿ ಇನ್‌ವೆಸ್ಟ್ ಮೆಂಟ್‌ ಅಥಾರಿಟಿ' ಕಟ್ಟಡದ ಮೇಲ್ಭಾಗ ಸೀರೆಯ ನೆರಿಗೆಗಳು ಹೊರಳಿಕೊಂಡಂತೆ ಇರುವುದು ವಿಲಕ್ಷಣವೆನಿಸುತ್ತದೆ. ಕಾರ್ನಿಷೆ ರಸ್ತೆಯ ಇನ್ನೊಂದು ತುದಿಯಲ್ಲಿ `ಸೆಬಾ ಟವರ್‌' ಇದೆ.  ಇವು ಅವಳಿ ಕಟ್ಟಡಗಳು. ಇದನ್ನು ದಾಟಿ ದಕ್ಷಿಣಕ್ಕೆ ಮುಂದುವರಿದರೆ ಸರ್ಕಾರಿ ಒಡೆತನದಲ್ಲಿರುವ `ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ'ಯ ಮುಖ್ಯ ಕಛೇರಿಯ (ಲಂಬವಾಗಿ ಚಾಚಿಕೊಂಡ) ಆಯಾತಾಕಾರದ ಕಟ್ಟಡವಿದೆ. ಹೊರಭಾಗದ ಎರಡು ಪಾರ್ಶ್ವಗಳಲ್ಲಿ ಪೂರ್ತಿ ಗ್ರಾನೈಟ್‌ನ ಸ್ಲ್ಯಾಬ್‌ಗಳನ್ನು ಹೊದಿಸಿದ ಜಗತ್ತಿನ ಅತಿ ಎತ್ತರದ ಕಟ್ಟಡ ಎಂದು ಇಂದು ಖ್ಯಾತವಾಗಿದೆ. ಇದರ ಸನಿಹದಲ್ಲೇ `ಎತಿಹಾಡ್‌' ಹೆಸರಿನ ಐದು ಅಸಮ ಎತ್ತರದ ಕಟ್ಟಡಗಳ ಸಂಕೀರ್ಣವಿದೆ. ನಡುಭಾಗದಲ್ಲಿ ಉಬ್ಬಿದಂತಿರುವ ಈ ಕಟ್ಟಡಗಳು ಮುಖಕ್ಕೆ ಮುಖ ಹತ್ತಿರ ತಂದು ಪರಸ್ಪರ ಪಿಸುಗುಟ್ಟಿಕೊಳ್ಳುತ್ತಿವೆಯೇನೋ ಎಂದು ಭಾಸವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ