ಕಾಲೇಜುಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವುದರ ಜೊತೆ ಜೊತೆಗೆ ಮತ್ತೊಂದು ಬಹುದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಈ ಸಮಸ್ಯೆಯ ಬಗ್ಗೆ ಪೋಷಕರು ಯಾವ ರೀತಿ ಎಚ್ಚರದಿಂದಿರಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು!

ಕೇರಳದ ಕೋಳಿಕೋಡ್‌ನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೆ.ಪಿ. ಅವಸ್ಥಿ ಎಂಬ ವಿದ್ಯಾರ್ಥಿಗೆ ತಾನು ಬದುಕುಳಿದದ್ದೇ ಶಿಕ್ಷೆ ಎಂಬಂತೆ ಅನಿಸುತ್ತಿದೆ. ಏಕೆಂದರೆ ಅವನ 5 ಸೀನಿಯರ್‌ ವಿದ್ಯಾರ್ಥಿಗಳು ಅವನಿಗೆ ಬಾಥ್‌ರೂಮ್ ಸ್ವಚ್ಛತೆ ಮಾಡುವ ಕೀಟನಾಶಕ ಕುಡಿಯಲು ಒತ್ತಡ ಹೇರಿದ್ದರು.ಇದು ಪ್ರಮುಖ ಕಾಲೇಜೊಂದರಲ್ಲಿ ನಡೆದ ಘಟನೆ. ಅದು ನರ್ಸಿಂಗ್‌ ಕೋರ್ಸ್‌ಗೆ ಹೆಸರಾದ ಕಾಲೇಜ್‌. ಅಲ್ಲಿ ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ಪ್ರವೇಶ ಪಡೆಯುತ್ತಾರೆ. ನರ್ಸಿಂಗ್‌ ವೃತ್ತಿಯಲ್ಲಿ ಕೇರಳದ್ದೇ ಪ್ರಾಬಲ್ಯ ಎನ್ನುವುದು ಜನಜನಿತ ಸಂಗತಿ.

ಮೇ. 9, 2016 ರಂದು ನಡೆದ ಈ ಘಟನೆಯ ಎಫ್‌.ಐ.ಆರ್‌. ದಾಖಲಾದದ್ದು ಜೂನ್‌ 22, 2016 ರಂದು. ಅಂದರೆ 42 ದಿನಗಳ ಬಳಿಕ. ಈ ಒಂದು ವಿಷಯದಿಂದಲೇ ಈ ಪ್ರಕರಣದಲ್ಲಿ ಎಷ್ಟರಮಟ್ಟಿಗೆ ನಿರ್ಲಕ್ಷ್ಯ ತೋರಲಾಯಿತು ಎಂಬುದು ಖಾತ್ರಿಯಾಗುತ್ತದೆ. ರಾಗಿಂಗ್‌ ಕಾನೂನು ಅದೆಷ್ಟು ದುರ್ಬಲವಾಗಿದೆ ಎಂಬುದನ್ನು ಕೂಡ ಈ ಘಟನೆ ಬೆರಳು ಮಾಡಿ ತೋರಿಸುತ್ತದೆ. ಮೇ 9 ರಂದು ಅವಸ್ಥಿಗೆ ಅವನ ಸೀನಿಯರ್‌ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಫಿನೈಲ್ ಕುಡಿಯಲು ಒತ್ತಡ ಹೇರಿದರು. ಅವಸ್ಥಿ ಅಲ್ಲಿಂದ ಕಾಲ್ಕೀಳಲು ನೋಡಿದ. ಆದರೆ ಅವರು ಅವನನ್ನು ಎತ್ತಿಕೊಂಡು ಬಂದು ಫಿನೈಲ್‌ ಕುಡಿಯಲು ಒತ್ತಾಯ ಮಾಡಿದರು. ಫಿನೈಲ್ ಕುಡಿದ ಬಳಿಕ ಅವನು ಕೆಳಗೆ ಕುಸಿದುಬಿದ್ದ. ಬಳಿಕ ಅವನ ಸ್ನೇಹಿತರು ಅವನನ್ನು ಆಸ್ಪತ್ರೆಗೆ ಸೇರಿಸಿದರು. ಅವನ ಸ್ಥಿತಿ ಸುಧಾರಣೆಯಾಗುವ ಬದಲು ಮತ್ತಷ್ಟು ಹದಗೆಟ್ಟುಹೋಯಿತು. ಹೀಗಾಗಿ ಅವನನ್ನು ಅವನ ತವರು ರಾಜ್ಯಕ್ಕೆ ಕಳಿಸಿಕೊಡಲಾಯಿತು.

ವೈದ್ಯರ ಪ್ರಕಾರ ಆ ವಿದ್ಯಾರ್ಥಿಯ ಒಳ ಅಂಗಗಳು ಬೆಂದುಹೋಗಿದ್ದವು. ಅವನಿಗೆ ಬಹುದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಏಕೆಂದರೆ ಫಿನೈಲ್ ಅವನ ಅನ್ನನಾಳವನ್ನು ಹಾಳುಗೆಡವಿತ್ತು. ಅಷ್ಟೇ ಅಲ್ಲ, ಗಂಟಲು ಹಾಗೂ ಹೊಟ್ಟೆಯ ಮಧ್ಯಭಾಗವನ್ನು ಸಾಕಷ್ಟು ಹಾನಿಗೀಡು ಮಾಡಿತ್ತು. ಆ ನೋವಿನಿಂದ ಸಂಪೂರ್ಣ ಗುಣಮುಖನಾಗಲು ಅವನಿಗೆ ಏನಿಲ್ಲವೆಂದರೂ 4 ತಿಂಗಳು ಬೇಕಾಯಿತು.

ಇಂತಹ ಪ್ರಕರಣಗಳಲ್ಲಿ ಅವರು ಗುಣಮುಖರಾದರೂ ಅವರ ಒಳಗಿನ ಎಲ್ಲ ಅಂಗಾಂಗಗಳು ಸಂಪೂರ್ಣವಾಗಿ, ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಅವಸ್ಥಿಗೆ ಮೊದಲ ದಿನದಿಂದಲೇ ಹಿಂಸೆ ನೀಡಲಾಗುತ್ತಿತ್ತು. ಆದರೆ ಅವನ ಗೋಳನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ. ಕಾಲೇಜು ಆಡಳಿತ ಮಂಡಳಿ ಕೂಡ ಆ್ಯಂಟಿ ರಾಗಿಂಗ್‌ ಕಾನೂನನ್ನು ಬಳಸಿಕೊಳ್ಳಬಹುದಾಗಿತ್ತು. ಆದರೆ ಅದು ಹಾಗೇನೂ ಮಾಡಲಿಲ್ಲ. ಪೊಲೀಸರಿಗೆ ದೂರು ಕೂಡ ಸಲ್ಲಿಕೆಯಾಗಲಿಲ್ಲ.

ಎಷ್ಟೋ ದಿನಗಳ ಬಳಿಕ ಎಫ್‌.ಐ.ಆರ್‌ ದಾಖಲಾದ ನಂತರ ಸೀನಿಯರ್‌ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಆ ಸೀನಿಯರ್‌ ವಿದ್ಯಾರ್ಥಿಗಳಿಗೆ ಅವಸ್ಥಿಯ ಮೇಲೆ ಅದೇನು ದ್ವೇಷವಿತ್ತೋ ಏನೋ? ಅವನ ಮೇಲೆ ಈ ರೀತಿ ಸೇಡು ತೀರಿಸಿಕೊಂಡಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿನಿ ಕೂಡ ಇದ್ದದ್ದು ಗಮನಿಸಬೇಕಾದ ಸಂಗತಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ