ಬೆಚ್ಚಿ ಬಿದ್ದೀರಿ ಜೋಕೆ ! : ಈ ಚಿತ್ರ ನೋಡಿದರೆ `ನಾ ನಿನ್ನ ಬಿಡಲಾರೆ' ಅನಂತ್ ನಾಗ್ ನೆನಪಾದರೆ ಆಶ್ಚರ್ಯವಿಲ್ಲ. ಅಂತಾರಾಷ್ಟ್ರೀಯ ಫ್ಯಾಷನ್ ಶೋ ಒಂದರಲ್ಲಿ ಲೇಟೆಸ್ಟ್ ಸೂಪರ್ ಮಾಡೆಲ್ ಒಬ್ಬಳು ಮಿಂಚಿದ್ದು ಹೀಗೆ!
ನಾಯಿಮರಿ.... ನಾಯಿಮರಿ..... ಗಾಬರಿ ಏಕೆ? : ಪ್ರಾಥಮಿಕ ತರಗತಿಯಲ್ಲಿ ಜಿ.ಪಿ. ರಾಜರತ್ನಂರ `ನಾಯಿಮರಿ.... ತಿಂಡಿ ಬೇಕೆ?' ಹೇಳಿಕೊಂಡದ್ದು ನೆನಪಿರಬೇಕಲ್ಲವೇ? ಇತ್ತೀಚೆಗೆ ಇಂಗ್ಲೆಂಡಿನ ಒಂದು ಡಾಗ್ ಶೋನಲ್ಲಿ ತನ್ನ ನಾಯಿಮರಿಯನ್ನು ಇಂಥ ಬೊಂಬಾಟ್ ಉಡುಗೆಯಿಂದ ಸಿಂಗರಿಸಿದ ಅದರ ಮಾಲೀಕಳು, ಮೇಲಿನ ಹಾಡು ಹೇಳುತ್ತಾ, ರಾಂಪ್ ಮೇಲೆ ನೀಟಾಗಿ ಕ್ಯಾಟ್ ವಾಕ್...... ಛೇ ಛೇ..... ಡಾಗ್ ವಾಕ್ ಮಾಡುವಂತೆ ಹುರಿದುಂಬಿಸುತ್ತಿದ್ದಾಳೆ.
`ಅತಿಲೋಕ ಸುಂದರಿ' ಎಂದ ಮೇಲೆ ಇನ್ನೇನು? : ದೇಶದ `ಅತಿಲೋಕ ಸುಂದರಿ' ಪಟ್ಟ ಸಿಕ್ಕಿದ ಮೇಲೆ ದಿಢೀರ್ ಸೆಲೆಬ್ರಿಟಿಗಳಾಗಿ ಬಿಡುತ್ತಾರೆ. ಹೀಗಾಗಿಯೇ ಕ್ಯಾಮಿಲಿ ಸರ್ಫ್‌ಳಿಗೆ ಬಂದ ದೌಲತ್ತು ನೋಡಿ, ಆಕೆ `ಮಿಸ್ ಫ್ರಾನ್ಸ್' ಎನಿಸಿದ ಮೇಲೆ, ಅಲ್ಲಿನ ರಾಷ್ಟ್ರೀಯ ಮಹಲಿನಲ್ಲಿ ಫ್ರಾನ್ಸ್ ವಿದೇಶಾಂಗ ಮಂತ್ರಿ, ಅಮೆರಿಕಾದ ರಾಜದೂತರೊಂದಿಗೆ ಹೆಮ್ಮೆಯಿಂದ ಬೀಗುತ್ತಾ ಡಿನ್ನರ್ ಸವಿಯುತ್ತಿದ್ದಾಳೆ.
ಮೂರ್ತಿ ಚಿಕ್ಕದಾದರೇನು....? : ಇವಳು ಕೇವಲ 2 ವರ್ಷದವಳಾದರೇನು? ಇಟ್ಟ ಬಾಣದ ಗುರಿ ಮಾತ್ರ ತಪ್ಪದು. ಈ ಪವಾಡ ಮಾಡಬಲ್ಲಳು ವಿಜಯವಾಡದ ಚೆರುಕುರಿ ಗ್ರಾಮದ ಪುಟಾಣಿ ಶಿವಾನಿ. 2 ವರ್ಷದ ಈ ಮಗು ಇಷ್ಟು ಆತ್ಮವಿಶ್ವಾಸ ಗಳಿಸುವಂತೆ ಮಾಡಿದ ಅವಳ ತಾಯಿ ತಂದೆಗೆ ಅಭಿನಂದನೆಗಳು! 2 ವರ್ಷದ ಮಗು ಅಮ್ಮನ ಮಡಿಲಿನಿಂದ ಇಳಿಯುವುದೇ ಹೆಚ್ಚು, ಇಲ್ಲಿ ನೋಡಿದರೆ....
ವಾಹ್ ವಾಹ್! ಇದಪ್ಪ ಟ್ಯಾಟೂ ಕ್ರೇಜ್ : ಅಬ್ಬಬ್ಬಾ... ಸಾಕೇ ಈ ಟ್ಯಾಟೂಗಳು? ಈ ಮಹಾತಾಯಿ ತನ್ನ ದೇಹದ ಯಾವುದಾದರೂ ಭಾಗ ಖಾಲಿ ಬಿಟ್ಟಳೋ ಇಲ್ಲವೋ? ಇದೇನು ಟ್ಯಾಟೂ ಫ್ಯಾಷನ್ನೋ ಪ್ಯಾಶನ್ನೋ ತಿಳಿಯುತ್ತಿಲ್ಲ.
ಕಂದಾಚಾರಿಗಳ ವಿರುದ್ಧ ಸಿಡಿದೆದ್ದ ಜನ : ಆಫ್ಘಾನಿಸ್ತಾನದಲ್ಲಿ ಒಬ್ಬ ಹೆಂಗಸನ್ನು ಜನನಿಬಿಡ ಮಾರುಕಟ್ಟೆ ಮಧ್ಯೆ ಹೊಡೆದು ಬಡಿದು ಸಾಯಿಸಿದರು. ಕಾರಣ, ಆಕೆ ಕುರಾನಿನ ಪ್ರತಿಯೊಂದನ್ನು ಹಾಳು ಮಾಡಿದ್ದಳು ಎಂಬ ಆರೋಪವಿತ್ತು. ಧರ್ಮದ ಹೆಸರಿನಲ್ಲಿ ಕಂದಾಚಾರದ ಈ ಶೋಷಣೆ ವಿಶ್ವದೆಲ್ಲೆಡೆ ಕಂಡುಬರುತ್ತದೆ. ಆದರೆ ಈ ಕೃತ್ಯ ಖಂಡಿಸಿ, ಕಾಬುಲ್ ನ ಜನರೆಲ್ಲ ಸಿಡಿದುಬಿದ್ದಿರುವುದು ಹೊಸ ಕ್ರಾಂತಿಯ ಸಂಕೇತವಾಗಿದೆ.
ಇದ್ಯಾವ ಪೆರೇಡೂ ಅಲ್ಲ, ಕೇವಲ ಮನರಂಜನೆ : ಇಷ್ಟೆಲ್ಲ ಕಾಯತ್ತನ್ನು ಸೈನಿಕರೂ ಮಾಡಲಾರರೇನೋ...! ಈ ಚಿಯರ್ ಗರ್ಲ್ಸ್ ಇದಕ್ಕಾಗಿಯೇ ಭಾರಿ ತಯಾರಿ ನಡೆಸಿ, ಯಾವುದೇ ಆಟದಲ್ಲಿ ಪ್ರೇಕ್ಷಕರಿಗೆ ಎಳ್ಳಷ್ಟೂ ಬೋರ್ ಆಗದಂತೆ ತಮ್ಮ ಗ್ಲಾಮರಸ್ ಚಮಕ್‌ನಿಂದ ಅವರಿಂದ ಕಣ್‌ಕೀಳದಂತೆ ಮಾಡುತ್ತಾರೆ. ಪ್ರೇಕ್ಷಕರು ಇವರನ್ನು ನೋಡುವುದೋ ಆಟವನ್ನೋ ಎಂದು ತಿಳಿಯದೆ ತಬ್ಬಿಬ್ಬಾಗುತ್ತಾರೆ.