ದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಮುಂಬೈನಲ್ಲಿ ಬೆಳೆದು ಕಲಿತ ತಿಶಾ, ಬಲು ಜೋವಿಯೆಲ್ ‌ಮೂಡ್‌ನ, ಶಾಂತ ಸ್ವಭಾವದ ವ್ಯಕ್ತಿ. ತಮ್ಮ ಸತತ ಬಿಡುವಿಲ್ಲದ ಕೆಲಸದ ಮಧ್ಯೆ ತುಸು ಪುರಸತ್ತು ದೊರೆತಾಗ, ಆಕೆ ಕುಶಲ ಗೃಹಿಣಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ತಾಯಿಯಿಂದ ಕಲಿತ ಸಾಂಪ್ರದಾಯಿಕ ಪಾರ್ಸಿ ರೆಸಿಪೀಸ್‌ ತಯಾರಿಸುವುದರ ಜೊತೆ, ತಿಶಾರಿಗೆ ಬೇಕಿಂಗ್‌ನ ಖಯಾಲಿಯೂ ಇದೆ. ತಿಶಾ ಎಷ್ಟೋ ಸಲ ತಮ್ಮ ಜೀವನದ ಅತಿ ಕಷ್ಟಕರ ಕ್ಷಣಗಳನ್ನು ಎದುರಿಸಿದ್ದಾರೆ. ತಮ್ಮ ತಂದೆ ತೀರಿಕೊಂಡ ನಂತರ, ಸಂಪೂರ್ಣ ಮನೋಸ್ಥೈರ್ಯ ಕಳೆದುಕೊಂಡಿದ್ದ ತಿಶಾ, ತಮ್ಮನ್ನು ತಾವು ಸಂಭಾಳಿಸಿಕೊಂಡಿದ್ದಲ್ಲದೆ ತಮ್ಮ ಮನೆತನದ ಬಿಸ್‌ನೆಸ್‌ನಲ್ಲೂ ಒಳ್ಳೆಯ ಹೆಸರು ಪಡೆದರು.

ತಮ್ಮ ಕುಟುಂಬದ ಕುರಿತಾಗಿ ಹೇಳುತ್ತಾ ತಿಶಾ, ``ನನ್ನ ತರೂರು ದೆಹಲಿ. ಇಲ್ಲಿನ ಮಾಡರ್ನ್‌ ಸ್ಕೂಲ್‌ನಿಂದ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭಿಸಿದೆ. ಕೆಲವು ವರ್ಷಗಳ ನಂತರ ನಾವು ಮುಂಬೈಗೆ ಶಿಫ್ಟ್ ಆದೆ. ಅಲ್ಲಿ ನಾನು ಬಾಂಬೆ ಸ್ಕಾಟಿಶ್‌ ಹೈಸ್ಕೂಲಿಗೆ ಸೇರಿದೆ. ನಂತರ ಎಚ್‌.ಆರ್‌. ಕಾಲೇಜಿನಿಂದ ಪದವಿ ಪಡೆದೆ. ನಂತರ ಅಡ್ವರ್ಟೈಸಿಂಗ್‌, ಸೇಲ್ಸ್ ಪ್ರಮೋಶನ್‌, ಸೇಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಅಡ್ವಾನ್ಸ್ ಡಿಪ್ಲೋಮಾ ಪಡೆದೆ. ಮುಂದೆ ನಾನು ಎಕನಾಮಿಕ್ಸ್ ನಲ್ಲಿ ಪಿ.ಜಿ. ಮಾಡಿದೆ.''

ಆಕೆ ಮುಂದೆ ಹೇಳುತ್ತಾರೆ, ``ನಮ್ಮ ಕುಟುಂಬದಲ್ಲಿ ನನ್ನ ಅಕ್ಕ, ತಾಯಿ ಇದ್ದಾರೆ. 7 ವರ್ಷಗಳ ಹಿಂದೆಯೇ ನನ್ನ ತಂದೆ ತೀರಿಕೊಂಡರು. ನಾನು ಅರ್ಜುನ್‌ ಖುರಾನಾರನ್ನು ಮದುವೆಯಾದೆ, ನನ್ನ ಅತ್ತೆಮನೆ ಈಗ ದೆಹಲಿಯಲ್ಲಿದೆ. ಇದೀಗ ನಾನು ನನ್ನನ್ನು ಈ ಬಿಸ್‌ನೆಸ್‌ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ.''

ಕೆರಿಯರ್ ಆರಂಭ

ತಿಶಾ ಬಿಸ್‌ನೆಸ್‌ ಕುಟುಂಬದಲ್ಲಿ ಹುಟ್ಟಿದ್ದರೂ, ಮೊದಲಿನಿಂದಲೂ ಆಕೆಗೆ ದೊಡ್ಡ ಉದ್ಯಮಿ ಆಗಬೇಕೆಂಬ ದೊಡ್ಡ ಗುರಿಯೇನೂ ಇರಲಿಲ್ಲ.

``ನಾನು ಪಕ್ಕಾ ಉದ್ಯಮಿ ಕುಟುಂಬದಲ್ಲಿ ಹುಟ್ಟಿದ್ದರೂ, ನನಗೆ ಬಿಸ್‌ನೆಸ್‌ನಲ್ಲಿ ಅಂಥ ಆಳವಾದ ಅಭಿರುಚಿ ಏನೂ ಇರಲಿಲ್ಲ. ಬಾಲ್ಯದಿಂದ ನಾನು ಡಾಕ್ಟರ್‌ ಆಗಬೇಕೆಂದು ಬಯಸಿದ್ದೆ, ಆದರೆ ರಸ್ತೆ ಅಪಘಾತಗಳಲ್ಲಿನ ರಕ್ತ ಕಂಡು ಹೆದರುತ್ತಿದ್ದೆ. ಕಲಿಕೆಯ ನಂತರ ಟೈಮ್ಸ್ ಆಫ್‌ ಇಂಡಿಯಾದ ಇಂಟರ್‌ ನ್ಯಾಷನಲ್ ಮೀಡಿಯಾ ಮಾರ್ಕೆಟಿಂಗ್‌ ಟೀಮ್ ನಲ್ಲಿ ಕೆಲಸ ಮಾಡಲು ಶುರುಮಾಡಿದೆ. ಈ ಮೂಲಕ ನನಗೆ ಸಾಕಷ್ಟು ಪ್ರವಾಸ ಮಾಡಬೇಕಾಯ್ತು. ಇದಾದ ನಂತರ ನಾನು ಈಜಿಪ್ಶಿಯನ್‌ ಟೂರಿಸಂ ಬೋರ್ಡ್‌ ಸೇರಿದೆ. ಆ ಮೂಲಕ ನಾನು ನಮ್ಮಕ್ಕನ ಜೊತೆಗೂಡಿ ಬಿಜ್ಜರೆ ಬಾಜಾರ್‌ ಎಂಬ ಕಂಪನಿ ಶುರುಮಾಡಿದೆ. ಅದು ಸಾಕಷ್ಟು ಯಶಸ್ವಿಯಾಯ್ತು.''

ಟರ್ನಿಂಗ್ಪಾಯಿಂಟ್

ಕೆಲವೊಂದು ಸಲ ಜೀವನದ ಕೆಲವು ತಿರುವುಗಳು ನಮ್ಮ ಇಡೀ ಜೀವನಶೈಲಿಯನ್ನೇ ಬದಲಿಸಬಲ್ಲಂಥ. ತಿಶಾರ ಜೊತೆಯೂ ಹೀಗೇ ಆಯಿತು. ಆ ಕುರಿತಾಗಿ ಆಕೆ, ``ನಾನು ಆರಂಭದಿಂದಲೇ ಏನಾದರೊಂದು ಕೆಲಸ ಮಾಡಲೇಬೇಕು ಅಂದುಕೊಳ್ಳುತ್ತಿದ್ದೆ. ನಮ್ಮೆಲ್ಲರ ಜೀವನದಲ್ಲಿ ಏನಾದರೊಂದು ಘಟನೆಗಳು ನಡೆದು ನಮ್ಮ ಇಡೀ ಜೀವನವನ್ನೇ ಬದಲಿಸಿಬಿಡುತ್ತವೆ. 7 ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡಾಗ ನನ್ನ ಜೀವನದಲ್ಲೂ ಹಾಗೇ ಆಯ್ತು. ಆ ಸಂಕಟದ ಕ್ಷಣಗಳು ನನ್ನನ್ನು ಅಸಹಾಯಕಳನ್ನಾಗಿ ಮಾಡಿದರೂ, ನಾನು ನನ್ನ ಜೀವನಶೈಲಿ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ