ಕೂಚ್ಚುಪುಡಿ ನೃತ್ಯ ಪ್ರಕಾರ ಆಂಧ್ರ ಪ್ರದೇಶದಲ್ಲಿ ಬಹಳ ಪ್ರಸಿದ್ಧ. ಕರ್ನಾಟಕದವರೊಬ್ಬರು ಈ ಕಲೆಯಲ್ಲಿ ಅಗಾಧ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದರೆಂದರೆ ವೈಜಯಂತಿ ಕಾಶಿ. ಆ ನೃತ್ಯ ಪ್ರಕಾರದ ಬಗ್ಗೆ ಸಂಶೋಧನೆ ಕೈಗೊಂಡು ಕೇಂದ್ರ ಸರ್ಕಾರದಿಂದ ಫೆಲೋಶಿಪ್‌ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

ನೃತ್ಯಕ್ಕೆ ಪಾದಾರ್ಪಣೆ

ವೈಜಯಂತಿ ಅವರು `ಕರ್ನಾಟಕ ರತ್ನ' ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ಇನ್ನೊಂದೆಡೆ ಕರ್ನಾಟಕದ ಮೊದಲ ಐಎಎಸ್ ಅಧಿಕಾರಿಯಾಗಿದ್ದ ಜೆ.ಬಿ. ಮಲ್ಲಾರಾಧ್ಯ ಅವರಿಗೂ ಮೊಮ್ಮಗಳು. ಒಂದೆಡೆ ಕಲೆ, ಇನ್ನೊಂದೆಡೆ ಶಿಸ್ತು ಅವರಿಗೆ ಹುಟ್ಟಿನಿಂದಲೇ ಬಂದಿತ್ತೆನ್ನಬಹುದು. ವೈಜಯಂತಿಯವರ ತಂದೆ  ಜೆ.ಎಂ. ವಿಶ್ವನಾಥ್‌, ತಾಯಿ ಜಿ.ವಿ. ಗಿರಿಜಮ್ಮ. ತಂದೆ ದಕ್ಷಿಣದ ಖ್ಯಾತ ತಾರೆ ವೈಜಯಂತಿ ಮಾಲಾ ಅವರ ಅಪ್ಪಟ ಅಭಿಮಾನಿ. ತಮ್ಮ ಮಗಳು ಕೂಡ ವೈಜಯಂತಿ ಮಾಲಾರ ಹಾಗೆ ದೊಡ್ಡ ನೃತ್ಯ ಕಲಾವಿದೆ ಆಗಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ತಾಯಿ ಗಿರಿಜಮ್ಮ ಗುಬ್ಬಿ ವೀರಣ್ಣನವರ ಮಗಳಾದರೂ ಯಾವುದೇ ನಾಟಕದಲ್ಲಿ ಅಭಿನಯಿಸಿರಲಿಲ್ಲ. ಆದರೆ ಅವರಿಗೆ ಅಭಿನಯದ ಬಗ್ಗೆ ತುಂಬಾ ಆಸಕ್ತಿ ಇತ್ತು. ಇಂತಹ ಕಲಾಪೋಷಕರ ಕುಟುಂಬದಲ್ಲಿ ಬೆಳೆದ ವೈಜಯಂತಿಯವರಿಗೆ ಆರನೇ ವರ್ಷದಲ್ಲಿ ತುಮಕೂರಿನ ಕೆ.ಎ. ರಾಮಣ್ಣ ಅವರು ಭರತನಾಟ್ಯದ ಶಿಕ್ಷಣ ನೀಡಲು ಇವರ ಮನೆಗೆ ಬರುತ್ತಿದ್ದರು. ಆದರೆ ತುಂಟ ವೈಜಯಂತಿಗೆ ಆಗ ನೃತ್ಯದ ಬಗ್ಗೆ ಎಳ್ಳಷ್ಟೂ ಆಸಕ್ತಿಯೇ ಇರಲಿಲ್ಲ. ಆಕೆ ಗುರುಗಳು ಬರುತ್ತಿದ್ದಾರೆಂದು ಗೊತ್ತಾದ ತಕ್ಷಣ ಅಲ್ಲಿ ಇಲ್ಲಿ ಅಡಗಿ ಕೂತುಕೊಳ್ಳುತ್ತಿದ್ದಳು. ಮರ ಕೂಡ ಹತ್ತಿ ಕೂತಿರುತ್ತಿದ್ದಳು. ಆದರೆ ಗುರುಗಳು ಮಾತ್ರ ಆಕೆಗೆ ತಾಳ್ಮೆಯಿಂದಲೇ ಭರತನಾಟ್ಯದ ಶಿಕ್ಷಣ ನೀಡುತ್ತಿದ್ದರು. ಹೀಗೆ ಕ್ರಮೇಣ ಅವರಲ್ಲಿ ಅದರ ಬಗ್ಗೆ ಆಸಕ್ತಿ ಮೊಳೆಯಿತು.

ರಂಗಪ್ರವೇಶ

ಕೆಲವು ವರ್ಷ ಭರತನಾಟ್ಯ ಕಲಿತು ಅವರು ಅದನ್ನು ಬಿಟ್ಟುಬಿಟ್ಟು ಕಾಲೇಜು ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ದಿನಗಳಲ್ಲಿ ನಾಗಾಭರಣ ಅವರು ವೈವಿಧ್ಯಮಯ ನಾಟಕಗಳನ್ನು ರಂಗಕ್ಕೆ ತಂದು ಹೊಸ ಅಲೆ ಎಬ್ಬಿಸಿದ್ದರು. ಡಾ. ಚಂದ್ರಶೇಖರ ಕಂಬಾರರ `ಸಂಗ್ಯಾ ಬಾಳ್ಯಾ' ನಾಟಕದಲ್ಲಿ `ನೃತ್ಯ ಹಿನ್ನೆಲೆ ಇರುವ ಹುಡುಗಿ ಬೇಕಾಗಿದ್ದಾಳೆ' ಎಂಬ ವಿಷಯ ವೈಜಯಂತಿಯ ತಂದೆತಾಯಿಯ ಕಿವಿಗೆ ಬಿದ್ದಿತು. ಅವರು ಮಗಳಿಗೆ `ನೀನು ಭರತನಾಟ್ಯವನ್ನಂತೂ ಬಿಟ್ಟಿರುವೆ. ಈಗ ನಾಟಕದಲ್ಲಾದರೂ ಅಭಿನಯಿಸು,' ಎಂದು ಆಗ್ರಹಿಸಿದ ಬಳಿಕವೇ  ವೈಜಯಂತಿ `ಸಂಗ್ಯಾ ಬಾಳ್ಯಾ' ನಾಟಕದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದರು. ಆ ನಾಟಕದ ಮುಖ್ಯ ಪಾತ್ರಧಾರಿ ವಿಜಯ್‌ ಕಾಶಿ. ಈ ನಾಟಕ ತುಂಬಾ ಪ್ರಸಿದ್ಧಿ ಪಡೆಯಿತು. ದೂರದ ಅಹಮದಾಬಾದ್‌ನಲ್ಲೂ ಪ್ರದರ್ಶನ ಕಂಡದ್ದು ಇದರ ಹೆಚ್ಚುಗಾರಿಕೆ ಎನ್ನಬಹುದು. ಈ ನಾಟಕದಿಂದ ವಿಜಯ್‌ ಕಾಶಿ ಮತ್ತು ವೈಜಯಂತಿ ಜೋಡಿ ಬಹಳ ಪ್ರಸಿದ್ಧಿ ಪಡೆಯಿತು. ಬಳಿಕ ಇದೇ ಜೋಡಿ `ಸನ್ನಿವೇಶ, ಯಯಾತಿ, ಗೂಡು' ಹೀಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ