ದೇಶದ ಪ್ರತಿಷ್ಠಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರುವ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ರೋಗಿಗಳಿಗೆ ದೇಣಿಗೆ ನೀಡಲಾಯಿತು.

ಬೆಂಗಳೂರಿನ ಉದ್ಯಮಿಗಳಾಗಿರುವ ಸಫಿನಾ ಪ್ಲಾಜಾ, ಸಫೀನಾ ಟವರ್‌ ಮಾಲೀಕರಾದ ಹಾಜಿ ಸತ್ತಾರ್‌ ಸೇಠ್‌ ಪುತ್ರಿ ಸಬ್ರಿನಾ ಅಹಮದ್‌ ಅವರು  100 ಟ್ರಾವೆಲಿಂಗ್ ಬ್ಯಾಗ್‌ಗಳು, 100 ಸ್ಟೀಲ್ ಪ್ಲೇಟ್‌ಗಳು. ಗ್ಲಾಸ್‌ಗಳು ಮತ್ತು ಚಮಚಗಳನ್ನು ದಾನ ಮಾಡಿದರು.

ಕಮಾಂಡೆಂಟ್ ಕೆಎಸ್‌ಆರ್‌ಪಿ ಬೆಟಾಲಿಯನ್ ಅಧೀಕ್ಷಕರಾದ ಹಮ್ಜಾ ಹುಸೇನ್ ಇದೇ ಸಂದರ್ಭದಲ್ಲಿ ಬಡ ಕ್ಯಾನ್ಸರ್ ಮಕ್ಕಳಿಗೂ ವಿಶೇಷ ದಾನ ನೀಡಿದರು.

ಈ ವಿಷಯವನ್ನು ತಿಳಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ನವೀನ್ ಟಿ. ಇದರಿಂದ ರೋಗಿಗಳಿಗೆ ಹಾಗೂ ಮಕ್ಕಳಿಗೆ ಸಂತಸ ತರಲಿದೆ. ಉದ್ಯಮಿಗಳು ಈ ರೀತಿಯ ದಾನಗಳನ್ನು ಹೆಚ್ಚಾಗಿ ಮಾಡಬೇಕು ಎಂದರು.

ಪೀಡಿಯಾಟ್ರಿಕ್ ಆಂಕೊಲಾಜಿ ಎಚ್‌ಒಡಿ ಡಾ. ಅರುಣ್ ಕುಮಾರ್, ಹಿರಿಯ ವೈದ್ಯಾಧಿಕಾರಿ ಡಾ. ಮಹಾಂತೇಶ್ ಉದಾತ್ತ ದಾನ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ