ಭಾರತದ ಖೋ ಖೋ ಫೆಡರೇಷನ್ (ಕೆಕೆಎಫ್ಐ) ಮುಂದಿನ ಮೂರನೇ ಸೀಸನ್ ನ ಅಲ್ಟಿಮೇಟ್ ಖೋ ಖೋ (ಯುಕೆಕೆ) ಆಟಗಾರರ ಹರಾಜಿಗೆ ಮೊದಲ ಬಾರಿಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸಲಾಗುವುದು ಎಂದು ಘೋಷಿಸಿದೆ.  ಈ ಘೋಷಣೆಯನ್ನು KKFI ಅಧ್ಯಕ್ಷ ಸುಧಾಂಶು ಮಿತ್ತಲ್ ಅವರು ಶುಕ್ರವಾರ (ಜೂನ್ 13) ಶ್ರೀ ಗುರು ಗೋಬಿಂದ್ ಸಿಂಗ್ ಟೆರ್ಸೆಂಟೆನರಿ (SGT) ವಿಶ್ವವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಹರಿಯಾಣ ಸರ್ಕಾರದ ರಾಜ್ಯ ಸಚಿವ ಗೌರವ್ ಗೌತಮ್ ಮಾತನಾಡಿ, ಕೆಕೆಎಫ್ಐಯು ಖೋ ಖೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮತ್ತು ಹರಿಯಾಣದಲ್ಲಿ ಕ್ರೀಡಾ ಅಭಿವೃದ್ಧಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೊ. ಡಾ. ಹೇಮಂತ್ ವರ್ಮಾ  (SGT ವಿಶ್ವವಿದ್ಯಾಲಯದ ಕುಲಪತಿ), ಅಮೃತ್ ಸಿಂಗ್ ಚಾವ್ಲಾ (SGT ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು) ಮತ್ತು ಜವಾಹರ್ ಸಿಂಗ್ ಯಾದವ್ (ಹರಿಯಾಣ ಖೋ ಖೋ ಫೆಡರೇಶನ್ ಅಧ್ಯಕ್ಷ) ಮಾತನಾಡಿ, ಖೋ ಖೋ ಆಟವನ್ನು ಹರಿಯಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗುವುದು. ಆಟಗಾರರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ KKFI ಮತ್ತು SGT ವಿಶ್ವವಿದ್ಯಾಲಯವು ದೇಶೀಯ ಕ್ರೀಡೆಗಳಿಗಾಗಿ ಶಿಕ್ಷಣ ಮತ್ತು ವೈಜ್ಞಾನಿಕ ಸಂಪತ್ತು ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವ ಉದ್ದೇಶದಿಂದ ಒಪ್ಪಂದ ಪತ್ರವೊಂದಕ್ಕೆ ಸಹಿ ಮಾಡಲಾಯಿತು.

ಈ ಬಗ್ಗೆ ಮಾತನಾಡಿದ  ಸುಧಾಂಶು ಮಿತ್ತಲ್ 'ಖೋ ಖೋ ಭಾರತದ ಕ್ರೀಡಾ ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ. ಅಲ್ಟಿಮೇಟ್ ಖೋ ಖೋ ಸೀಸನ್ 3 ನವೆಂಬರ್ 29, 2025 ರಿಂದ ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಲೀಗ್​ಗೆ  ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸುವ ಮೂಲಕ ನಾವು ಇನ್ನೊಂದು ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ಎಂದರು.

SGT ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ – ಆಡಳಿತ ಮಟ್ಟದ ತರಬೇತಿ ಶಿಬಿರ (Level III A) ಬಗ್ಗೆ ಕೂಡ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತದ ವಿವಿಧ 30 ರಾಜ್ಯಗಳಿಂದ ಮತ್ತು 15ಕ್ಕೂ ಹೆಚ್ಚು ದೇಶಗಳಿಂದ ಸುಮಾರು 230ಕ್ಕೂ ಹೆಚ್ಚು ಕೋಚ್‌ಗಳು ಮತ್ತು ತಾಂತ್ರಿಕ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

2022ರಲ್ಲಿ ಆರಂಭವಾದ UKK ಈಗಾಗಲೇ ಪ್ರಖ್ಯಾತಿಯನ್ನು ಗಳಿಸಿದ್ದು, ಪ್ರೋ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ನಂತರದ ದೇಶದ ಮೂರನೇ ಅತ್ಯಧಿಕ ವೀಕ್ಷಿತ ಕ್ರೀಡಾ ಲೀಗ್ ಆಗಿದೆ. ಮೊದಲ ಸೀಸನ್‌ನಲ್ಲಿ ಒಡಿಶಾ ಜಗರ್‌ನಾಟ್ಸ್ ವಿಜೇತರಾದರೆ, 2023–24ರಲ್ಲಿ ಗುಜರಾತ್ ಜೈಂಟ್ಸ್ ಚಾಂಪಿಯನ್ ಆಗಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ