ಕತ್ತಲಿಗೊಂದು ಕವಿತೆ

ಬೆಳಕ ಜಗಲಿಯಂಚಿಗೆ

ಒಂದು ಕತ್ತಲಂಥಾ ನೆರಳು

ಕಮ್ಮಗೆ ಕೂತು ನೋಡುತ್ತದೆ.

ಸಣ್ಣಗೆ ಸರಿದೂ ಸರಿಯಲಾರದೆ

ಹರಿದೂ ಹರಿಯಲಾರದೆ

ಕತ್ತಲ ಕಥೆಯ ಮೆಲುಕು ಹಾಕುತ್ತದೆ.

ಕಪ್ಪು ಕತ್ತಲಲ್ಲಿ ಹಗೆ ಇಲ್ಲ ಧಗೆ ಇಲ್ಲ

ಇಲ್ಲ ಅವರು, ಇವರು, ನಾವು, ನೀವು...

ನಿದ್ದೆಗೂ ಎಚ್ಚರಕ್ಕೂ ನಡುವೆ

ಕಾಲುದಾರಿಯ ತುಂಬ ಕನಸುಗಳು

ಅರಳರಳಿ ಘಳಿಗೆ ಘಳಿಗೆಗೊಂದೊಂದು

ಹೊಸಲೋಕ….. ಹೀಗೆ ಕತ್ತಲಿಗೊಂದು ಕವಿತೆ ಸೇರಿದಂತೆ ಹಲವಾರು ಕವಿತೆಗಳ ಮೆರವಣಿಗೆಗಳ ಮೂಲಕ ಕನ್ನಡದ ಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಮಮತಾ ಜಿ. ಸಾಗರ್ ಅವರಿಗೆ ಸಲ್ಲುತ್ತದೆ. ರಾಜಕೀಯ, ಸ್ತ್ರೀವಾದ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸುತ್ತಲಿನ ಸಮಸ್ಯೆಗಳ ಮೇಲೆಯೇ ಕೇಂದ್ರೀಕರಿಸುವ ಅವರ ಕವಿತೆಗಳು ಎಂತಹರನ್ನೂ ಚಿಂತನೆಗೆ ಹಚ್ಚದೆ ಬಿಡವು.

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕವಯತ್ರಿಯಾಗಿ ಗಮನ ಸೆಳೆದಿದ್ದ ಮಮತಾ, ಕಾಡ ನವಿಲಿನ ಹೆಜ್ಜೆ, ನದಿಯ ನೀರ ತೇವ, ಹೀಗೆ ಹಾಳೆಯ ಮೇಲೆ ಹಾಡು, ಮಹಿಳಾ ವಿಷಯ, ಇಲ್ಲಿ ಸಲ್ಲುವ ಮಾತು, ಇಂಟರ್ವೆನ್ಶನ್, ಮಧ್ಯಂತರಗಳು, ಪದಸಂಚಾರ ಸೇರಿದಂತೆ ಅವರ ಹಲವಾರು ಕವನ ಸಂಕಲನಗಳ ಸರಪಳಿ ಬೆಳೆಯುತ್ತಾ ಹೋಗುತ್ತದೆ. ಚುಕ್ಕಿ ಚುಕ್ಕಿ ಚಂದಕ್ಕಿ, ರಾಜಕುಮಾರಿಯ ಕಥೆ, ಮೈಯೇ ಭಾರ ಮನಸೇ ಭಾರ, ಆ ಒಂದು ರಾತ್ರಿ ಎಂಬ ನಾಟಕಗಳನ್ನು ಬರೆದಿದ್ದಾರೆ. ಹೈದರಾಬಾದ್ ಯುನಿವರ್ಸಿಟಿಯಲ್ಲಿ ಪಿಎಚ್​ಡಿ ಪದವಿ ಗಳಿಸಿ, ಹೈಡ್ ಅಂಡ್ ಸೀಕ್ ಎಂಬ ಕವಿತೆಗಳ ಅನುವಾದ ಸಂಕಲನ ಪ್ರಕಟಿಸಿದ್ದಾರೆ.

Mamta sagar (4)

ಮಮತಾ ಅವರ ಕವಿತೆ, ಗದ್ಯ ಮತ್ತು ವಿಮರ್ಶಾತ್ಮಕ ಬರಹಗಳನ್ನು ಕನ್ನಡ ಮತ್ತು ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ಅವರ ಸ್ವಂತ ಕವನಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಜೈನ್ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕೇರಳ ವಿಶ್ವವಿದ್ಯಾಲಯದಿಂದ ಪಠ್ಯಪುಸ್ತಗಳಲ್ಲಿ ಸೇರಿಸಲಾಗಿದೆ.

ಆಫ್ರಿಕಾ, ಲ್ಯಾಟಿನ್ ಅಮೇರಿಕ, ಯೋರೋಪ್ ಹಲವು ಭಾಷೆಗಳಿಂದ ಕನ್ನಡಕ್ಕೆ ಕೃತಿಗಳನ್ನು ತಂದಿರುವ ಅವರ “ಪ್ರೀತಿಯ 40 ನಿಯಮಗಳು” ಅನುವಾದಿತ ಕೃತಿಗೆ ಕುವೆಂಪು ಭಾಷಾ ಭಾರತಿ ಪುರಸ್ಕಾರವೂ ದೊರೆತಿದೆ. ಜರ್ಮನ್, ಸ್ಪ್ಯಾನಿಷ್, ಜಪಾನೀಸ್ ಹೀಗೆ 10ಕ್ಕೂ ಹೆಚ್ಚು ಭಾಷೆಗಳಿಗೆ ಅವರ ಕವನಗಳು ಅನುವಾದಗೊಂಡಿವೆ. 20ಕ್ಕೂ ಹೆಚ್ಚು ಅಂತರಾಷ್ಟ್ರೀಯ ಕಾವ್ಯ ಹಬ್ಬಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆ ಮಮತಾ ಜಿ. ಸಾಗರ್ ಅವರದು.

ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಾಗಿ 2024ರಲ್ಲಿ ನೈಜೀರಿಯಾದ ಅಂಬುಜದಲ್ಲಿ ವರ್ಲ್ಡ್ ಆರ್ಗನೈಸೇಷನ್ ಆಫ್ ರೈಟರ್ಸ್ (ಡಬ್ಯುಒಡಬ್ಯು) ನೀಡುವ ಜಾಗತಿಕ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಪುರಸ್ಕೃತರಾದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆ ಮಮತಾ ಜಿ. ಸಾಗರ್ ಅವರದು.

ನಾವು ಎಲ್ಲಿ ಸೋಲುತ್ತೇವೋ, ಅಲ್ಲಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕು ಎನ್ನುವ ಮಮತಾ ಸಾಗರ್, ಕನ್ನಡದ ಮೊದಲ ಟೆಸ್ಟ್​ನಲ್ಲಿ ಫೇಲ್ ಆದರೂ ಅದೇ ಕನ್ನಡದಲ್ಲಿ ಕವಿಯಾಗಿ ತನ್ನ ಪ್ರತಿಭೆಗೆ ಜಗತ್ತು ಹೆಮ್ಮೆ ಪಡುವಂತೆ ಬೆಳೆದ ಈ ದಿಟ್ಟ ಕನ್ನಡತಿ, “ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯನ್ನು ಕುರಿತು ಚಿಂತಿಸುವ ಅಗತ್ಯವಿದೆ.” ಎಂದಿದ್ದಾರೆ.

ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಮಮತಾ ಜಿ ಸಾಗರ್, ಸದ್ಯ ಸೃಷ್ಟಿ ಮಣಿಪಾಲ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಯುವ ಮನಸ್ಸುಗಳ ಒಡನಾಟದಲ್ಲಿ, ಸೃಜನಶೀಲ ಚಿಂತನ ಮಂಥನಗಳ ಜೊತೆಗೂಡುವಿಕೆಯಲ್ಲಿ, ಮಮತಾ ಕಲ್ಪನೆಯ ಮೂಸೆಯಲ್ಲಿ  “ಕಾವ್ಯ ಸಂಜೆ” ಹೊರಹೊಮ್ಮಿದೆ. ಈ ವೇದಿಕೆಯನ್ನು ಕಟ್ಟಿ ಯುವ ಮನಸ್ಸುಗಳಿಗಾಗಿ ವೇದಿಕೆ ಕಲ್ಪಿಸಿದ್ದಾರೆ. ಹೊಸ ಹೊಸ ಕಾವ್ಯ ಪ್ರಯೋಗಗಳ ಕೃಷಿಯನ್ನೂ ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ