ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ

ಬೀದರ ಜಿಲ್ಲೆಯ ಸೀಬೆಯ, ಹಣ್ಣು ಬೆಂಗಳೂರಿನ ಸೇಬಿನ ಹಣ್ಣು ||

ಕೊಳ್ಳಿರಿ ಹಿಗ್ಗನು ಹರಿಸುವವು,ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ ||

ಬೆಳಗಾವಿಯ ಸವಿ ಸಪೋಟ. ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ||

ಗಂಜಾಮ್ ಅಂಜೀರ್, ತುಮಕೂರ್ ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ ಕನ್ನಡ ನಾಡಿನ ಹಣ್ಣುಗಳ ||

mango2

ಸದ್ಯಕ್ಕೆ ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ ಅಪ್ಪಟ್ಟ ಕನ್ನಡಿಗರೇ ಇರುವ ಕಾಸರಗೋಡಿನ ಹೆಮ್ಮೆಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಬರೆದಿದ್ದ ಕನ್ನಡನಾಡಿನ ಹಣ್ಣುಗಳ ಹಾಡು ಎಪ್ಪತ್ತರ ದಶಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಹುತೇಕರಿಗೆ ಕಂಠ ಪಾಟವಾಗಿರಲೇ ಬೇಕು. ಕಾಲಕಾಲಕ್ಕೆ ತಕ್ಕಂತೆ ಮತ್ತು ಸ್ಥಳೀಯ ಹವಾಗುಣಕ್ಕೆ ಅನುಗುಣವಾಗಿ ಹಣ್ಣುಗಳನ್ನು ಬೆಳೆಯುತ್ತವೆ. ಬೇಸಿಗೆ ಕಾಲ ಬಂತೆದರೆ ಸಾಕು, ಬಗೆ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಎಲ್ಲರ ನಾಲಿಗೆಯ ಬರವನ್ನು ನೀಗಿಸಲು ಲಭ್ಯವಿರುತ್ತದೆ.

mango1

ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಮತ್ತು ದೈತ್ಯಾಕಾರದ ಹಲಸಿನಹಣ್ಣು ಈ ಎರಡೂ ಹಣ್ಣುಗಳು ಬೇಸಿಗೆ ಕಾಲದಲ್ಲಿ ಲಭ್ಯವಿರುತ್ತದೆ. ಅದಕ್ಕಾಗಿಯೇ ಹಸಿದು ಹಲಸಿನಹಣ್ಣು ತಿನ್ನು, ಉಂಡು ಮಾವಿನ ಹಣ್ಣು ತಿಂದು ಎಂಬ ಗಾದೆಯ ಮಾತಿದ್ದರೆ, ಅದಕ್ಕೆ ಅನುಗುಣವಾಗಿ ಹಿಸಿದು ಹಲಸಿನ ಹಣ್ಣು ತಿನ್ನು, ಉಂಡೇ ಮಾವಿನ ಹಣ್ಣು ತಿನ್ನು ಎನ್ನುವ ಮತ್ತೊಂದು ಗಾದೆಯ ಮಾತೂ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹಸಿದೋ, ಇಲ್ಲವೇ ಹಿಸಿದೋ (ಬಿಡಿಸಿದ) ಉಂಡಾದ ನಂತರವೋ ಇಲ್ಲವೇ, ಉಂಡೇಯಾಗಿಯೋ (ಇಡೀ ಮಾವಿನ ಹಣ್ಣು) ಕಾಲ ಕಾಲಕ್ಕೆ ಸಿಗುವ ಹಣ್ಣುಗಳನ್ನು ತಿಂದು ಸಧೃಢರಾಗಿರಿ ಎಂಬುದಷ್ಟೇ ನಮ್ಮ ಹಿರಿಯರ ಆಶಯವಾಗಿತ್ತು ಎಂದರೂ ತಪ್ಪಾಗದು.

ಎಷ್ಟೋಂದು ಬಗೆಯ ಹಣ್ಣುಗಳಿದ್ದರೂ ಅದೇಕೋ ಏನೋ ಮಾವಿನ ಹಣ್ಣಿಗೆ ಮಾತ್ರ, ಹಣ್ಣುಗಳ ರಾಜನ ಪಟ್ಟ ಕಟ್ಟಲಾಗಿದೆ. ಬಹುಶಃ ಕೇಸರಿ ಮತ್ತು ಹಳದಿ ಮಿಶ್ರಿತ ಅದರ ಆಕರ್ಷಕ ಬಣ್ಣ, ಸಿಹಿಯಾದ ಅದರ ರುಚಿ ಮತ್ತು ಅದರಲ್ಲಿರುವ ಪೋಷಕಾಂಶಗಳು ಇರುವ ಕಾರಣ ಆ ಪಟ್ಟ ಬಂದಿರಬಹುದೇನೋ?

ಮಾವಿನ ಎಲೆ, ಮರ, ಮಾವಿನ ಕಾಯಿ, ಮಾವಿನ ಹಣ್ಣು, ಕಡೆಗೆ ಮಾವಿನ ಹಣ್ಣಿನ ವಾಟೆಯೂ(ಗೊರಟೆ) ನಮ್ಮ ಸಂಸ್ಕೃತಿಯ ಅವಿನಾಭಾವ ಸಂಬಂಧವಿದೆ. ಮನೆಯಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿಯೂ ಮಾವಿನ ಸೊಪ್ಪಿನ ತಳಿರು ತೋರಣವಿರಲೇ ಬೇಕು. ಕಳಸ ಸ್ಥಾಪನೆ ಮಾಡುವುದಕ್ಕೂ ಮತ್ತು ಪೂಜೆಯ ನಂತರ ಕಳಸದ ನೀರನ್ನು ಪ್ರೋಕ್ಷಿಸುವುದಕ್ಕೂ ಮಾವಿನ ಸೊಪ್ಪು ಅತ್ಯಾವಶ್ಯಕ. ಇನ್ನು ಮಾವಿನರ ಮರ ಮಟ್ಟುಗಳಿಂದ ಮನೆಯ ಕಿಟಕಿ ಬಾಗಿಲುಗಳನ್ನು ಮಾದಿಸಿಕೊಳ್ಳಲಾಗುತ್ತದೆ. ಮಾವಿನ ಕಾಯಿಯಂತೂ ನಮ್ಮ ಅಡಿಗೆ ಮನೆಯಲ್ಲಿ ಶಾಶ್ವತವಾದ ಸ್ಥಾನ ಪಡೆದಿದೆ. ಮಾವಿನ ಕಾಯಿಯ ತಂಬುಳಿ, ಮಾವಿನ ಕಾಯಿ ಚಿತ್ರಾನ್ನ, ಕಾಯಿಸಾಸಿವೆ ಅನ್ನ, ಮಾವಿನ ಕಾಯಿ ಗೊಜ್ಜು, ಅಪ್ಪೇ ಸಾರು, ಮಾವಿನ ಕಾಯಿಯ ಉಪ್ಪಿನ ಕಾಯಿಯಂತೂ ವರ್ಷವಿಡೀ ಇರುತ್ತದೆ, ಮಾವಿನ ಹಣ್ಣನ್ನು ಹಾಗೆಯೇ ತಿನ್ನಲು ಮಜವಾಗಿದ್ದರೆ, ಇನ್ನೂ ಕೆಲವರು ಮಾವಿನ ಹಣ್ಣಿನ ಮೊರಬ್ಬಾ, ಜ್ಯಾಮ್, ಸೀಕರಣೆ, ಲಸ್ಸೀ ಹೀಗೆ ಬಗೆ ಬಗೆಯ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಮಾವಿನ ಹಣ್ಣುಗಳನ್ನು ಸೇವಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ