-ಶ್ರೀವತ್ಸ ಜೋಶಿ

ಅಧಿಕಮಾಸ ನಡೆಯುತ್ತಿದೆ. ಇದರ ಬಗ್ಗೆ ಲೇಖನಗಳು, ವಿವರಗಳು ಪತ್ರಿಕೆಗಳಲ್ಲಿ ಈಗಾಗಲೇ ಸಾಕಷ್ಟು ಪ್ರಕಟವಾಗಿವೆ. ಎರಡು ಅಮಾವಾಸ್ಯೆಗಳ ನಡುವಿನ ಅವಧಿಯಲ್ಲಿ- ಅಂದರೆ ಒಂದು ಚಾಂದ್ರಮಾನ ಮಾಸದಲ್ಲಿ- ಸಾಮಾನ್ಯವಾಗಿ ಒಂದು ಸಂಕ್ರಮಣ ಬರುತ್ತದೆ, ಒಂದುವೇಳೆ ಬರದಿದ್ದರೆ ಆ ಚಾಂದ್ರಮಾನ ಮಾಸವನ್ನು ಅಧಿಕಮಾಸ ಎನ್ನಲಾಗುತ್ತದೆ, ಇದನ್ನು ಪೂಜ್ಯ ಭಾವದಿಂದ ಪುರುಷೋತ್ತಮ ಮಾಸವೆಂದೂ ನಿಕೃಷ್ಟ ಭಾವದಿಂದ ಮಲಮಾಸವೆಂದೂ ಕರೆಯಲಾಗುತ್ತದೆ, ಸೌರಮಾನಕ್ಕಿಂತ ಚಾಂದ್ರಮಾನದ ವರ್ಷಗಣನೆಯಲ್ಲಿ ಸುಮಾರು 11 ದಿನಗಳು ಕಡಿಮೆ ಇರುವುದು, ಈ ವ್ಯತ್ಯಾಸ ವೃದ್ಧಿಸುತ್ತ ಹೋಗಿ ಸರಿಸುಮಾರು 33 ತಿಂಗಳಿಗೊಮ್ಮೆ ಒಂದಿಡೀ ತಿಂಗಳಷ್ಟಾಗುವುದು, ಮತ್ತು ಅದನ್ನೇ ಅಧಿಕಮಾಸ ಎನ್ನುವುದು, ತನ್ಮೂಲಕ ಚಾಂದ್ರಮಾನ ಹಬ್ಬಹರಿದಿನಗಳ ಆಚರಣೆಯು ಪ್ರಕೃತಿಯ ತಾಳಮೇಳಕ್ಕಿಂತ ಬಹುದೂರ ಸಾಗದೆ ಹೊಂದಿಕೊಂಡೇ ಇರುವಂತೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವುದು, ಅಧಿಕಮಾಸದಲ್ಲಿ ವಿವಾಹ ಉಪನಯನಾದಿ ಮಂಗಲಕಾರ್ಯಗಳನ್ನು ನಡೆಸದೆ ಇರುವುದು, ಬದಲಿಗೆ ದಾನಧರ್ಮಾದಿ ಪುಣ್ಯಕಾರ್ಯಗಳಿಗೆ ಮತ್ತು ಉಪವಾಸ ನೇಮನಿಷ್ಠೆಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವುದು, ಮುಖ್ಯವಾಗಿ 33 ಸಂಖ್ಯೆಯ ‘ಅಪೂಪ’ಗಳ ದಾನ/ಬಾಗಿನ ಕೊಡುವುದು... ಇವು ಅಧಿಕಮಾಸದ ಬಗೆಗಿನ ಸಾಮಾನ್ಯ ಜ್ಞಾನ ಮಾಹಿತಿಯ ಮುಖ್ಯಾಂಶಗಳು.

ಇದರಲ್ಲಿ ನಾವು ಇಂದಿನ ಅಂಕಣಬರಹದ ಮಟ್ಟಿಗೆ 33 ಸಂಖ್ಯೆಯ ಅಪೂಪಗಳ ದಾನ ಎಂಬುದಷ್ಟನ್ನೇ ಗಮನಿಸಿದರೆ ಸಾಕು. ಮೊದಲನೆಯದಾಗಿ ಅಪೂಪ ಎಂದರೇನು? ಸಂಸ್ಕೃತ-ಕನ್ನಡ ನಿಘಂಟುವಿನ ಪ್ರಕಾರ ಅಪೂಪ ಎಂದರೆ “ಹಿಟ್ಟಿನಿಂದ ಮಾಡಿದ ರೊಟ್ಟಿ, ದೋಸೆ, ಹೋಳಿಗೆ, ಕಜ್ಜಾಯ ಮೊದಲಾದವು” ಎಂದು ಅರ್ಥ. ಬಾಯಿಯಲ್ಲಿ ನೀರೂರಿಸಬಹುದಾದ ಇನ್ನಷ್ಟು ಉದಾಹರಣೆಗಳಿಂದಲೇ ಹೇಳಬೇಕಿದ್ದರೆ- ಅತಿರಸ, ಚಕ್ಕುಲಿ, ಕೋಡುಬಳೆ, ತೇಂಗೊಳಲು, ಎರೆಯಪ್ಪ, ನಿಪ್ಪಟ್ಟು ಮುಂತಾದುವೆಲ್ಲವೂ ಅಪೂಪಗಳೇ. ದೇವರಿಗೆ ನೈವೇದ್ಯ ಮಾಡುವಾಗ “ಅಪೂಪ ಮಹಾನೈವೇದ್ಯಂ ಸಮರ್ಪಯಾಮಿ” ಎಂದು ಮಂತ್ರೋಚ್ಚಾರಣೆ. ಪ್ರತಿಯೊಂದು ಅಪೂಪದಲ್ಲಿ ವಿಷ್ಣು ಜಿಷ್ಣು ಮೊದಲಾದ ಭಗವದ್ರೂಪಗಳನ್ನು ಚಿಂತಿಸಿ ಒಟ್ಟು 33 ಅಪೂಪಗಳನ್ನು ಅಧ್ಯಯನಶೀಲರಾದ ಸದ್ಬ್ರಾಹ್ಮಣರಿಗೆ ಪ್ರತಿನಿತ್ಯವೂ ಚಿನ್ನದ ಸಮೇತ ಕಂಚಿನ ಪಾತ್ರೆಯಲ್ಲಿರಿಸಿ ದಾನ ಮಾಡಬೇಕು ಅಂತ ಅಧಿಕಮಾಸದ ವ್ರತನಿಯಮಗಳ ಬಗ್ಗೆ ಶಾಸ್ತ್ರಗಳಲ್ಲಿ ಹೇಳಿರುವುದು. ಇದನ್ನು ತಿಳಿಸುವ ಶ್ಲೋಕಗಳೂ ಇವೆ: “ಅಧಿಮಾಸೇ ತು ಸಂಪ್ರಾಪ್ತೇ ಶುಭೇ ಸೂರ್ಯಾದಿದೈವತೇ| ತ್ರಯಸ್ತ್ರಿಂಶದಪೂಪಾಂಶ್ಚ ದಾನಾರ್ಹಾಂಶ್ಚ ದಿನೇದಿನೇ|| ಸುವರ್ಣ ಗುಡಸಂಯುಕ್ತಾನ್ ಕಾಂಸ್ಯಪಾತ್ರೇ ನಿಧಾಯ ಚ| ವಿಷ್ಣುಪ್ರೀತ್ಯೈ ಪ್ರದದ್ಯಾಶ್ಚ ಪೃಥ್ವೀದಾನಫಲಂ ಲಭೇತ್||” ಇಲ್ಲಿ ಕೆಲ ಪದಗಳನ್ನು ಗಮನಿಸಿ: ತ್ರಯಸ್ತ್ರಿಂಶತ್ ಅಂದರೆ 33. ಕಾಂಸ್ಯಪಾತ್ರೇ ಅಂದರೆ ಕಂಚಿನ ಪಾತ್ರೆಯಲ್ಲಿ. ಸುವರ್ಣ ಗುಡಸಂಯುಕ್ತಾನ್ ಅಂದರೆ ಬೆಲ್ಲ ಮತ್ತು ಬಂಗಾರದ ಜೊತೆಗೆ. ಆದರೇನು ಮಾಡುವುದು ಈಗ ಮನೆಯಲ್ಲಿದ್ದ ಬಂಗಾರವನ್ನಷ್ಟೇ ದಾನ ಮಾಡಬಹುದೇ ಹೊರತು ಹೊಸದಾಗಿ ಕೊಳ್ಳಬೇಡಿರೆಂದು ಪ್ರಧಾನಸೇವಕ ಮೋದಿಯವರು ಕೇಳಿಕೊಂಡಿದ್ದಾರೆ. ಚಿಂತೆಯೇನಿಲ್ಲ, ಬೇರೆ ಕೆಲ ಶ್ಲೋಕಗಳಲ್ಲಿ ಬಂಗಾರದ ಪ್ರಸ್ತಾವವಿಲ್ಲ, ಘೃತಸಂಯುತಾನ್ ಅಂದರೆ ತುಪ್ಪದೊಡನೆ ಎಂದು ಹೇಳಲಾಗಿದೆ. ಅತಿರಸ ಎರೆಯಪ್ಪಗಳನ್ನೆಲ್ಲ ತುಪ್ಪದಲ್ಲೇ ಕರಿಯುವುದೂ ಉಂಟಲ್ಲ, ಆಗ ಪ್ರತ್ಯೇಕವಾಗಿ ತುಪ್ಪವೂ ಬೇಡವೇನೋ. ಇರಲಿ, ಒಟ್ಟಿನಲ್ಲಿ ಇಂತಹ ದಾನವು ಪೃಥ್ವೀದಾನದ ಫಲವನ್ನೇ ತಂದುಕೊಡುತ್ತದೆನ್ನಲಾಗಿದೆ. ಒಂದು ವೇಳೆ ಅಪೂಪಗಳನ್ನು ಮಾಡಲು ಸಾಧ್ಯವಾಗದಿದ್ದರೆ ಅದರ ಬದಲಿಗೆ 33 ಹಣ್ಣುಗಳು, 33 ನಾಣ್ಯಗಳು, 33 ವೀಳ್ಯದೆಲೆ, 33 ದೀಪಗಳು, 33 ಅರಿಶಿನ-ಕುಂಕುಮದ ಪ್ಯಾಕೆಟ್‌ಗಳು, 33 ಬಳೆಗಳು ಹೀಗೆ ಯಾವುದೇ ಯೋಗ್ಯ ವಸ್ತುವನ್ನಾದರೂ ದಾನ ಮಾಡಬಹುದು. ಪೃಥ್ವೀದಾನದಷ್ಟಲ್ಲದಿದ್ದರೂ ಸ್ವಲ್ಪ ಪುಣ್ಯವಂತೂ ಸಿಕ್ಕೇಸಿಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ