ದೇಶದ ಭವಿಷ್ಯವನ್ನು ರೂಪಿಸುವ ಹಾಗೂ ಆರೋಗ್ಯವಂತ ನಾಗರಿಕರನ್ನು ತಯಾರು ಮಾಡುವ ಮಹಿಳೆಯರೇ ಮತ್ತಿನಲ್ಲಿ ಮುಳುಗಿಹೋದರೆ ಸಮಾಜ ಹಾಗೂ ಕುಟುಂಬಕ್ಕೆ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡಲು ಸಾಧ್ಯವೇ? ಅದನ್ನು ಅರಿತುಕೊಳ್ಳಲು ಪ್ರಯತ್ನಿಸಿ…..!

ಕಳೆದ ಕೆಲವು ವರ್ಷಗಳಿಂದ ಮಹಿಳೆಯರ ಕುಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಒಂದು ಮುಖ್ಯ ಕಾರಣವೇನೆಂದರೆ, ಮದ್ಯ ತಯಾರಿಕಾ ಕಂಪನಿಗಳು ಮದ್ಯಪಾನ ಮಾಡುವ ಮಹಿಳೆಯರನ್ನು ಆಧುನಿಕ, ಸ್ವತಂತ್ರ ಪ್ರವೃತ್ತಿಯ, ಪುರುಷರ ಸರಿಸಮಾನ ಎಂದು ಬಿಂಬಿಸುತ್ತಿರುವುದು. ಬಿಯರ್‌, ವೈನ್‌ಗಳು ಈಗ ಹಳೆಯದಾಗಿ ಹೋಗಿವೆ. ಈಗ ಮದ್ಯದ ಅನೇಕ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿವೆ.

ಮಹಿಳೆಯರ ಆಯ್ಕೆ ಹಾಗೂ ಆಸಕ್ತಿಯಲ್ಲೂ ಬದಲಾವಣೆ ಉಂಟಾಗಿದೆ. ಮೊದಲು ಮದ್ಯ ನಗರ ಪ್ರದೇಶದ ಕೆಲವೇ ಕೆಲವು ಬಾರ್‌ಗಳಲ್ಲಿ ಲಭಿಸುತ್ತಿತ್ತು. ಆದರೆ ಈಗ ಮಹಿಳೆಯರ ಆಸಕ್ತಿಯನ್ನು ಗಮನಿಸಿ ಹೋಟೆಲ್ ಗಳು, ಬಾರ್‌ಗಳು ಪಬ್‌ಗಳು ಹಾಗೂ ಡಿಸ್ಕೋ ಥೆಕ್‌ಗಳಲ್ಲಿ ಮದ್ಯದ ಅನೇಕ ಬ್ರ್ಯಾಂಡ್‌ಗಳು ಸುಲಭವಾಗಿ ಲಭಿಸುತ್ತವೆ. ವೋಡ್ಕಾ, ವೈನ್‌, ವಿಸ್ಕಿ ಮುಂತಾದವುಗಳ ಕಾಕ್‌ಟೇಲ್ ‌ಗಳು ಆಧುನಿಕ ಯುವತಿಯರು ಹಾಗೂ ಗೃಹಿಣಿಯರಲ್ಲಿ ಪ್ರಚಲಿತವಾಗುತ್ತಿವೆ. ಅವರು ಕಿಟಿ ಪಾರ್ಟಿಗಳಲ್ಲಿ, ಮದುವೆ ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಕುಡಿಯಲು, ಕುಡಿಸಲು ಹಿಂದೇಟು ಹಾಕುವುದಿಲ್ಲ.

ಮದ್ಯ ಸೇವನೆಯ ಹಳೆಯ ಪರಂಪರೆಗಳಲ್ಲಿ ಮದ್ಯ ಸೇವಿಸುವ ಮಹಿಳೆಯರನ್ನು 2 ವರ್ಗಗಳಲ್ಲಿ ವಿಂಗಡಿಸಲಾಗುತ್ತಿತ್ತು. ಮೊದಲ ಗುಂಪಿನಲ್ಲಿ ಗುಡಿಸಲುಗಳಲ್ಲಿ ವಾಸಿಸುವ ದಲಿತರು, ವೇಶ್ಯೆಯರು ಬರುತ್ತಾರೆ. ಅವರಿಗೆ ನಶೆ ಒಂದು ರೀತಿಯ ಜೀವನೋಪಾಯದ ಮಾರ್ಗವಾಗಿತ್ತು. ಎರಡನೇ ಗುಂಪಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರೇರಿತರಾದವರು, ಭೌತಿಕ ಸುಖ ಸೌಲಭ್ಯ ಹೊಂದಿದ ಮಹಿಳೆಯರು ಈ ಗುಂಪಿಗೆ ಸೇರುತ್ತಾರೆ.

ಅವರು ಲೇಟ್‌ನೈಟ್‌ ಪಾರ್ಟಿಗಳಲ್ಲಿ  ಪಾಲ್ಗೊಳ್ಳುವುದನ್ನು ಹಾಗೂ ಗಂಡನ ಜೊತೆಗೆ ಎಕ್ಸಿಕ್ಯೂಟಿವ್‌ ಪಾರ್ಟಿಗಳಲ್ಲಿ ಕುಡಿಯುವುದನ್ನು ಸ್ಟೇಟಸ್‌ ಎಂದು ಭಾವಿಸುತ್ತಾರೆ. ಈಗ ಹೊಸದೊಂದು ವರ್ಗ ಸೇರ್ಪಡೆಗೊಂಡಿದೆ. ಕಾಲೇಜಿಗೆ ಹೋಗುತ್ತಿರುವ ಪ್ರತಿಷ್ಠಿತ ವರ್ಗದ ಹುಡುಗಿಯರು ತಡರಾತ್ರಿಯ ತನಕ ಡ್ಯಾನ್ಸ್ ಫ್ಲೋರ್‌ಗಳ ಮೇಲೆ ಕುಡಿದು, ಕುಣಿದು ಕುಪ್ಪಳಿಸುತ್ತಿರುತ್ತಾರೆ.

ಈ ವಿಷಯದ ಕುರಿತಂತೆ ಮನೋಚಿಕಿತ್ಸಕಿ ಶಕುಂತಲಾ ಹೀಗೆ ಹೇಳುತ್ತಾರೆ, ``ವೃತ್ತಿಪರ ಮಹಿಳೆಯರು, ಕುಡಿಯುವುದನ್ನು `ಸ್ಟೇಟಸ್‌ ಸಿಂಬಲ್' ಎಂದು ಭಾವಿಸಿದ್ದಾರೆ. ಅವರು ಕುಡಿಯುವುದರ ಮೂಲಕ ತಮ್ಮನ್ನು ತಾವು ಪುರುಷರ ಸರಿಸಮಾನ ಎಂದು ಭಾವಿಸುತ್ತಾರೆ. ಭೌತಿಕ ಸುಖ ಸೌಲಭ್ಯ ಜಾಸ್ತಿ ಇರುವ ಪುರುಷರು ಕುಡಿಯುವುದಾದರೆ, ನಾವೇಕೆ ಕುಡಿಯಬಾರದು? ಎನ್ನುವುದು ಅವರಿಗೆ ಕುಡಿಯಲು ಪ್ರೇರೇಪಿಸುತ್ತದೆ.

ಜೈಪುರ್‌ನ ಬಿರ್ಲಾ ಸಭಾಂಗಣದಲ್ಲಿ ನಡೆದ `ಮಹಿಳೆ ಹಾಗೂ ನಶೆ' ವಿಷಯದ ಚರ್ಚೆಯಲ್ಲಿ ಹೊರಬಿದ್ದ ಕೆಲವು ಸಂಗತಿಗಳು ಅಚ್ಚರಿ ಮೂಡಿಸುವಂತಿವೆ. ಅಲ್ಲಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ಮದ್ಯ ಸೇವನೆ ಮಾಡುವ ಮಹಿಳೆಯರ ವಯಸ್ಸು 21 ರಿಂದ 35ರ ನಡುವೆ ಇದೆ. ಶೇ.42 ರಷ್ಟು ಜನರು ಉದ್ಯೋಗಸ್ಥ ಮಹಿಳೆಯರು, ಶೇ.31ರಷ್ಟು ಜನರು ಏಕಾಂಗಿತನಕ್ಕೆ ತುತ್ತಾದವರು, ಶೇ.32ರಷ್ಟು ಜನರು ವಿಚ್ಛೇದಿತರು ಹಾಗೂ ಶೇ.80ರಷ್ಟು ದೇಹ ವಿಕ್ರಯ ಮಾಡುವ ಮಹಿಳೆಯರು ಮದ್ಯ ಹಾಗೂ ಇತರೆ ಮಾದಕ ವ್ಯಸನಗಳಿಗೆ ತುತ್ತಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ