ಮೀತಾ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ ಸಂಗೀತ ನಾಟಕ ಅಕಾಡೆಮಿಯ `ಉಸ್ತಾದ್ ಬಿಸ್ಮಿಲ್ಲಾ ಖಾನ್ ಯು ಪ್ರಶಸ್ತಿ,' `ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ,' `ದಿ ಗೋಲ್ಡನ್ ವಾಯ್ಸ್ ಆಫ್ ಇಂಡಿಯಾ,' `ಸುರಮಣಿ,' `ಯುವ ಓಜಸ್ವಿನಿ,' `ಯುವ ರತ್ನ' ಮತ್ತು `ದೆಹಲಿ ರತ್ನ' ಇತ್ಯಾದಿಗಳಿವೆ.
ಇತ್ತೀಚೆಗೆ ಅವರೊಂದಿಗೆ ನಡೆಸಿದ ಮಾತುಕಥೆಯ ಕೆಲವು ಮುಖ್ಯ ಅಂಶಗಳು ಹೀಗಿವೆ :
ನಮ್ಮ ಜೀವನವನ್ನು ಉತ್ತಮಗೊಳಿಸಲು 10 ನಿಯಮಗಳು ಯಾವುವು?
ನಿಮ್ಮ ಮನದ ಮಾತನ್ನು ಕೇಳಿ. ನೀವು ಮಾಡುತ್ತಿರುವ ಕೆಲಸ ನಿಮಗೆ ಇಷ್ಟವಿಲ್ಲದಿದ್ದರೆ ಬೇರೊಂದು ಕೆಲಸ ಹುಡುಕಿಕೊಳ್ಳಿ. ನೀವು ಮಾಡುವ ಕೆಲಸದಲ್ಲಿ ಖುಷಿ ಪಡುವಂತಿರಬೇಕು.
ಜೀವನದಲ್ಲಿ ಸಕಾರಾತ್ಮಕ ಆಲೋಚನೆ ಇಟ್ಟುಕೊಳ್ಳಿ.
ಆರೋಗ್ಯದಿಂದಿರಲು ವ್ಯಾಯಾಮ ಮಾಡಿ.
ಎಲ್ಲರ ಮುಖದಲ್ಲಿ ನಗೆ ಚಿಮ್ಮಿಸಿ.
ದಯಾಳುವಾಗಿ ಹಾಗೂ ಉದಾರತನದಿಂದ ಅಗತ್ಯವಿರುವವರಿಗೆ ದಾನ ಮಾಡಿ.
ನಿಮ್ಮ ವೃತ್ತಿಯ ಜೊತೆಗೆ ಒಂದು ಹ್ಯಾಸ ಇಟ್ಟುಕೊಳ್ಳಿ.
ಧನ್ಯವಾದ ಸ್ವೀಕರಿಸಲು ಅರ್ಹರೆಂದು ನಿಮಗೆ ಅನ್ನಿಸಿದರೆ ಅಂತಹರಿಗೆ ಧನ್ಯವಾದ ಅರ್ಪಿಸಿ.
ನೀವು ಮಾಡಲು ಬಯಸುತ್ತಿದ್ದ ಆದರೆ ಇದುವರೆಗೆ ಮಾಡಲು ಆಗದಿದ್ದ ಕೆಲಸಗಳನ್ನು ಮಾಡಲು ಪ್ರಯತ್ನಿಸಿ.
ಕ್ಷಮಿಸಲು ಹಾಗೂ ಮರೆತುಬಿಡಲು ಕಲಿಯಿರಿ. ಇದು ಯಾರಿಗಾದರೂ ಕೊಡಲು ಒಂದು ಉತ್ತಮ ಉಡುಗೊರೆಯಾಗಿದೆ.
ನಿಮಗಾಗಿ ಸಾಕಷ್ಟು ಸಮಯ ಇಟ್ಟುಕೊಳ್ಳಿ. ಮಹಿಳೆಯರಿಗೆ ಇದು ಬಹಳ ಅಗತ್ಯ. ನಿಮ್ಮ ನಂತರವೇ ಇನ್ನೊಬ್ಬರನ್ನು ಗಮನಿಸಿ.