ಆತ್ಮವಿಶ್ವಾಸ, ಸೌಂದರ್ಯ, ಪ್ರತಿಭೆ ಹಾಗೂ ಸಾಮಾಜಿಕ ಕಾಳಜಿಯ ಪ್ರತೀಕವಾಗಿರುವ ಮಿಸ್ ವರ್ಲ್ಡ್ 2026 ಸ್ಪರ್ಧೆಯ ವಿಜೇತರಾಗಿ ಡೊಮಿನಿಕನ್ ರಿಪಬ್ಲಿಕ್‌ ದೇಶದ ಜೊಹೇರಿ ಮೋಲ್​ (Joheirry Mola) ಹೊರಹೊಮ್ಮಿದ್ದಾರೆ.

ವಿಯೆಟ್ನಾಂನಲ್ಲಿ ಸೆಪ್ಟೆಂಬರ್ 5ರಂದು ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಜೊಹೇರಿ ಮೋಲ್​ ಅವರು ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ವಿಶ್ವದ ವಿವಿಧ ದೇಶಗಳನ್ನು ಪ್ರತಿನಿಧಿಸಿ ಆಗಮಿಸಿದ್ದ ಸುಂದರಿಯರ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಜೊಹೇರಿ ಮೋಲ್​ ತಮ್ಮ ಆತ್ಮವಿಶ್ವಾಸ, ವೇದಿಕೆ ಮೇಲಿನ ನಿರೂಪಣೆ, ವ್ಯಕ್ತಿತ್ವ ಮತ್ತು ವಿಭಿನ್ನ ಪ್ರತಿಭೆಯ ಮೂಲಕ ತೀರ್ಪುಗಾರರ ಗಮನ ಸೆಳೆದರು. ಅಂತಿಮ ಸುತ್ತಿನಲ್ಲಿ ಡೊಮಿನಿಕನ್ ರಿಪಬ್ಲಿಕ್ ದೇಶವನ್ನು ಪ್ರತಿನಿಧಿಸಿದ್ದ ಜೊಹೇರಿ ಮೋಲ್​ ಅವರು ಸ್ಪೇನ್‌ನ ಎಲಿಜಬೆತ್ ರೆಯ್ನೆಸ್ ಅವರನ್ನು ಹಿಂದಿಕ್ಕಿ ಪ್ರತಿಷ್ಠಿತ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಮಿಸ್ ವರ್ಲ್ಡ್ 2026ರ ಕಿರೀಟ ಡೊಮಿನಿಕನ್ ರಿಪಬ್ಲಿಕ್ ದೇಶದ ಪಾಲಾಗಿದೆ. ಅಂತಿಮ ಸ್ಪರ್ಧೆಯಲ್ಲಿ ಸ್ಪೇನ್‌ನ ಎಲಿಜಬೆತ್ ರೆಯ್ನೆಸ್ ಪ್ರಥಮ ರನ್ನರ್‌ಅಪ್ ಸ್ಥಾನ ಪಡೆದರೆ, ಮಲೇಷ್ಯಾದ ತಾನುಸಿಯಾ ಚೆಟ್ಟಿ ಅವರು ದ್ವಿತೀಯ ರನ್ನರ್‌ಅಪ್ ಆಗಿ ಹೊರಹೊಮ್ಮಿದರು.ವಿಯೆಟ್ನಾಂನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ವೇಳೆ ವಿಶ್ವದ ಗಮನ ಜೊಹೇರಿ ಮೋಲ್​ ಅವರತ್ತ ನೆಟ್ಟಿತ್ತು. ಅಂತಿಮ ಘೋಷಣೆ ಹೊರಬಿದ್ದ ಬಳಿಕ ಅವರ ಅಭಿಮಾನಿಗಳು ಹಾಗೂ ಡೊಮಿನಿಕನ್ ರಿಪಬ್ಲಿಕ್‌ನ ಪ್ರತಿನಿಧಿಗಳು ಸಂಭ್ರಮಿಸಿದರು. ಕಳೆದ ವರ್ಷದ 72ನೇ ಮಿಸ್ ವರ್ಲ್ಡ್ ಪಟ್ಟವನ್ನು ಗೆದ್ದಿದ್ದ ಥಾಯ್ಲೆಂಡ್‌ನ ಓಪಲ್ ಸುಚಾತಾ ಚುವಾಂಗ್ಸ್ರಿ ಅವರು ಜೊಹೇರಿ ಮೋಲ್​ ಅವರಿಗೆ ಮಿಸ್ ವರ್ಲ್ಡ್ 2026ರ ಕಿರೀಟವನ್ನು ತೊಡಿಸಿದರು.

ಜೊಹೇರಿ ಮೋಲ್​ ಅವರ ಗೆಲುವಿಗೆ ಭಾರತದಲ್ಲಿಯೂ ಅಭಿನಂದನೆಗಳು ವ್ಯಕ್ತವಾಗಿವೆ. ಮಿಸ್ ಇಂಡಿಯಾ ಆರ್ಗನೈಸೇಶನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ನೂತನ ವಿಶ್ವ ಸುಂದರಿಗೆ ಶುಭಾಶಯ ತಿಳಿಸಿದೆ. ವಿವಿಧ ದೇಶಗಳ ಸೌಂದರ್ಯ ಸ್ಪರ್ಧೆ ಅಭಿಮಾನಿಗಳು ಕೂಡ ಜೊಹೇರಿ ಮೋಲ್​ ಅವರ ಗೆಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.ಟಾಪ್ 6 ಫೈನಲಿಸ್ಟ್ಗಳು: ಮಿಸ್ ವರ್ಲ್ಡ್ 2026ರ ಅಂತಿಮ ಹಂತದಲ್ಲಿ ಒಟ್ಟು ಆರು ಸ್ಪರ್ಧಿಗಳು ಸ್ಥಾನ ಪಡೆದಿದ್ದರು. ಎರಿಟ್ರಿಯಾದ ಸ್ನಿಟ್ ಹಬ್ಟಿಯಾಬ್, ಸ್ಪೇನ್‌ನ ಎಲಿಸಬೆತ್ ರೆಯ್ನೆಸ್, ಮಲೇಷ್ಯಾದ ತಾನುಸಿಯಾ ಚೆಟ್ಟಿ, ವಿಯೆಟ್ನಾಂನ ಲೆ ನ್ಗುಯೆನ್ ಬಾವೊ ನ್ಗೊಕ್, ಡೊಮಿನಿಕನ್ ರಿಪಬ್ಲಿಕ್‌ನ ಜೊಹೇರಿ ಮೋಲ್​ ಹಾಗೂ ದಕ್ಷಿಣ ಆಫ್ರಿಕಾದ ರೊಮಾಂಡಾ ಹೊಂಬಿರ್ ಅವರು ಟಾಪ್ 6 ಫೈನಲಿಸ್ಟ್‌ಗಳಾಗಿದ್ದರು.

ಇವರ ಪೈಕಿ ಅಂತಿಮವಾಗಿ ಜೊಹೇರಿ ಮೋಲ್​ ಅವರು ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಸ್ಪರ್ಧೆಯ ಪ್ರತಿಯೊಂದು ಹಂತದಲ್ಲೂ ತಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಿದ ಅವರು ಅಂತಿಮ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಡೊಮಿನಿಕನ್ ರಿಪಬ್ಲಿಕ್‌ ದೇಶಕ್ಕೆ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಗೌರವ ತಂದುಕೊಟ್ಟಿದ್ದಾರೆ.

ಭಾರತಕ್ಕೆ ಈ ಬಾರಿಯೂ ಕಿರೀಟವಿಲ್ಲ: ಮಿಸ್​ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವಿನ ದೊಡ್ಡ ಇತಿಹಾಸವನ್ನೇ ಹೊಂದಿರುವ ಭಾರತಕ್ಕೆ ಈ ಬಾರಿಯೂ ಪ್ರತಿಷ್ಠಿತ ಕಿರೀಟ ಕೈತಪ್ಪಿದೆ. ಈ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿ ನಿಕಿತಾ ಪೊರ್ವಾಲ್​ ಕೆಲವು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಅಂತಿಮವಾಗಿ ಕೇವಲ ಟಾಪ್​ 40ರಲ್ಲಿ ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ