ಇದೇ ನನ್ನ ಮೋಡಿ : ಕೆಂಪು ಕೆನ್ನೆ ಮತ್ತು ಕೆಂದುಟಿಗಳಿಗೆ ತಮ್ಮದೇ ಆದ ಮಹತ್ವವಿದೆ, ಈ ಮಾಡೆಲ್ ಕ್ರಿಸ್ಟಿಯನ್ ಗೆ ಇದು ಚೆನ್ನಾಗೇ ಗೊತ್ತು. ಏಷ್ಯನ್ ಬ್ಯೂಟೀಸ್ ನಲ್ಲಿ ವಿಶೇಷ ಸ್ಥಾನ ಹೊಂದಿರುವ ಈಕೆ, ಸದಾ ತನ್ನನ್ನು ಫಿಟ್‌ಫೈನ್ ಆಗಿರಿಸಿಕೊಳ್ಳುತ್ತಾಳೆ. ಮಾಡೆಲಿಂಗ್ ಜೊತೆ ಈಕೆ ಟಿವಿಯಲ್ಲಿ ಇವೆಂಟ್ಸ್, ಇನ್ ಪ್ಲಯೆನ್ಸರ್ ಜವಾಬ್ದಾರಿಯನ್ನೂ ನಿರ್ವಹಿಸುತ್ತಾಳೆ.
ಪರಿಶ್ರಮಕ್ಕೆ ಸಂದ ಫಲ : ಇಲೆವೆನ್ ರಾಂಕ್ ಫೋರ್ಡ್ ಕೆನಡಾದ ವ್ಯಾಂಕೂರ್ ನಿಂದ ಆಫ್ರಿಕಾದ ವೈಸ್ ರಾಯ್ ಗೆ ಒಂದು ಹೊಸ ಡೈರೆಕ್ಷನ್ ನೀಡುತ್ತಿದ್ದಾರೆ. ಆಕೆ ನೆಲದಲ್ಲಿ ನಿಂತು ಕೆಲಸ ಮಾಡುತ್ತಾರೆ, ಕಾನ್ಛರೆನ್ಸ್ ಆರ್ಗನೈಜ್ ಮಾಡುತ್ತಾರೆ, ಇದೀಗ ವೆಬ್ ಸೀರೀಸ್ ಸಹ ಮಾಡುತ್ತಿದ್ದಾರೆ, ಇದನ್ನು ಕೋಟ್ಯಂತರ ಮಂದಿ ಗಮನಿಸಿದ್ದಾರೆ. ಇತ್ತೀಚೆಗೆ ಈಕೆ ಕೆನ್ಯಾವರೆಗೂ ಹೋಗಿ, ಅಲ್ಲಿ ತಮ್ಮ ವೆಬ್ ಗಾಗಿ ಬಹಳಷ್ಟು ಮಾಹಿತಿ ಪಡೆದರು.
ಪ್ರಕೃತಿಗೆ ವಿರುದ್ಧ ಹೋಗದಿರಿ : ಪಾಕಿಸ್ತಾನದಲ್ಲಿ ಬಂದ ಭಯಂಕರ ಚಂಡಮಾರುತ ಅಲ್ಲಿನ ದೊಡ್ಡ ಭಾಗಗಳನ್ನೇ ಕಬಳಿಸಿದೆ. ಇಂಥದ್ದು ಭಾರತಕ್ಕೆ ಬರಲಾರದು ಎಂದು ಹೇಳುವಂತಿಲ್ಲ. ಹಿಂದೂ ಮುಸ್ಮಾನರನ್ನು ಬೇರೆ ಬೇರೆ ಮಾಡಿದ ಮಾತ್ರಕ್ಕೆ, ಪ್ರಕೃತಿ ವಿಕೋಪ ಭಾರತಕ್ಕೆ ಬರಬಾರದು ಎಂದೇನಿಲ್ಲ, ಏಕೆಂದರೆ ನಮ್ಮಲ್ಲಿ ಮೂಢನಂಬಿಕೆ, ಕಂದಾಚಾರ ಅತಿ ಹೆಚ್ಚು. ಇದು ಅಲ್ಲಿನ ನಗರ ಪ್ರದೇಶವನ್ನೂ ಸಾಕಷ್ಟು ಗೋಳಾಡಿಸಿದೆ, ಹಳ್ಳಿಗಳಲ್ಲಂತೂ ಮನೆಗಳೇ ಮುಳುಗಿದವು. ನಮ್ಮ ಬೆಂಗಳೂರು ಸಹ ಇದಕ್ಕೆ ಹೊರತಲ್ಲ.
ದುಬಾರಿ ಷೋಕಿ : ನಾಯಿ ಪಾಲನೆ ತುಂಬು ಸಂತೃಪ್ತಿ ನೀಡುವ ಹವ್ಯಾಸ. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ 2 ವಿದ್ಯಮಾನಗಳು ಭಯ ಹುಟ್ಟಿಸಿವೆ. ಲಿಫ್ಟ್ ನಲ್ಲಿ ಮಾಲೀಕಳ ಎದುರೇ ಅವಳ ಮಕ್ಕಳ ಮೇಲೆ ನಾಯಿ ಹುಲಿಯಂತೆ ಎರಗಿತು. ಇದು ಟಿವಿಯಲ್ಲಿ ಬಂಧಿಸಲ್ಪಟ್ಟಿತು. ವಿಶ್ವವಿಡೀ ನಾಯಿಗಳು ಅಪರಿಚಿತರನ್ನು ಹೀಗೆ ಆಕ್ರಮಿಸುವುದು ಹೊಸ ವಿಷಯವಲ್ಲ. ಅಮೆರಿಕಾದಲ್ಲಿ ನಿರಾಯುಧರ ಮೇಲೆ ಬಂದೂಕು ಚಲಾಯಿಸಿದಂತೆ, ಮುಸ್ಲಿಂ ಭಯೋತ್ಪಾದಕರ ಕುಕೃತ್ಯಗಳಿಗೆ ಸಮವಿದು. ನಾಯಿ ಸಾಕಿದರ ಅತಿ ನಿಷ್ಠೆಯ ಪ್ರಾಣಿ. ಆದರೆ ಇಂಥ ಅಪಾಯ ತಂದೊಡ್ಡುವ ನಾಯಿಗಳಿಂದ ಸದಾ ಎಚ್ಚರಾಗಿರಿ!
ಧೈರ್ಯ ಬಿಡಲಿಲ್ಲ : ಅಮೆರಿಕಾದ ಅಟ್ಲಾಂಟಾ ನಗರದ ಸೋಫಿಯಾ ಕ್ರೇನಿ, 2019ರಲ್ಲಿ ಒಂದು ಗಂಭೀರ ಕಾರು ಆ್ಯಕ್ಸಿಡೆಂಟ್ ನಲ್ಲಿ ಬ್ರೇನ್ ಇಂಜುರಿಗೆ ಒಳಗಾದಳು. ಸ್ಪೈನ್ ಫ್ರಾಕ್ಚರ್ ಸಹ ಆಯಿತು. ಆದರೆ ಆಕೆ ಮಾತ್ರ ಧೈರ್ಯಗುಂದಲಿಲ್ಲ. ಇಂದು ಆಕೆ ಮತ್ತೆ ಕಾಲೇಜಿಗೆ ಕಲಿಯಲು ಹೊರಟಿದ್ದಾಳೆ. ಈಗಲೂ ಆಕೆ ನೇರವಾಗಿ ನೋಡಲಾರಳು, ಆಗಾಗ ಮೂರ್ಛೆ ತಪ್ಪುತ್ತಾಳೆ. ಆದರೆ ಆಕೆ ಪೋಸ್ಚರ್ ಡಿಸೀಸ್ ಜೊತೆ ಬದುಕು ಕಲೆ ಕಲಿತಿದ್ದಾಳೆ. ದುರ್ಘಟನೆ ಎದುರಾಗಬಹುದು, ಆದರೆ ಅದನ್ನು ಗೆದ್ದು ಬದುಕುವುದು ಒಂದು ಕಲೆಯೇ ಸರಿ! ಕಾರ್ ಸರ್ವೈರ್ಸ್‌ನ ಒಂದು ಸಂಸ್ಥೆ ಈಕೆಗೆ ಸ್ಪೆಷಲ್ ಅವಾರ್ಡ್ ಸಹ ನೀಡಿದೆ.
ನಾವು ಮೊದಲು ಬದಲಾಗಬೇಕು : ವಿಶ್ವದ ಯಾವ ದೇಶವೇ ಇರಲಿ, ಹೆಂಗಸರಿಗೆ ಭೇದಭಾವ ಮಾಡದೆ ಇರದು. ಇಲ್ಲಿನ ವ್ಯತ್ಯಾಸ ಎಂದರೆ, ಈಕ್ವೆಡಾರ್ ನ ಈ ಚಿತ್ರದಲ್ಲಿ ಹೆಂಗಸರು ನೇರವಾಗಿ ರಸ್ತೆಗಿಳಿದು ಸಮಾನತೆಯ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ನಮ್ಮೂರಲ್ಲಿ..... ಹೆಂಗಸರು ಬೀದಿಗಿಳಿಯುವುದು ತಲೆಯ ಮೇಲೆ ಕಲಶ ಹೊತ್ತು ಅಥವಾ ಬುರ್ಖಾ ಧರಿಸಿ. ನಮ್ಮ ಹೆಂಗಸರು ಸದಾ ಕಂದಾಚಾರದ ಹೊರೆ ಹೊತ್ತು ಬದುಕಲು ರೆಡಿ, ಅದು ಸದಾ ಅವರಿಗೆ ಸಂಕೋಲೆಯೇ ಸರಿ. ನಮ್ಮ ಹೆಂಗಸರ ಈ ಸ್ಥಿತಿಗೆ ಕಾರಣಕರ್ತರು ಎಂದರೆ ಧರ್ಮ ರಕ್ಷಕರು!