ಇಸ್ರೇಲಿನ ಪ್ಯಾಲೇಸ್ಟೀನಿನ ಹೈಫಾ ನಗರಕ್ಕೂ ಕರ್ನಾಟಕದದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ಸುಮಾರು 4,800 km ದೂರದ ಅಂತರವಿದ್ದರೂ, ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪಿಗೂ ಎತ್ತಲಿಂದೆತ್ತ ಸಂಬಂಧವಯ್ಯಾ ಎನ್ನುವಂತೆ, ಪ್ರತೀ ವರ್ಷ ಸೆಪ್ಟೆಂಬರ್ 23 ರಂದು ಹೈಫಾ ನಗರದಲ್ಲಿ ನಡೆಯುವ ಹೈಫಾ ಡೇ ದಿನದಂದು ಆ ನಗರದ ಮೇಯರ್ ಮೈಸೂರು, ಹೈದರಾಬಾದ್ ಮತ್ತು ಜೋಧ್ ಪುರ ಸೈನಿಕರ ಸಾಹಸಗಳನ್ನು ನೆನೆಯುವ ಅಧ್ಭುತವಾದ ಸಂಪ್ರದಾಯವಿದೆ. ಹೈಫಾ ನಗರದ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್ ಯೋಧರ ಸಾಹಸಮಯ ಸಾಧನೆಯ ಕುರಿತಾಗಿ ಕನ್ನಡಿಗರಿಗೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ ಕಾರಣ ಅದರ ಕುರಿತಾದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕುರಿತಾದ ಸವಿವರ ಇದೋ ನಿಮಗಾಗಿ

1918ರಲ್ಲಿ ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರ ಇನ್ನೂ ಅಸ್ತಿತ್ವದಲ್ಲಿರಲಿಲ್ಲ. ಹೈಫಾ ಆಗಿನ ಒಟ್ಟೊಮನ್ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಪ್ಯಾಲೆಸ್ಟೈನ್ ಪ್ರದೇಶದ ಬಂದರು ನಗರವಾಗಿತ್ತು. ಇಂದಿನ ಇಸ್ರೇಲ್ ರಾಜ್ಯ 1948ರಲ್ಲಿ ಸ್ಥಾಪನೆಯಾಯಿತು. ಮೈಸೂರಿನ ಲ್ಯಾನ್ಸರ್ಸ್‌ಗಳ ಈ ಅಪರೂಪದ ಯುದ್ಧಗಾಥೆ, ಮೈಸೂರು ಸಂಸ್ಥಾನದ ಸೈನಿಕ ಪರಂಪರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಸಂಸ್ಥಾನದ ಕೊಡುಗೆ ಮತ್ತು ಮೊದಲ ವಿಶ್ವಯುದ್ಧದಲ್ಲಿ ಭಾರತೀಯ ಸೈನಿಕರ ಪಾತ್ರವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಮಹತ್ವದ ಅಧ್ಯಾಯವಾಗಿದೆ.
ಹೈಫಾ ಏಕೆ ಅಷ್ಟು ಮಹತ್ವದ ನಗರವಾಗಿತ್ತು?

ಮೊದಲ ವಿಶ್ವಯುದ್ಧ 1914ರಿಂದ 1918ರವರೆಗೆ ನಡೆದಾಗ ಮಧ್ಯಪ್ರಾಚ್ಯವು ಬ್ರಿಟಿಷ್ ಮತ್ತು ಒಟ್ಟೊಮನ್ ಸಾಮ್ರಾಜ್ಯಗಳ ನಡುವಿನ ಪ್ರಮುಖ ಯುದ್ಧಭೂಮಿಯಾಗಿತ್ತು. ಮೆಡಿಟರೇನಿಯನ್ ಸಮುದ್ರದ ತೀರದಲ್ಲಿರುವ ಹೈಫಾ ಬಂದರು, ಸಮುದ್ರ ಮಾರ್ಗದ ಸರಕು ಸಾಗಣೆ, ಸೈನಿಕರ ಚಲನವಲನ ಮತ್ತು ಯುದ್ಧೋಪಕರಣಗಳ ಪೂರೈಕೆಗೆ ಮಹತ್ವದ ಕೇಂದ್ರವಾಗಿತ್ತು. ಹೀಗಾಗಿ ಮಿತ್ರರಾಷ್ಟ್ರಗಳ ಮುಂದಿನ ಸೇನಾ ಕಾರ್ಯಾಚರಣೆಗಳಿಗೆ ಹೈಫಾವನ್ನು ವಶಪಡಿಸಿಕೊಳ್ಳುವುದು ಪ್ರಮುಖವಾಗಿತ್ತು. ಬ್ರಿಟಿಷ್ ನೇತೃತ್ವದ ಪಡೆಗಳಿಗೆ ಹೈಫಾ ಬಂದರು ದೊರೆತರೆ ಸಮುದ್ರ ಮಾರ್ಗದಿಂದ ಸರಬರಾಜು ವ್ಯವಸ್ಥೆ ಸುಲಭವಾಗುತ್ತಿತ್ತು.
ಅಂದಿನ ಹೈಫಾ ಸುಮಾರು ನಾಲ್ಕು ಶತಮಾನಗಳ ಕಾಲ ಒಟ್ಟೊಮನ್ ಆಳ್ವಿಕೆಯಲ್ಲಿತ್ತು. 16ನೇ ಶತಮಾನದ ಆರಂಭದಿಂದ 1918ರವರೆಗೆ ಈ ಪ್ರದೇಶ ಒಟ್ಟೊಮನ್ ಸಾಮ್ರಾಜ್ಯದ ಭಾಗವಾಗಿತ್ತು.
ಹೈಫಾ ಕದನಕ್ಕೆ ಹಿನ್ನೆಲೆ ಏನು?
ಹೈಫಾ ಮೇಲಿನ ದಾಳಿ ಪ್ರತ್ಯೇಕವಾಗಿ ನಡೆದ ಒಂದು ಸಣ್ಣ ಯುದ್ಧವಲ್ಲ. ಅದು ಮೊದಲ ವಿಶ್ವಯುದ್ಧದ ಸಿನಾಯಿ–ಪ್ಯಾಲೆಸ್ಟೈ





