ಸತೀಶ : ನಮ್ಮ ದೇಶದ ಮಹಿಳೆಯರು ಬುದ್ಧಿವಂತರೋ ಅಲ್ಲವೋ?

ಮಹೇಶ : ಅಲ್ಲ ಅಂದವರು ಯಾರು? ಮುಚ್ಚಳ ತೆರೆಯದೆ ಡಬ್ಬಾ ಅಲುಗಾಡಿಸಿ ಅದು ಜೀರಿಗೆನೋ, ಸೋಂಪೋ ಹೇಳಿಬಿಡುತ್ತಾರೆ.

ಸುರೇಶ : ಭಾರತದ ಇಂಥ ಶ್ರೀಮತಿಯರಿಗೂ ಭಾರತರತ್ನಕ್ಕೆ ಸಮನಾದ ಒಂದು ಪ್ರಶಸ್ತಿಯನ್ನು ಪ್ರತ್ಯೇಕವಾಗಿ ಮೀಸಲಿಡಬೇಕು.

ಗಿರೀಶ : ಎಂಥ ಮಹಿಳೆಯರಿಗಾಗಿ?

ಸುರೇಶ : ಒಂದು ನಿಮಿಷಕ್ಕೆ 300 ಶಬ್ದಗಳ ವೇಗದಲ್ಲಿ ಬಡಬಡಾಯಿಸಿದರೂ, ಮಾತಿನ ಕೊನೆಯಲ್ಲಿ `ನನ್ನ ಬಾಯಿ ಮಾತ್ರ ತೆರೆಸಬೇಡ. ಇಲ್ಲದಿದ್ದರೆ....' ಎನ್ನುವವರಿಗೆ!

ಮೋಹನ್‌ : ಇದೇನು ಇಷ್ಟೊಂದು ಪಾತ್ರೆಯ ರಾಶಿ? ಮನೆ ಯಾಕೆ ತಿಪ್ಪೆಗುಂಡಿ ಆಗಿದೆ?

ಶೇಖರ್‌ : ಹೆಂಡತಿ ತವರಿಗೆ ಹೋಗಿದ್ದಾಳೆ ಮಾರಾಯ..... ಮನೆ ಗುಡಿಸಿ ಏನಾಗಬೇಕು, ಬೀಗ ಹಾಕಿ ಈಗ ಆಫೀಸಿಗೆ ಹೊರಡೋದೇ ತಾನೇ... ಹೇಗೂ ತಡವಾಗಿದೆ, ಕ್ಯಾಂಟಿನ್‌ನಲ್ಲೇ ಕಾಫಿ ಕುಡಿಯೋಣ. ರಾತ್ರಿ ಅಡುಗೆಗೆ ಬೇಕಾದ್ರೆ ಒಂದು ಬಾಣಲೆ ತೊಳೆದರಾಯ್ತು.....

ಅಪರೂಪಕ್ಕೆ ಬಾಯ್‌ಫ್ರೆಂಡ್‌ ಪಿಜ್ಜಾ ಕಾರ್ನರ್‌ಗೆ ಕರೆದುಕೊಂಡು ಹೋದಾಗ ವೈವಿಧ್ಯಮಯ ಬಗೆಯ 2 ಪಿಜ್ಜಾಗಳಿಗೆ ಆರ್ಡರ್‌ ಕೊಟ್ಟು ಇಬ್ಬರೂ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಸಂಭಾಷಣೆ ಆರಂಭಿಸಿದರು.

ಪ್ರೇಯಸಿ : ಹಾಯ್‌ ಡಾರ್ಲಿಂಗ್‌.... ನನ್ನ ಹೃದಯದ ಬಡಿತ ಪಟಪಟನೆ ಹೆಚ್ಚುವಂಥ ಅದ್ಭುತ ಡೈಲಾಗ್‌ ಹೇಳಬಾರದೇ?

ಪ್ರಿಯಕರ : ಈ ಆರ್ಡರ್‌ ಪೂರೈಸುವಷ್ಟು ಹಣ ಖಂಡಿತಾ ನನ್ನ ಬಳಿ ಇಲ್ಲ!

ಮೋಹನ್‌ : ಏನಾಯ್ತೋ ಸತೀಶ್‌.... ಯಾಕೆ ಹೀಗೆ ಮೈಯೆಲ್ಲ ಬಾಸುಂಡೆ.... ಬ್ಯಾಂಡೇಜು... ಏನು ಕಥೆ?

ಸತೀಶ್‌ : ಏನು ಹೇಳ್ಲೀ..... ಎಲ್ಲ ನನ್ನ ಕರ್ಮ! ನಮ್ಮ ಪಕ್ಕದ ಫ್ಲಾಟಿಗೆ ಹೊಸದಾಗಿ ಒಂದು ಚೈನೀಸ್‌ ಕುಟುಂಬ ಬಂದಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಅವನ ಹೆಂಡತಿ ಸತ್ತುಹೋದಳು.....

ಮೋಹನ್‌ : ಅದಕ್ಕೆ ನಿನಗೇಕೆ ಈ ದುರ್ದೆಶೆ?

ಸತೀಶ್‌ : ಅವನಿಗೆ ಸಾಂತ್ವನ ಹೇಳುವ ನೆಪದಲ್ಲಿ ಚೈನಾ ಮಾಲಲ್ವಾ, ಒಂದು ವರ್ಷ ಬಂದಿದ್ದೇ ಹೆಚ್ಚು ಅಂದೆನಪ್ಪಾ... ಅದಕ್ಕೆ ಹೋಗಿ......

ಗ್ರಾಹಕ : ರೀ ಸ್ವಾಮಿ, ಎಂಥ ಜೂಸ್‌ ಕೊಟ್ಟಿದ್ದೀರಿ... ಇದರಲ್ಲಿ ನೊಣ ಇದೆ....

ಅಂಗಡಿಯವ : ಸ್ವಲ್ಪ ಹೃದಯ ವಿಶಾಲವಾಗಿ ಇಟ್ಕೊಳ್ಳಿ. ಅಂಥ ಪುಟ್ಟ ಜೀವ ನಿಮ್ಮ ಗ್ಲಾಸಿನ ಎಷ್ಟು ಮಹಾ ಜೂಸ್‌ನ್ನು ಕುಡಿದೀತು...?

ಪತಿ : ಆಹಾ.... ಇವತ್ತು ಎಷ್ಟು ಸುಂದರವಾಗಿ ಕಾಣಿಸ್ತಿದ್ದಿ ಗೊತ್ತಾ?

ಪತ್ನಿ : ಹೌದೇನ್ರಿ...? ನಿಮ್ಮ ಬಾಯಿಗೆ ಬೆಲ್ಲ ಹಾಕ! ಈ ಮಾತು ಕೇಳಿ ನನ್ನ  ಹೃದಯ ಒಡೆದಂತಾಯಿತು.

ಪತಿ : ಇರು ಇರು... ಇನ್ನೂ 4-5 ಸಲ ಹೇಳಿ ನೋಡ್ತೀನಿ.... ನಿನ್ನ ಮಾತು ತಾನೇ ಯಾವಾಗಲೂ ನಡೆಯೋದು...?

ಗುಂಡಗುಂಡಿ ಜೋರಾಗಿ ಜಗಳವಾಡುತ್ತಿದ್ದರು.

ಗುಂಡ : ಬಿಡು ಬಿಡೇ... ನಿನ್ನಂಥವರು 100 ಮಂದಿ ಸಿಗ್ತಾರೆ!

ಗುಂಡಿ : ನೋಡಿದ್ಯಾ.... ಈಗ್ಲೂ `ನನ್ನಂಥ'ವಳೇ ಬೇಕು ಅಂತೀಯಲ್ಲ....?

ಪತಿ : ಕಳೆದ 4 ತಾಸುಗಳಿಂದ ಎಲ್ಲಿ ಕಣ್ಮರೆಯಾಗಿದ್ದೆ?

ಪತ್ನಿ : ಮಾಲ್ ಗೆ ಹೋಗಿದ್ದೆ.... ಶಾಪಿಂಗ್‌ ಮಾಡಲು.

ಪತಿ : ಏನೇನು ತಗೊಂಡೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ