ಕಲಾವಿದೆ

ಸುಮಾರು 25 ವರ್ಷಗಳನ್ನು ಇಂಡಸ್ಟ್ರಿಯಲ್ಲಿ ಕಳೆದಿರುವ ರವೀನಾ ಟಂಡನ್‌ 90ರ ದಶಕದ ಪ್ರಸಿದ್ಧ ನಟಿ. ಫಿಲಮ್ ಪರಿಸರದಲ್ಲಿ ಜನಿಸಿದ ರವೀನಾಗೆ ಚಿಕ್ಕಂದಿನಿಂದಲೇ ನಟಿಸುವ ಆಸೆ ಇತ್ತು. ಕಾಲೇಜಿನಲ್ಲಿ ಓದುವಾಗ ಅವರಿಗೆ `ಪತ್ಥರ್‌ ಕೆ ಫೂಲ್' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಾಗ ಮೊದಲ ಚಿತ್ರದಲ್ಲೇ ಯಶಸ್ವಿಯಾದರು. ನಂತರ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ `ಮೊಹರಾ` ಮತ್ತು `ದಿಲ್ ವಾಲಾ,' ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಅನ್ನಿಸಿಕೊಂಡವು. ರವೀನಾ ಹಿಂದಿ ಅಲ್ಲದೆ, ತಮಿಳು, ತೆಲುಗು ಮತ್ತು ಕನ್ನಡದ `ಉಪೇಂದ್ರ' ಚಿತ್ರಗಳಲ್ಲೂ ನಟಿಸಿದ್ದಾರೆ. ರವೀನಾ ಅಕ್ಷಯ್‌ ಕುಮಾರ್‌, ಗೋವಿಂದ, ಅಜಯ್‌ ದೇವಗನ್‌, ಸುನೀಲ್ ಶೆಟ್ಟಿ ಇತ್ಯಾದಿ ಅನೇಕ ನಾಯಕ ನಟರೊಂದಿಗೆ ನಟಿಸಿದ್ದಾರೆ. ಗೋವಿಂದ ಜೊತೆ ಇವರ ಕಾಮಿಡಿ ಚಿತ್ರಗಳು ಬಹಳ ಯಶಸ್ವಿಯಾದವು. ರವೀನಾ ಹಾಗೂ ಅಕ್ಷಯ್‌ರ ರೊಮ್ಯಾನ್ಸ್ ಬಗ್ಗೆ ಚರ್ಚೆಗಳು ಕೇಳಿಬಂದವು. ಆದರೆ ಯಾವುದೇ ಪರಿಣಾಮ ಬೀರಲಿಲ್ಲ.

ರವೀನಾ ಖಡಾಖಂಡಿತ ಮಾತಾಡುತ್ತಾರೆ. ಎಲ್ಲ ವಿಷಯಗಳನ್ನೂ ಎದುರಿಗೆ ಹೇಳುವುದು ಉತ್ತಮ ಎಂದುಕೊಂಡಿದ್ದಾರೆ. ಮದುವೆಗೆ ಮೊದಲೇ ಅವರು ಇಬ್ಬರು ಹುಡುಗಿಯರಾದ ಪೂಜಾ ಮತ್ತು ಛಾಯಾರನ್ನು ದತ್ತು ತೆಗೆದುಕೊಂಡಿದ್ದರು. `ಸ್ಟಂಪ್ಡ್' ಚಿತ್ರದ ಸಂದರ್ಭದಲ್ಲಿ ರವೀನಾಗೆ ಫಿಲಮ್ ಡಿಸ್ಟ್ರಿಬ್ಯೂಟರ್‌ ಅನಿಲ್‌ ಥಡಾನಿ ಪರಿಚಯವಾಯಿತು. ನಂತರ ಇಬ್ಬರೂ ಮದುವೆಯಾದರು. ಅವರಿಗೆ ಎರಡು ಮಕ್ಕಳು ರಾಣಾ ಮತ್ತು ರಣವೀರ್‌ ಇದ್ದಾರೆ.

ಇಂದು ರವೀನಾ ಒಬ್ಬ ಯಶಸ್ವಿ ಪತ್ನಿ ಮತ್ತು 4 ಮಕ್ಕಳ ತಾಯಿ ಆಗಿದ್ದಾರೆ. ಅವರು ತಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಸೋನಿ ಟಿ.ವಿಯ ರಿಯಾಲಿಟಿ ಶೋ `ಸಬ್‌ ಸೆ ಬಡಾ ಕಲಾಕಾರ್‌'ನಲ್ಲಿ ಇವರು ಜಡ್ಜ್ ಆಗಿದ್ದಾರೆ. ಇವರೊಂದಿಗೆ ಮಾತುಕಥೆ ರೋಚಕವಾಗಿತ್ತು.

ಈ ರಿಯಾಲಿಟಿ ಶೋಗೆ ಬರಲು ವಿಶೇಷ ಕಾರಣ ಏನು?

ಇದರಲ್ಲಿ ಬಹಳ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಮಕ್ಕಳೊಂದಿಗೆ ಸೇರಿ ಏನಾದರೂ ಮಾಡಲು ನನಗೆ ಇಷ್ಟ. ಏಕೆಂದರೆ ಅವರು ಮುಗ್ಧರು ಮತ್ತು ಸ್ವಚ್ಛ ಹೃದಯವುಳ್ಳವರಾಗಿರುತ್ತಾರೆ. ವಯಸ್ಕರೊಂದಿಗೆ ಕೆಲಸ ಮಾಡುವುದು ಬಹಳ ಕಷ್ಟ. ಏಕೆಂದರೆ ಅವರಲ್ಲಿ ಈಗೋ ಇರುತ್ತದೆ.

ಎಂದಾದರೂ ನಿಮ್ಮ ಬಾಲ್ಯದ ನೆನಪು ಬರುತ್ತದೆಯೇ?

ನನ್ನ ಬಾಲ್ಯ ಹೀಗಿರಲಿಲ್ಲ. ನಾನು ಬಹಳ ನಾಚಿಕೆಯ ಸ್ವಭಾವದವಳಾಗಿದ್ದೆ. ನಾಲ್ಕನೆಯ ವಯಸ್ಸಿಗೆ ನನಗೆ ನನ್ನ ಹೆಸರು ಬರೆಯಲು ಮಾತ್ರ ಬರುತ್ತಿತ್ತು. ಈ ಮಕ್ಕಳು ಇಷ್ಟು ದೊಡ್ಡ ದೊಡ್ಡ ಸಂಭಾಷಣೆ ಹೇಗೆ ಹೇಳುತ್ತಾರೆ? ಆ್ಯಕ್ಷನ್‌, ಕಾಮಿಡಿ ಹೇಗೆ ಮಾಡುತ್ತಾರೆಂದು ನೋಡಿ ದಂಗಾಗಿದ್ದೇನೆ. ನನಗೆ ಇಂದಿಗೂ ರಿಯಾಲಿಟಿ ಶೋನಲ್ಲಿ ಸುಲಭವಾಗಿ ನಟಿಸಲು ಆಗುವುದಿಲ್ಲ.

ನಿಮ್ಮ ಮಕ್ಕಳಲ್ಲಿ ಯಾವ ಪ್ರತಿಭೆ ಇದೆ?

ನನ್ನ ಮಗ ಸಂಪೂರ್ಣವಾಗಿ ಸ್ಪೋರ್ಟ್ಸ್ ಪರ್ಸನ್‌, ಮಗಳು ಡ್ಯಾನ್ಸ್ ಮತ್ತು ಸಿಂಗಿಂಗ್‌ ಇಷ್ಟಪಡುತ್ತಾಳೆ. ಅವಳು ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ.

ನಿಮ್ಮ ಕೆಲಸದ ಮಧ್ಯೆ ಕುಟುಂಬವನ್ನು ಹೇಗೆ ಸಂಭಾಳಿಸುತ್ತೀರಿ?

ನಾನು ಯಾವಾಗಲೂ ಕುಟುಂಬಕ್ಕೆ ಪ್ರಾಧಾನ್ಯತೆ ಕೊಡುತ್ತೇನೆ. ಮಕ್ಕಳಿಗೆ ಅನುಕೂಲವಾಗುವಂತೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಮಕ್ಕಳ ಪ್ರತಿಯೊಂದು ವಿಕಾಸವನ್ನೂ ನೋಡುವುದು ಮತ್ತು ಎಂಜಾಯ್‌ ಮಾಡುವುದು ನನಗೆ ಇಷ್ಟ. ಸಿನಿಮಾಗಳು ಅಥವಾ ಬೇರೆ ಕೆಲಸ ನನ್ನ ಬದುಕಲ್ಲ. ಆದರೆ ಬದುಕಿನ ಒಂದು ಭಾಗವಾಗಿದೆ. ಸಿನಿಮಾಗಳನ್ನು ನಾನು ನಂತರ ಮಾಡಬಹುದು. ಮಕ್ಕಳ ಶೆಡ್ಯೂಲ್‌ಗೆ ತಕ್ಕಂತೆ ನನ್ನನ್ನು ನಾನು ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ. ಮಕ್ಕಳ ರಜೆಯಲ್ಲಿ ನಾನು ಯಾವ ಕೆಲಸವನ್ನೂ ಮಾಡುವುದಿಲ್ಲ. ಏಕೆಂದರೆ ಆ ಸಮಯ ಅವರಿಗಾಗಿ ಮೀಸಲು. ಆಗ ನಾನು ಟಿ.ವಿ.ಯ ಯಾವುದೇ ಫಿಕ್ಷನ್‌ ಶೋನಲ್ಲಿ ಭಾಗವಹಿಸುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ