ಸಿಇಓ, ಪಾರ್ಲೆ ಆ್ಯಗ್ರೋ ಕಂಪನಿ

ತಮ್ಮ ಕೌಟುಂಬಿಕ ಉದ್ಯಮವನ್ನು ಅತ್ಯುನ್ನತ ಎತ್ತರಕ್ಕೆ ಏರಿಸಿರುವ ಶೌನಾ ಚೌಹಾಣ್‌, ಯಾವುದೇ ಕ್ಷೇತ್ರವಿರಲಿ, ಹೆಣ್ಣು ಅದರಲ್ಲಿ ಮುನ್ನೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನಿರೂಪಿಸಿದ್ದಾರೆ.....!

22ರ ಕಿರಿಯ ವಯಸ್ಸಿನಲ್ಲೇ ಪಾರ್ಲೆ ಆ್ಯಗ್ರೋ ಕಂಪನಿಯ ಬೋರ್ಡ್‌ನಲ್ಲಿ ನಿರ್ದೇಶಕಿಯಾಗಿ ಸೇರಿದ ಶೌನಾ ಚೌಹಾಣ್‌, ಇದೀಗ ಈ ಕಂಪನಿಯ ಅತ್ಯುನ್ನತ ಹುದ್ದೆ ಸಿಇಓ ಆಗಿ ಅಲಂಕರಿಸಿದ್ದಾರೆ. ಈ ಕಂಪನಿಯ ಸಂಸ್ಥಾಪಕರಾದ ಪ್ರಕಾಶ್‌ ಚೌಹಾಣ್‌ರ ಹಿರಿಯ ಮಗಳಾದ ಈಕೆ ಬಿಸ್‌ನೆಸ್‌ನ ಎಲ್ಲಾ ವ್ಯವಹಾರಗಳನ್ನೂ ಸಂಭಾಳಿಸುತ್ತಾ, ಕಾಲಕ್ರಮೇಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನಿಯ ಉಪಸ್ಥಿತಿಯನ್ನು ಎರಡು ಪಟ್ಟು ಹೆಚ್ಚಿಸಿದ್ದಾರೆ. ತಮ್ಮ ಹುಟ್ಟು ಸ್ವಭಾವದಿಂದ ವರ್ಕೋಹಾಲಿಕ್‌ ಮತ್ತು ಆತ್ಮವಿಶ್ವಾಸಭರಿತರಾದ ಈಕೆ, ಮುಂದೆ ವಿವಾಹದ ಬಳಿಕ ತಮ್ಮ ಮಗ ಜಹಾನ್‌ಗಾಗಿ ಹೇಗೆ ಒಬ್ಬ ಮಮತಾಮಯಿ, ಆದರ್ಶ ತಾಯಿಯಾಗಿ ಹೊರಹೊಮ್ಮಿದರು ಎಂಬುದನ್ನು ಅವರ ಮಾತುಗಳಿಂದಲೇ ತಿಳಿಯೋಣವೇ?

ನಮ್ಮ ದೇಶದಲ್ಲಿ ಮಹಿಳಾ ಉದ್ಯಮಿಗಳ ಸ್ಥಿತಿ ಬಗ್ಗೆ ಏನು ಹೇಳಲು ಬಯಸುತ್ತೀರಿ?

ನಮ್ಮ ದೇಶದಲ್ಲಿ ಮಹಿಳೆಯರ ಕುರಿತಾಗಿ ಜನ ಬಹಳ ತಪ್ಪು ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅದರಲ್ಲೂ ನೀವು ಉದ್ಯಮಿಗಳ ಕುರಿತಾಗಿ ಹೇಳುವುದಾದರೆ, ಸಾಮಾನ್ಯವಾಗಿ ಜನ ಗಂಡಸರ ಕಡೆಯೇ ಕೈ ಮಾಡುತ್ತಾರೆ. ಆದರೆ ಪರಿಸ್ಥಿತಿ ಈಗ ಹಿಂದಿನಂತಿಲ್ಲ. ಬೇಕಾದಷ್ಟು ಮಹಿಳೆಯರು ಉದ್ಯಮ ನಡೆಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ನಮ್ಮಲ್ಲಿ ಅನೇಕ ಮಹಿಳಾ ಉದ್ಯಮಿಗಳು ಬಲು ಕಾರ್ಯಶೀಲ ಪ್ರವೃತ್ತಿಯವರು. ಅವರ ಬಳಿ ಅತ್ಯುನ್ನತ ಹುದ್ದೆ, ಅತ್ಯಧಿಕ ಹಣವಿದೆ, ಅಷ್ಟೇ ಖ್ಯಾತಿಯೂ ಇದೆ. ಯಾವ ಮಹಿಳೆಯೇ ಇರಲಿ, ತನ್ನ ಕೌಟುಂಬಿಕ ಉದ್ಯಮಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಮಹತ್ವಪೂರ್ಣವಲ್ಲ..... ಅವರೇ ಬಂಡವಾಳ ಹೂಡಿ ಏನು ಸಾಧಿಸುತ್ತಾರೆ ಹಾಗೂ ಅವರ ಶಕ್ತಿ ಸಾಮರ್ಥ್ಯಗಳು ಕಡಿಮೆಯೇನಲ್ಲ ಎಂಬುದೇ ಮುಖ್ಯ. ವಾಸ್ತವದಲ್ಲಿ ಮಹಿಳೆಯರ ಕುರಿತಾಗಿ ನಮ್ಮ ವಿಚಾರಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಮಹಿಳೆಯರೂ ಇತರರಿಗೆ ಮಾದರಿಯಾಗಿ ನಿಲ್ಲಬಲ್ಲರು ಎಂಬುದನ್ನು ನೋಡಿ! ಹೀಗಾಗಿ ಹೆಣ್ಣಿನ ಶಕ್ತಿಯನ್ನು ಕಡಿಮೆ ಎಂದು ಭಾವಿಸದಿರಿ!

ನಿಮ್ಮ ದೃಷ್ಟಿಯಲ್ಲಿ ಟೈಂ ಮ್ಯಾನೇಜ್‌ಮೆಂಟ್‌ ಎಷ್ಟು ಮಹತ್ವಪೂರ್ಣ ಎನಿಸುತ್ತದೆ?

ಜೀವನದ ಪ್ರತಿ ಕ್ಷೇತ್ರದಲ್ಲೂ ಯಶಸ್ಸಿಗಾಗಿ ಸಮಯದ ಮಹತ್ವ ಅರಿತುಕೊಳ್ಳುವುದಿದೆಯಲ್ಲ.... ಅದು ಪ್ರತಿಯೊಬ್ಬರಿಗೂ ಅತ್ಯಗತ್ಯ. ಸಮಯ ಹಾಳು ಮಾಡುವವರು ಮಾತ್ರವೇ ತಮ್ಮ ಐಡೆಂಟಿಟಿ ಮೂಡಿಸಲಾರರು. ಯೋಜನೆ ರೂಪಿಸುವಿಕೆ, ಉದ್ದೇಶ ಮತ್ತು ಗುರಿ ತಲುಪುವಿಕೆ, ಸಮಯದ ಮಿತಿ ನಿರ್ಧರಿಸುವಿಕೆ, ಕೆಲಸಗಳ ಪ್ರಾಥಮಿಕತೆ ನಿಗದಿಪಡಿಸುವಿಕೆ.... ಇತ್ಯಾದಿಗಳು ಕೆಲವು ಬೇಸಿಕ್‌ ನಿಯಮಗಳೆನಿಸುತ್ತವೆ. ಇವೆಲ್ಲವನ್ನೂ ಟೈಂ ಮ್ಯಾನೇಜ್‌ ಮಾಡಲು ನಾನು ಬಳಸಿಕೊಳ್ಳುತ್ತೇನೆ.

ನಮ್ಮ ಸಿಬ್ಬಂದಿಯರು ತಮ್ಮ ಟೈಂ ಮ್ಯಾನೇಜ್‌ ಮಾಡಲು ಸಹಾಯ ಸಿಗಲೆಂದೇ ನಾವು ಬೆಳಗ್ಗೆ 8.30ಕ್ಕೆ ಕೆಲಸ ಶುರು ಮಾಡುತ್ತೇವೆ ಹಾಗೂ ಸಂಜೆ 5 ಗಂಟೆಗೆ ಕೆಲಸ ಮುಗಿಸುತ್ತೇವೆ. ಆಗ ಸಂಜೆ ಅವರು ತಮ್ಮ ಕುಟುಂಬದೊಡನೆ ಒಂದಾಗಿರಲು ಅವಕಾಶ ಸಿಗುತ್ತದೆ.

ಮಗನ ಜೊತೆ ಎಷ್ಟು ಹೊತ್ತು ಕಳೆಯುತ್ತೀರಿ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ