ಬಿ.ಸಿ. ನಾಗೇಶ್ ವ್ಯಕ್ತಿ, ವ್ಯಕ್ತಿತ್ವ ಮತ್ತು ರಾಜಕೀಯ ಪಯಣ

ಇತ್ತೀಚಿನ ದಿನಗಳಲ್ಲಿ ರಾಜಕಾರಣವೆಂದರೆ ಭ್ರಷ್ಟಾಚಾರ, ಅಧಿಕಾರವೆಂದರೆ ಸಂಪಾದನೆ, ರಾಜಕೀಯವೆಂದರೆ ಸ್ವಾರ್ಥ ಎಂಬ ಭಾವನೆ ಜನಸಾಮಾನ್ಯರಲ್ಲಿ ಬಲವಾಗಿ ಬೇರೂರುತ್ತಿರುವುದು ವಿಷಾದಕರ ಸಂಗತಿ. ರಾಜಕೀಯಕ್ಕೆ ಬರುವವರು ಜನಸೇವೆಗಿಂತ ತಮ್ಮ ವೈಯಕ್ತಿಕ ಸಂಪತ್ತು ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಬರುತ್ತಾರೆ ಎಂಬ ಅನುಮಾನವೂ ಆಗಾಗ್ಗೆ ವ್ಯಕ್ತವಾಗುತ್ತದೆ. ಆದರೆ ಮರುಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸಿಕೊಳ್ಳುವ ಓಯಸಿಸ್‌ನಂತೆ, ರಾಜಕೀಯದಲ್ಲಿಯೂ ಸರಳತೆ, ಸಿದ್ಧಾಂತ ಮತ್ತು ಸಾರ್ವಜನಿಕ ಬದುಕಿನ ಶಿಸ್ತನ್ನು ಉಳಿಸಿಕೊಂಡಿರುವ ವ್ಯಕ್ತಿಗಳು ಇದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಕೆಲವು ನಾಯಕರು ತಮ್ಮ ಕ್ಷೇತ್ರದ ರಾಜಕಾರಣದ ಮೂಲಕವೇ ಗುರುತಿಸಿಕೊಂಡರೆ, ಇನ್ನೂ ಕೆಲವರು ರಾಜ್ಯಮಟ್ಟದ ಪ್ರಮುಖ ನೀತಿ ನಿರ್ಧಾರಗಳು ಮತ್ತು ಸಾರ್ವಜನಿಕ ಚರ್ಚೆಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದ, ಈ ಎರಡೂ ಹಂತಗಳನ್ನು ಅನುಭವಿಸಿದ ರಾಜಕಾರಣಿ. “ರಾಜಕಾರಣವೆಂದರೆ ಹೀಗೆಯೇ ಇರಬೇಕೆ?” ಎಂದು ಜನರನ್ನು ಯೋಚಿಸುವಂತೆ ಮಾಡುವ ಅಂತಹ ವ್ಯಕ್ತಿತ್ವಗಳಲ್ಲಿ ಬಿ.ಸಿ. ನಾಗೇಶ್ ಅವರ ಹೆಸರು ಗಮನಾರ್ಹ.

ತಿಪಟೂರಿನ ಜನಪ್ರತಿನಿಧಿಯಾಗಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಹಾಗೂ ಸಾಕ್ಷರತೆ ಮತ್ತು ಸಕಾಲ ಇಲಾಖೆಯ ಜವಾಬ್ದಾರಿಯನ್ನೂ ವಹಿಸಿದ್ದರು. ಅವರ ರಾಜಕೀಯ ಜೀವನದಲ್ಲಿ ಸಂಘಟನಾ ಹಿನ್ನೆಲೆ, ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕ, ಶಿಕ್ಷಣ ಕ್ಷೇತ್ರದ ಸುಧಾರಣೆಯ ಮೇಲಿನ ಒತ್ತು ಮತ್ತು ಅದೇ ಸಮಯದಲ್ಲಿ ವಿವಾದಾತ್ಮಕ ನಿರ್ಧಾರಗಳ ಸುತ್ತ ನಡೆದ ತೀವ್ರ ಸಾರ್ವಜನಿಕ ಚರ್ಚೆಗಳು—ಎಲ್ಲವೂ ಸೇರಿಕೊಂಡಿವೆ.

ಬಾಲ್ಯ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದ ಆರಂಭ

ಬಿ.ಸಿ. ನಾಗೇಶ್ ಅವರ ಪೂರ್ಣ ಹೆಸರು ಬೆಳ್ಳೂರು ಚಂದ್ರಶೇಖರಯ್ಯ ನಾಗೇಶ್. ಅವರು 1959ರ ಜುಲೈ 1ರಂದು ಬಿ. ಎಸ್. ಚಂದ್ರಶೇಖರಯ್ಯ ಮತ್ತು ಬಿ. ಸಿ. ಸಾವಿತ್ರಮ್ಮ ದಂಪತಿಗಳಿಗೆ ಜನಿಸಿದರು.  ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಮುಗಿಸುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಚಯವಾಗಿ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದವರು, ನಂತರ ಉನ್ನತ ಶಿಕ್ಷಣಕ್ಕೆಂದು ಬೆಂಗಳೂರಿನ . ಬೆಂಗಳೂರಿನ ಬಿ.ಎಂ.ಎಸ್. ಕಾಲೇಜ್ ಆಫ್  ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಾಗಲೇ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಪರಿಚಯವಾಗಿ ಅದರ ಮೂಲಕ ವಿದ್ಯಾರ್ಥಿಗಳ ಹಕ್ಕುಗಳ ಕುರಿತಾಗಿ ಅನೇಕ ಹೋರಾಟಗಳಲ್ಲಿ ಭಾಗಿಗಳಾಗುವ ಮೂಲಕ ಸಾರ್ವಜನಿಕ ಚಟುವಟಿಕೆಗಳಿಗೆ ಪರಿಚಿತರಾಗುತ್ತಾರೆ. ಸಂಘಟನೆಯ ಹೋರಾಟಗಳಷ್ಟೆ ಅಲ್ಲದೇ ಓದಿನಲ್ಲೂ ಚುರುಕಾಗಿದ್ದ ನಾಗೇಶ್ B.E. (Electrical) ಪದವಿಯನ್ನು ಯಶಸ್ವಿಯಾಗಿ ಮುಗಿಸುತ್ತಾರೆ.

ತಾಂತ್ರಿಕ ಶಿಕ್ಷಣ ಪಡೆದ ವ್ಯಕ್ತಿಯೊಬ್ಬರು ಮುಂದೆ ಶಿಕ್ಷಣ ಇಲಾಖೆಯ ಸಚಿವರಾಗಿದ್ದು ಕೂಡ ಅವರ ಜೀವನದ ಒಂದು ಕುತೂಹಲಕಾರಿ ಸಂಗತಿ. ಎಂಜಿನಿಯರಿಂಗ್ ಹಿನ್ನೆಲೆ ಅವರ ಆಡಳಿತಾತ್ಮಕ ಚಿಂತನೆ ಮತ್ತು ವ್ಯವಸ್ಥಿತ ಕಾರ್ಯವಿಧಾನದ ಮೇಲಿನ ಒಲವಿಗೆ ಸಹಾಯಕವಾಗಿರಬಹುದು ಎಂಬುದು ಅವರ ಸಾರ್ವಜನಿಕ ಜೀವನವನ್ನು ನೋಡಿದಾಗ ಕಂಡುಬರುವ ಒಂದು ಅಂಶ.

ತಿಪಟೂರಿನಿಂದ ಆರಂಭವಾದ ರಾಜಕೀಯ ಪಯಣ

ವಿದ್ಯಾರ್ಥಿ ಜೀವನದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದಲ್ಲದೇ ಕೆಲ ಕಾಲ ಸಂಘದ ಪೂರ್ಣಾವಧಿ ಕಾರ್ಯಕರ್ತರೂ (ಪ್ರಚಾರಕ್) ಆಗಿದ್ದಂತಹ ಬಿ.ಸಿ. ನಾಗೇಶ್ ಅವರು ಸಹಜವಾಗಿಯೇ 1984ರಿಂದ ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಲ್ಲದೇ ತಿಪಟೂರು ಕ್ಷೇತ್ರದ ರಾಜಕೀಯದಲ್ಲಿ ಅವರ ಪ್ರವೇಶ ನಿಧಾನವಾಗಿ ಗಟ್ಟಿಯಾಗುತ್ತಾ ಹೋಯಿತು. 2008ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಿಪಟೂರಿನಿಂದ ಬಿಜೆಪಿಯ ಅಭ್ಯರ್ಥಿಯಾಗಿ ಗೆದ್ದರು. 2013ರಲ್ಲಿ ಸೋತರೂ, ಐದು ವರ್ಷಗಳ ನಂತರ ಮತ್ತೆ ಕ್ಷೇತ್ರವನ್ನು ಗೆದ್ದರು. 2018ರ ಚುನಾವಣೆಯಲ್ಲಿ ಅವರು ₹9.47 ಕೋಟಿಗೂ ಅಧಿಕ ಆಸ್ತಿಯನ್ನು ಘೋಷಿಸಿಕೊಂಡಿದ್ದರೂ, ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದೇ ಇದ್ದದ್ದೂ ಗಮನಾರ್ಹವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ