ಮುಟ್ಟಿನ ದಿನಗಳು ಶುರುವಾಗಿವೆ. ಈಗ ನೀನು ಅಡುಗೆಮನೆಗೆ ಹೋಗಬಾರದು, ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಮಾಡಬಾರದು, ಆ ದಿನಗಳಲ್ಲಿ ಬಿಳಿ ಬಟ್ಟೆ ಧರಿಸಬಾರದು, ಆಟ ಆಡುವುದು, ಸೈಕಲ್ ಹೊಡೆಯುವುದು ಎಲ್ಲಾ ಬಂದ್‌. ಅಂದಹಾಗೆ ಈ ಎಲ್ಲ ನಿರ್ಬಂಧಗಳು ಮಹಿಳೆಯರ ದಿನಚರಿಯನ್ನು ಅಸ್ತವ್ಯಸ್ತಗೊಳಿಸುವಂತಾಗಿವೆ. ಅದರಲ್ಲೂ ವಿಶೇಷವಾಗಿ ಹದಿ ವಯಸ್ಸಿನ ಹುಡುಗಿಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವಂಥವಾಗಿವೆ. ಇವಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

ಮುಟ್ಟಿಗೆ ಸಂಬಂಧಪಟ್ಟ ಅದೆಷ್ಟೋ ತಪ್ಪು ಕಲ್ಪನೆಗಳಿವೆ. ಅವು ದೇಶದಲ್ಲೆಡೆ ವ್ಯಾಪಿಸಿವೆ. ನೀವು ಯಾವುದೇ ನಗರದಲ್ಲಿರಿ, ಪ್ರತಿಯೊಂದು ಕುಟುಂಬದಲ್ಲಿ ಇದಕ್ಕೆ ಸಂಬಂಧಪಟ್ಟ ತಪ್ಪುಕಲ್ಪನೆ ನಿಮ್ಮನ್ನು ಚಕಿತಗೊಳಿಸುತ್ತದೆ. ಆದರೆ ಮುಟ್ಟಿಗೆ ಸಂಬಂಧಪಟ್ಟ ಕಟ್ಟುನಿಟ್ಟು ಆಚರಣೆ ಮಾಡುವ ಕಾಲ ಮಾತ್ರ ಇದಲ್ಲ ಎನ್ನುವುದಂತೂ ಸತ್ಯ. ಈ ಎಲ್ಲ ನಿರರ್ಥಕ ಮಾತುಗಳು ನಿಮ್ಮನ್ನು ಗೊಂದಲಕ್ಕೆ ಕೆಡಹುವುದರ ಹೊರತು ಬೇರೇನೂ ಅಲ್ಲ.

ಪ್ರತಿಬಂಧ ಮತ್ತು ನಿಯಂತ್ರಣ

ಸಾಕಷ್ಟು ಓದಿರುವ ಹಾಗೂ ಮುಕ್ತ ವಿಚಾರವುಳ್ಳ ಮಹಿಳೆ ಸಾಧನಾ ಹೀಗೆ ಹೇಳುತ್ತಾರೆ, ಕೆಲವು ಪ್ರತಿಬಂಧಗಳು ಹಾಗೂ ನಿಯಂತ್ರಣಗಳು ನಮ್ಮ ಮನೆಯಲ್ಲೂ ಕೂಡ ಇವೆ. ಆದರೆ ಅವು ಅಷ್ಟೊಂದು ಕಠೋರ ಹಾಗೂ ಯಾವುದೇ ತೊಂದರೆ ಕೊಡುವಂಥದು ಅಲ್ಲ. ಆದರೆ ಕೆಲವು ಕಡೆ ಎಷ್ಟೊಂದು ಕಷ್ಟಕರ ನಿಯಮಗಳಿವೆಯೆಂದರೆ, ಜೀವಿಸುವುದೇ ಕಷ್ಟ ಎನಿಸುತ್ತದೆ. ನಾನು ಬೇರೊಂದು ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋದಾಗ ನನಗೆ ಅದರ ಪ್ರತ್ಯಕ್ಷ ಅನುಭವವಾಯಿತು. ಆಗ ನಾನು ಮುಟ್ಟಾಗಿದ್ದೆ.

ಆ ಮನೆಯ ಹಿರಿಯ ಸೊಸೆ ನನಗೆ ಆ ಅವಧಿಯಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಬಗ್ಗೆ ಒಂದು ಪಟ್ಟಿಯನ್ನು ಮುಂದಿಟ್ಟರು. ಅವು ಅವರ ಮನೆಯ ಕಾಯ್ದೆ ಕಾನೂನುಗಳು. ನಾನು ಅವನ್ನು ಪಾಲಿಸಲಾಗದು ಎಂದು ಸ್ಪಷ್ಟವಾಗಿ ನಿರಾಕರಿಸಿಬಿಟ್ಟೆ. ನೀವು ನನ್ನ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಿದರೆ ನಾನು ಇಲ್ಲಿಂದ ಹೊರಟೇ ಹೋಗುವುದಾಗಿ ಹೇಳಿದೆ. ಅಂತೂ ನನ್ನ ಬೆದರಿಕೆ ಕೆಲಸಕ್ಕೆ ಬಂತು.

ಮನೆಯ ಗಂಡಸರಿಗೆ ಈ ವಿಷಯ ಗೊತ್ತಾಗಲೇಬಾರದು ಎಂದೆಲ್ಲ ಹೇಳಲಾಗುತ್ತದೆ. ಆದರೆ ಇಷ್ಟೆಲ್ಲ ನಿಯಮಗಳನ್ನು ಹೇರಿದರೆ, ಮನೆಯ ಗಂಡಸರಿಗೆ ಅಷ್ಟೇ ಏಕೆ, ಅಕ್ಕಪಕ್ಕದವರಿಗೂ ಕೂಡ ಸುಲಭವಾಗಿ ಗೊತ್ತಾಗುತ್ತದೆ.

ತುರ್ತು ಕೆಲಸ ಕೂಡ ಅಗತ್ಯವಲ್ಲ

ದಾರಿ ಮಧ್ಯದಲ್ಲಿ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ನೋಡಿಬಿಟ್ಟರೇನು ಗತಿ ಎಂಬ ಅಸಹಜತೆ ದೇಶದ ಅರ್ಧದಷ್ಟು ಮಹಿಳೆಯರನ್ನು ಕಾಡುತ್ತದೆ. ಆ ಕಾರಣದಿಂದ ಕಾಲೇಜಿಗೆ, ಕೆಲಸಕ್ಕೆ ರಜೆ ಹಾಕಬೇಕಾಗಿ ಬರುತ್ತದೆ. ಅಷ್ಟೇ ಏಕೆ ಮಹತ್ವದ ಕೆಲಸಗಳನ್ನೂ ಮುಂದೂಡಬೇಕಾಗಿ ಬರುತ್ತದೆ.

28 ವರ್ಷದ ಅನುರಾಧಾ ಹೀಗೆ ಹೇಳುತ್ತಾರೆ, ``ಮುಟ್ಟಾದಾಗ ಹುಡುಗಿ ಅಥವಾ ಮಹಿಳೆ ಉಪ್ಪಿನಕಾಯಿ ಡಬ್ಬವನ್ನು ಮುಟ್ಟಿದ ಮಾತ್ರಕ್ಕೆ ಅದು ಹೇಗೆ ಕೆಟ್ಟು ಹೋಗುತ್ತದೆ? ಇದನ್ನು ಯಾರಾದರೂ ಪ್ರೂವ್‌ ಮಾಡಿ ತೋರಿಸಬೇಕು. ಅಜ್ಜಿ ಇದ್ದಾಗ ಎಷ್ಟೆಲ್ಲ ನಿಯಮಗಳನ್ನು ಹೇರಲಾಗುತ್ತಿತ್ತು. ಅಜ್ಜಿ ಹೋದ ಬಳಿಕ ಅಮ್ಮ ಅಷ್ಟಿಷ್ಟು ನಿಯಮ ಸಡಿಲ ಮಾಡಿದರು.''

40 ವರ್ಷದ ವಂದನಾ ಹೀಗೆ ಹೇಳುತ್ತಾರೆ, ``ನಾನು ಈಗಲೂ ಕೂಡ ಪರಿಪೂರ್ಣ ಸ್ವತಂತ್ರಳಲ್ಲ. ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಆದರೆ ಅಜ್ಜಿ ಹಾಗೂ ಅಮ್ಮ ಹೇಳುತ್ತಿದ್ದಷ್ಟು ಮಾತ್ರ ಈಗಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ