``ಯಾರ ಕನಸಿನಲ್ಲಿ ಬಲ ಇರುತ್ತೋ ಅವರಿಗೆ ಗುರಿ ಸುಲಭ. ರೆಕ್ಕೆಗಳಿಂದ ಏನೂ ಸಾಧ್ಯವಿಲ್ಲ. ಉತ್ಕಟೇಚೆಯಿಂದಲೇ ಹಾರಬಹುದು,'' ಈ ಸಾಲುಗಳು ಕಾಕಿನಾಡಾದ ಪರ್ವೀನ್‌ ಹಫೀಸ್‌ ರೆಹಮಾನ್‌ ಅವರಿಗೆ ಸೂಕ್ತವಾಗಿ ಅನ್ವಯಿಸುತ್ತವೆ. ಏಕೆಂದರೆ ಸಾಧಾರಣ ಗೃಹಿಣಿಯಾಗಿದ್ದ ಪರ್ವೀನ್‌ ಅವರು ಸನ್‌ರೈಸ್‌ ನಂತಹ ದೊಡ್ಡ ಗ್ರೂಪಿನ ಆಸ್ಪತ್ರೆಗಳ ಮ್ಯಾನೇಜಿಂಗ್‌ ಡೈರೆಕ್ಟರ್ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತ ಬಂದಿದ್ದಾರೆ.

ಪರಿಶ್ರಮ ಹಾಗೂ ಆತ್ಮವಿಶ್ವಾಸವೇ ಅವರ ಈ ಯಶಸ್ಸಿನ ಪಯಣಕ್ಕೆ ಪ್ರೇರಣೆ ನೀಡಿದೆ. ಈಚೆಗಷ್ಟೇ ಅಮೆರಿಕದ ನ್ಯೂಯಾರ್ಕ್‌ನಗರದಲ್ಲಿ ಆಯೋಜಿಸಲ್ಪಟ್ಟ ಲೀಡರ್‌ ಮೆಂಡರಿಂಗ್‌ ಕಾರ್ಯಕ್ರಮದಲ್ಲಿ ಅವರಿಗೆ `ವುಮನ್‌ ಎಂಟರ್‌ ಪ್ರೆನ್ಯೂರ್‌' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಮ್ಮ ಸಂಘರ್ಷದ ಕಥೆಯನ್ನು ಅವರೇ ಸ್ವತಃ ಹೇಳುತ್ತಾರೆ, ``ನನ್ನ ಈ ಪಯಣ 20 ವರ್ಷಗಳ ಹಿಂದೆ ಆರಂಭವಾಯಿತು. ಆಗ ನನ್ನ ಪತಿ ಡಾ. ಹಫೀಸ್‌ ರೆಹಮಾನ್‌ ಒಂದು ಆಸ್ಪತ್ರೆ ಆರಂಭಿಸಿದ್ದರು. ನನ್ನನ್ನು ಆ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್ ಹುದ್ದೆಯಲ್ಲಿ ಕೂರಿಸಿದರು.

``ಕಾಲಕ್ರಮೇಣ ನಮ್ಮ ಆಸ್ಪತ್ರೆಯ ಶಾಖೆಗಳು ಹೆಚ್ಚುತ್ತಾ ಹೋದವು. ಈಗ ಸನ್‌ರೈಸ್‌ 20 ಆಸ್ಪತ್ರೆಗಳ ಗ್ರೂಪ್‌. ನಾನು ಇಡೀ ಗ್ರೂಪ್‌ನ್ನು ನಿರ್ವಹಿಸುತ್ತಿರುವೆ. ಈ ನಿರ್ವಹಣೆಯಲ್ಲಿ ನನಗೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಿ ಬಂತು.

``ಏಕೆಂದರೆ ಮದುವೆಯಾದ 2 ವರ್ಷಗಳ ತನಕ ನಾನೊಬ್ಬ ಸಾಧಾರಣ ಗೃಹಿಣಿಯಾಗಿದ್ದೆ. ಆಗ ನನ್ನ ಕೆಲಸ ಪತಿ ಹಾಗೂ ಮನೆಗೆ ಬರುವವರಿಗೆ ಅಡುಗೆ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು.''

ಏನನ್ನಾದರೂ ಹೊಸದನ್ನು ಮಾಡಬೇಕೆಂಬ ಛಲ ಅವರಿಗೆ ಬಾಲ್ಯದಿಂದಲೇ ಇತ್ತು. ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನನ್ನ ತವರುಮನೆ ಕಣ್ಣೂರಲ್ಲಿದೆ. ಮನೆಯ ಎದುರಿನಲ್ಲಿಯೇ ಮಿಲಿಟರಿ ಆಸ್ಪತ್ರೆ ಇತ್ತು. ನಾನು ಬಾಲ್ಯದಿಂದಲೇ ಆ ಆಸ್ಪತ್ರೆಯ ಕಾರ್ಯವೈಖರಿ ನೋಡಿ ಪ್ರಭಾವಿತಳಾಗಿದ್ದೆ. ಇಂಥದೇ ಆಸ್ಪತ್ರೆಯಲ್ಲಿ ನಾನೂ ಕೆಲಸ ಮಾಡುವಂತಾದರೆ.... ಎಂದು ನಾನು ಆಗಿನಿಂದಲೇ ಯೋಚಿಸುತ್ತಿದ್ದೆ.''

ಮದುವೆಯ ಬಳಿಕ ಪತಿಯ ಜೊತೆ ಕಾಕಿನಾಡಾಕ್ಕೆ ಶಿಫ್ಟ್ ಆದನಂತರ ಇಬ್ಬರೂ ಸೇರಿ ಒಂದು ಸರ್ಜಿಕಲ್ ಕಂಪನಿ ಆರಂಭಿಸಿದರು. ಈ ಕಂಪನಿ ಬೇರೆ ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳನ್ನು ಪೂರೈಸುತ್ತಿತ್ತು. ಇದರ ಜೊತೆ ಜೊತೆಗೆ ಇಬ್ಬರೂ ಸೇರಿ ಆಸ್ಪತ್ರೆಯಲ್ಲಿ ಉಪಯೋಗಿಸಲ್ಪಡುವ ಸಾಫ್ಟ್ ವೇರ್‌ನ ಒಂದು ಕಂಪನಿ ಕೂಡ ಆರಂಭಿಸಿದರು.

ಕನಸು ನನಸು

ಪರ್ವೀನ್‌ ಕ್ರಮೇಣ ಆಸ್ಪತ್ರೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನೆಲ್ಲ ಕಲಿಯುತ್ತಿದ್ದರು. ಒಂದು ದಿನ ಪತಿ ಹೊಸ ಆಸ್ಪತ್ರೆಯೊಂದನ್ನು ತೆರೆದು ಅದರ ಎಂ.ಡಿ.ಯಾಗಿ ಪರ್ವೀನ್‌ರನ್ನು ಕೂರಿಸಿದರು. ಅವರು ಈ ಕುರಿತಂತೆ, ``ಬಿಸ್‌ನೆಸ್‌ ಟ್ರಿಕ್ಸ್ ಮತ್ತು ಯಾವುದೇ ಸ್ಟ್ರೆಸ್‌ ಇಲ್ಲದೆ ಅದನ್ನು ನಿರ್ವಹಿಸುವ ಕಲೆ ನನಗೆ ಬಾಲ್ಯದಿಂದಲೇ ಗೊತ್ತಿತ್ತು. ಏಕೆಂದರೆ ನಾನು ಉದ್ಯಮಿ ಕುಟುಂಬದ ನಿಕಟತೆ ಹೊಂದಿದವಳು. ಹೀಗಾಗಿ ನನಗೆ ಮ್ಯಾನೇಜ್‌ಮೆಂಟ್‌ ಕೆಲಸ ಕಷ್ಟವೆಂಬಂತೆ ಕಾಣಲೇ ಇಲ್ಲ.''

ಸವಾಲುಗಳೊಂದಿಗೆ ಹೋರಾಡುವವರಿಗೆ ಪರ್ವೀನ್‌ ಆದರ್ಶರಾಗಿದ್ದಾರೆ. ಅಮೆರಿಕದ ಪ್ರಶಸ್ತಿ ಪಡೆದುಕೊಂಡ ಮಹಿಳೆಯರು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂಬುದನ್ನು ಪರ್ವೀನ್‌ ಸಾಬೀತು ಮಾಡಿ ತೋರಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ