ಭಾರತ ಪಾಕ್ ನಡುವಿನ ಯುದ್ಧ ಭೀತಿ ಈಗ ಮತ್ತಷ್ಟು ಹೆಚ್ಚಾಗಿದೆ. ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದಿದ್ದ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಭಾರತ 9 ಕಡೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ ಕುರಿತು ವರದಿಯಾಗಿವೆ. ಭಾರತ ಕೂಡ ಅಧಿಕೃತವಾಗಿ ಹೇಳಿಕೆ ನೀಡಿದೆ. ಈಗ ಪಾಕಿಸ್ತಾನದ ಕಡೆಯಿಂದಲೂ ಮರುದಾಳಿಯ ಆತಂಕ ಇದ್ದೇ ಇದೆ. ಹೀಗಾಗಿ ಎಲ್ಲೆಡೆ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ಕಡೆಯಿಂದಲೂ ಸನ್ನದ್ದವಾಗಿರಲು ಸೂಚಿಸಲಾಗಿದೆ.ಈಗ ವಾಯು ಸೇನೆಯು ಪಾಕ್ ಮೇಲೆ ತೀವ್ರ ನಿಗಾ ಇಟ್ಟಿವೆ. ಇನ್ನು ಭಾರತದ ಬತ್ತಳಿಕೆಯಲ್ಲಿರುವ ರಫೆಲ್ ಯುದ್ಧ ವಿಮಾನಗಳು ಸೇರಿ ಅತ್ಯಾಧುನಿಕ ಯುದ್ಧ ವಿಮಾನಗಳಿವೆ. ಇನ್ನು ಈ ರಫೇಲ್ ಯುದ್ಧ ವಿಮಾನ ಅತ್ಯಾಧುನಿಕ ಹಾಗೂ ಶಕ್ತಿಶಾಲಿ ವಿಮಾನಗಳಲ್ಲಿ ಒಂದಾಗಿದೆ. ಈಗ ಈ ವಿಮಾನವನ್ನು ಮೊದಲ ಮಹಿಳಾ ಪೈಲಟ್ ನಿಯಂತ್ರಿಸಲಿದ್ದಾರೆ.

ಹೌದು. ಎರಡು ದಶಕದ ಹಿಂದೆ ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನ ಏರಿದ್ದ ಕೀರ್ತಿ ಅವರದ್ದು, ಅವರು ಭಾರತದ ಮೊದಲ ಹಾಗೂ ರಫೇಲ್ ಫೈಟರ್ ಜೆಟ್ ಏಕೈಕ ಮಹಿಳಾ ಫೈಲಟ್ ಆಗಿರುವ 29 ವರ್ಷದ ಲೆಫ್ಟಿನೆಂಟ್ ಶಿವಾಂಗಿ ಸಿಂಗ್.

ಶಿವಾಂಗಿ ಮೊಟ್ಟ ಮೊದಲ ರಫೇಲ್ ಯುದ್ಧ ವಿಮಾನದ ಮಹಿಳಾ ಪೈಲಟ್ ಆಗಿದ್ದು, ಶತ್ರು ದೇಶದ ಮೇಲೆ ಕಣ್ಣಿಡಲು ಆಗಸದಲ್ಲಿ ಫೈಟರ್ ಜೆಟ್ ಹಾರಿಸುವ ಜವಾಬ್ದಾರಿ ಹೊತ್ತಿದ್ದಾರೆ. ಫೈಟರ್ ಜೆಟ್ ಪೈಲಟ್ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಶಿವಾಂಗಿ ಸಿಂಗ್, ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಶಿವಾಂಗಿ ನವದೆಹಲಿಯಲ್ಲಿರುವ ವಾಯುಪಡೆಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾಗ ಮೊದಲ ಭಾರಿಗೆ ಅಲ್ಲಿ ಯುದ್ದ ವಿಮಾನ ನೋಡಿದ್ದರಂತೆ. ಆ ಸಮಯದಿಂದ ಅವರಲ್ಲಿ ಜೆಟ್ ವಿಮಾನಗಳ ಹಾರಿಸಬೇಕು ಎಂಬ ಬಯಕೆ ಮೊಳಕೆಯೊಡೆದಿತ್ತು. ಇದಾದ ಬಳಿಕ ಅವರು ಪೈಲಟ್ ಆಗಲು ನಿರ್ಧರಿಸಿದ್ದರಂತೆ.

ತನ್ನ ತಾಯಿಯಿಂದ ಸ್ಫೂರ್ತಿ ಪಡೆದ ಶಿವಾಂಗಿ ವಾಯುಪಡೆಗೆ ಸೇರಲು ತಯಾರಿ ನಡೆಸಿದ್ದರು. ಭಾರತೀಯ ವಾಯುಪಡೆ 1995ರಿಂದ ಮಹಿಳೆಯರನ್ನು ಕೂಡ ನೇಮಿಸಿಕೊಳ್ಳಲು ಆರಂಭಿಸಿತ್ತು. ಆದರೆ, 2015ರಲ್ಲಿ ಶಿವಾಂಗಿಗೆ ಯುದ್ದ ವಿಮಾನ ಹಾರಾಟ ತರಬೇತಿಗೆ ಅವಕಾಶ ಒಲಿದುಬಂದಿತ್ತು.

“ನನ್ನಂತಹ ಅನೇಕ ಮಹಿಳೆಯರು ಯುದ್ಧ ವಿಮಾನದ ಪೈಲಟ್‌ಗಳಾಗಿದ್ದಾರೆ. ಇದು ಆಧುನೀಕರಣವನ್ನು ಮಾತ್ರವಲ್ಲದೆ ನಾವು ಈಗ ನಮ್ಮ ಕನಸುಗಳನ್ನು ನನಸಾಗಿಸಬಹುದು ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ ಶಿವಾಂಗಿ ಸಿಂಗ್.

ಬನಾರಸ್‌ನಲ್ಲಿ ಜನಿಸಿದ್ದ ಶಿವಾಂಗಿ, ವಿದ್ಯಾಭ್ಯಾಸದಲ್ಲಿ ಎಂದಿಗೂ ಹಿಂದುಳಿದವರಲ್ಲ. ಇದರೊಂದಿಗೆ ಕ್ರೀಡೆಯಲ್ಲೂ ದೊಡ್ಡ ಸಾಧನೆ ಮಾಡಿದ್ದರು. ಬಳಿಕ ವಿವಾಹವಾಗಿದ್ದು ಕೂಡ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್ ಆಗಿ ಸೇವೆ ಸಲ್ಲಿಸಿದವರನ್ನು. ಹೀಗಾಗಿ ಅವರ ಯುದ್ಧ ವಿಮಾನದ ಪೈಲಟ್ ಆಗುವ ಕನಸು ಮತ್ತದಷ್ಟು ಸುಲಭವೇ ಆಗಿತ್ತು. ಈಗ ಮೊದಲ ಬಾರಿಗೆ ರಫೇಲ್ ಹಾರಿಸಿದ ಮಹಿಳಾ ಸಿಬ್ಬಂದಿ ಇವರೇ ಆಗಿದ್ದಾರೆ.

ಇನ್ನು ಭಾರತೀಯ ವಾಯುಪಡೆಯಲ್ಲಿ 1,600ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಹಲವರು ಯುದ್ದ ವಿಮಾನ ಹಾರಿಸುವ ತರಬೇತಿ ಪಡೆದಿದ್ದಾರೆ. ಹಾಗೆ ಉನ್ನತ ಹುದ್ದೆಗಳಲ್ಲೂ ಅವರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಈಗ ಶಿವಾಂಗಿ ಸಿಂಗ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯುದ್ಧದ ಆತಂಕ ಸಮಯದಲ್ಲಿ ಫೈಟರ್ ಜೆಟ್‌ಗಳ ಶಬ್ದ ಕೇಳಿಬರುತ್ತಿದೆ. ಹಾಗೆ ಶತ್ರು ರಾಷ್ಟ್ರದ ಮೇಲೆ ಈ ಯುದ್ಧ ವಿಮಾನಗಳು ಕಣ್ಣಿಡಲಿವೆ. ದೇಶ ರಕ್ಷಣೆಗೆ ಯುದ್ಧ ವಿಮಾನವೇರುತ್ತಿರುವ ಶಿವಾಂಗಿ ನಮ್ಮ ದೇಶದ ಪುತ್ರಿ ಎಂಬುದೇ ಭಾರತೀಯರ ಹೆಗ್ಗಳಿಕೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ