ಪ್ರಾಪರ್ಜಿ ವೆಬ್‌ಸೈಟ್‌ನ ಸಂಸ್ಥಾಪಕಿ ಪ್ರಿಯಾ ಮಹೇಶ್ವರಿ ತಮ್ಮ ಜೀವನದ ಪ್ರಾರಂಭಿಕ ದಿನಗಳಲ್ಲಿ ಅತಿ ಸಾಧಾರಣ ಜೀವನ ನಡೆಸುತ್ತಿದ್ದರು ಹಾಗೂ ಸಾಮಾನ್ಯ ಕನಸುಗಳನ್ನು ಕಾಣುವ ಮಹಿಳೆಯರಂತೆಯೇ ಇದ್ದುಬಿಟ್ಟಿದ್ದರು. ಪ್ರಿಯಾ ರಾಜಾಸ್ಥಾನದ ಒಂದು ಸಣ್ಣ ಹಳ್ಳಿಯ ಕಟ್ಟಾ ಸಂಪ್ರದಾಯಸ್ಥರ ಮನೆಯ ಹುಡುಗಿ. ಮನೆಯವರ ಕಂದಾಚಾರಗಳು ಇವರ ಪ್ರಗತಿಪರ ವಿಚಾರಗಳಿಗೆ ಅಡ್ಡಿಯಾಗಲಿಲ್ಲ, ಅವರ ವಿಚಾರಧಾರೆ ಸದಾ ಉನ್ನತ ಮಟ್ಟದ ಸಕಾರಾತ್ಮಕ ಧೋರಣೆಯದ್ದಾಗಿದೆ.

ಪ್ರಿಯಾ ತಮ್ಮ ಕಷ್ಟಕರ ಜೀವನದ ಮಧ್ಯೆ ಕೇವಲ 3 ವಿಷಯಗಳತ್ತ ಮಾತ್ರ ಗಮನಹರಿಸಿದರು. ಅವೆದರೆ ಪರಿಶ್ರಮ, ದೃಢಸಂಕಲ್ಪ ಹಾಗೂ ಸಕಾರಾತ್ಮಕ ಧೋರಣೆ. ಈ ವಿಚಾರಗಳನ್ನು ಆಧರಿಸಿ ಇವರು ತಮ್ಮ ಜೀವನದಲ್ಲಿ ಯಶಸ್ವಿ ಎನಿಸಿದರು.

ಉದ್ಯಮಿಯಾಗಲು ಪ್ರೇರಣೆ

ತಮ್ಮ ಜೀವನ ಹಾಗೂ ಉದ್ಯಮದ ಕುರಿತಾಗಿ ಪ್ರಿಯಾ, ``ಬೆಳೆಯುತ್ತಾ ಬಂದಂತೆ ನಾನು ಮುಂದೆ ಏನಾದರೂ ಸಾಧಿಸಲೇಬೇಕು ಎಂದೆನಿಸಿತು. ಏಕೆಂದರೆ ನಮ್ಮ ಕುಟುಂಬದಲ್ಲಿ ಯಾವ ಹೆಂಗಸೂ ಇದುವರೆಗೂ ನೌಕರಿ ಮಾಡಿದ ಇತಿಹಾಸವೇ ಇಲ್ಲ. ಹೀಗಾಗಿ ಪ್ರತಿಯೊಬ್ಬ ಉದ್ಯೋಗಸ್ಥ ವನಿತೆಯೂ ನನಗೆ ಪ್ರೇರಣಾದಾಯಕರಾಗಿದ್ದಾರೆ. ಮದುವೆ ನಂತರ ನಾನು ಅಮೆರಿಕಾಗೆ ಹೋಗಿ ಉನ್ನತ ಶಿಕ್ಷಣ ಮುಂದುರಿಸುವ ಅವಕಾಶ ಸಿಕ್ಕಿತು. ಅಲ್ಲಿ ನಾನು ಯೂನಿವರ್ಸಿಟಿ ಆಫ್‌ಪೆನ್ಸಿಲ್ವೇನಿಯಾದಲ್ಲಿ ಪಿ.ಜಿ. ಮಾಡಿದೆ. ಅಮೆರಿಕಾದಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ ನಾನು ಭಾರತಕ್ಕೆ ವಾಪಸ್ಸು ಬಂದೆ. ಇಲ್ಲಿ ನೋಡಿದರೆ ಭಾರತ ಬಹಳ ವೇಗವಾಗಿ ಪ್ರಗತಿ ಸಾಧಿಸುತ್ತಿದೆ! ಒಬ್ಬ ಸಾಮಾನ್ಯ ವ್ಯಕ್ತಿಯ ಸಮಸ್ಯೆಗಳನ್ನು ನಿವಾರಿಸಲು ಬಹಳಷ್ಟು ವಿಧಾನಗಳಿವೆ. ಆಗ ನನಗೆ ಪ್ರಾಪರ್ಜಿ ಕುರಿತಾದ ಐಡಿಯಾ ಹೊಳೆಯಿತು.''

ಪ್ರಾಪರ್ಜಿಯ ಪರಿಕಲ್ಪನೆ

ತಮ್ಮ ಬಿಸ್‌ನೆಸ್‌ ಕುರಿತು ಹೇಳುತ್ತಾ ಪ್ರಿಯಾ, ``ರಿಯಲ್ ಎಸ್ಟೇಟ್‌ಗಳ ಕ್ಷೇತ್ರದಲ್ಲಿ ಪ್ರಾಪರ್ಜಿ ಒಂದು ಅನುಪಮ ವೆಬ್‌ಸೈಟ್ ಎನ್ನಬಹುದು. ಇದು ಜನರಿಗೆ ತಮ್ಮ ಪ್ರಾಪರ್ಟಿ ಕೊಳ್ಳಲು ಮಾರಲು ಅದ್ಭುತ ಸಲಹೆಗಳನ್ನು ನೀಡುತ್ತದೆ. ನಿರ್ಧಾರ ಕೈಗೊಳ್ಳಲು ನಿಷ್ಪಕ್ಷಪಾತವಾಗಿ ಸಹಕರಿಸುತ್ತದೆ. ಪ್ರಾಪರ್ಜಿ ಮೂಲಕ ನಾವು ರಿಯಲ್ ಎಸ್ಟೇಟ್‌ ಮಾರ್ಕೆಟ್‌ನಲ್ಲಿ ಸತ್ಯ ನಿಷ್ಠೆ, ಪ್ರಾಮಾಣಿಕತೆ, ಪಾರದರ್ಶಿಕತೆ ಹಾಗೂ ಉದ್ಯಮಶೀಲತೆಗಳನ್ನು ತರಲು ಪ್ರಯತ್ನಿಸಿದ್ದೇವೆ. ನಮ್ಮ ಆನ್‌ಲೈನ್‌ ರಿಸರ್ಚ್‌ ಟೀಂ, ಸ್ವತಂತ್ರವಾಗಿ ಪ್ರಾಪರ್ಜಿಯ ವಿಶ್ಲೇಷಣೆ ಮಾಡಿ ಗ್ರಾಹಕರಿಗೆ ಅತ್ಯುತ್ತಮ ಡೇಟಾ ಒದಗಿಸುತ್ತದೆ, ಇದರಿಂದ ಅವರು ಪ್ರಾಪರ್ಟಿ ಕೊಳ್ಳಲು ಸುಲಭವಾಗುತ್ತದೆ.

``ನಮ್ಮ ವೆಬ್‌ಸೈಟ್‌ ಗ್ರಾಹಕರಿಗೆ ಬಿಲ್ಡರ್‌ಗಳು, ಅವರ ಯೋಜನೆಗಳು, ಪ್ರಾಪರ್ಟಿ ಲೊಕೇಶನ್‌, ಬಿಲ್ಡರ್‌ ರೇಟಿಂಗ್‌, ಪ್ರಾಪರ್ಟಿ ದರ ಹಾಗೂ ಅದರ ಖರೀದಿಗೆ ತಗುಲುವ ಬಡ್ಡಿ ಇತ್ಯಾದಿಗಳ ಕುರಿತು ನಿಷ್ಪಕ್ಷ ಮಾಹಿತಿ ನೀಡುತ್ತದೆ. ಯಾರು ಪ್ರಾಪರ್ಜಿಯ ಸೇವೆ ಪಡೆಯುತ್ತಾರೋ, ಅವರಿಂದ ಸರ್ವೀಸ್‌ ಚಾರ್ಜ್‌ ಪಡೆಯಲಾಗುತ್ತದೆ. ಈ ರೀತಿ ಈ ವೆಬ್‌ಸೈಟ್‌ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಇತರ ವೆಬ್‌ಸೈಟ್‌ಗಳಿಗಿಂತ ತೀರಾ ವಿಭಿನ್ನವಾಗಿದೆ.''

ಪತಿಯ ಸಹಕಾರ

ತಮ್ಮ ಉದ್ಯಮದ ಸ್ಥಾಪನೆಯಲ್ಲಿ ಪತಿಯ ಸಹಕಾರವನ್ನು ಪ್ರಿಯಾ ಸಾಕಷ್ಟು ದೊಡ್ಡದಾಗಿಯೇ ಭಾವಿಸುತ್ತಾರೆ. ಆಕೆ ಪ್ರಕಾರ, ``ನನ್ನ ಪತಿ ಈ ಪ್ರಾಪರ್ಜಿಯ ಸ್ಥಾಪನೆಯಲ್ಲಿ ಬಹಳ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದಾರೆ. ಅವರು ಆಗಾಗ ನನಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ