ಪತ್ನಿ : ಇಂದಿನ ಕಾಲೇಜ್‌ ಹುಡುಗರಿಗೆ ಖಂಡಿತಾ ಸ್ವಲ್ಪ ತಿಳಿವಳಿಕೆ ಇಲ್ಲ ಬಿಡ್ರಿ.

ಪತಿ : ಯಾಕೆ ಹಾಗೆ ಹೇಳ್ತೀಯಾ?

ಪತ್ನಿ : ಜೆಂಟ್ಸ್ ಟಾಯ್ಲೆಟ್‌ಗೆ ಹೋದಾಗ ಇವರುಗಳು ಅಲ್ಲಿ `ಹೇಮಾ ಐ ಲವ್ ಯೂ!' ಅಂತ ಗೀಚಿ ಬರ್ತಾರೆ. ಅಲ್ಲಿಗೆ ಹೇಮಾ ಹೋಗಿ ನೋಡ್ತಾಳೇನು? ದಡ್ಡ ಶಿಖಾಮಣಿಗಳನ್ನು ತಂದು!

 

ಸದಾಶಿನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ಅವನು ಬಹಳ ಗೋಳಾಡತೊಡಗಿದ. ಆಗ ಅವನ ಗೆಳೆಯರು ಬಂದು ಸಮಾಧಾನಪಡಿಸಿದರು.

ಮೋಹನ್‌ : ಸಮಾಧಾನ ಮಾಡ್ಕೋ, ನಿನಗೆ ಅರ್ಜೆಂಟಾಗಿ ಏನಾದ್ರೂ ಬೇಕಿತ್ತೇ?

ಸದಾಶಿವ : ಲ್ಯಾಪ್‌ಟಾಪ್‌ ತಗೊಂಬಾ, ಈಗಲೇ ನಾನು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಸಿಂಗಲ್ ಅಂತ ನಮೂದಿಸಬೇಕು.

 

ಅಪರೂಪಕ್ಕೆ ಸೋಮಶೇಖರ ದಂಪತಿಗಳು ಚಂದ್ರಶೇಖರ ಅವರ ಮನೆಗೆ ಬಂದಿದ್ದರು. ಎಂದಿನ ಕುಶಲೋಪರಿ, ಕಾಫಿ ತಿಂಡಿಗಳಾದ ನಂತರ, ಗೆಳೆಯರ ಪತ್ನಿಯರು ಹರಟಲು ಕುಳಿತರು.

ರೇವತಿ : ಈಗಿನ ಹೊಸ ಟಿ.ವಿ. ಜಾಹೀರಾತುಗಳಲ್ಲಿ ಅದೇನೇನೋ ಕೊರಳ ಸರದ ಲಾಕೆಟ್‌, ಡಾಲರ್‌, ಬ್ರೇಸ್ಲೆಟ್‌ ತೋರಿಸ್ತಾರಪ್ಪ, ಅದರಿಂದ ದುರಭ್ಯಾಸಗಳು ಬಿಟ್ಟು ಹೋಗುತ್ತಂತೆ.

ಮಾಲತಿ : ಹೌದು ರೀ, ಈ ಗಂಡಂದಿರಿಗೆ ಬುದ್ಧಿ ಕಲಿಸಲು ನಾವು ಅಂಥದ್ದನ್ನು ಬೇಗ ಕೊಂಡು ಅವರಿಗೆ ತೊಡಿಸಬೇಕು.

ಚಂದ್ರಶೇಖರ್‌ : ಅದು ಬರೀ ಹೆಂಗಸರಿಗೆ ಮಾತ್ರವಲ್ಲ ಮಾಲತಿ, ಗಂಡಂದಿರಿಗೂ ಲಾಭ ತರುತ್ತದೆ. ಇವತ್ತೇ ನಾನೂ, ಸೋಮು ಹೋಗಿ 2-2 ಸೆಟ್‌ ತಂದುಬಿಡ್ತೀವಿ. ಆಗ ಹೆಂಗಸರು ಮಾತಿಗೆ ಮುಂಚೆ ಮುನಿಸಿಕೊಂಡು ತವರಿಗೆ ಹೋಗ್ತೀವಿ, ಮಕ್ಕಳನ್ನು ನೋಡಿಕೊಳ್ಳಿ ಕಿಟಿ ಪಾರ್ಟಿಗೆ ಹೋಗ್ತೀವಿ, ಅಂತ್ಹೇಳೋದೆಲ್ಲ ತಪ್ಪುತ್ತೆ.

ಸೋಮಶೇಖರ್‌ : ಸರಿಯಾಗಿ ಹೇಳಿದೆ ಚಂದ್ರು, ಈ ಶೋಷಮ್ಮಂದಿರ ಕಾಟ ಸಾಕಾಗಿ ಹೋಗಿದೆ!

 

ಗುಂಡ ಬೆಳಗ್ಗೆಯಿಂದಲೇ ವಾಟ್ಸ್ಆ್ಯಪ್‌ ನೋಡುತ್ತಾ ಕುಳಿತಿದ್ದ. ಅವನ ಫ್ರೆಂಡೊಬ್ಬಳು ಸ್ಯಾಂಡ್‌ವಿಚ್‌ ಫೋಟೋ ಅಪ್‌ಲೋಡ್‌ಮಾಡಿ, ಬನ್ನಿ ಟಿಫನ್‌ ಮಾಡೋಣ, ಎಂದು ಬರೆದಿದ್ದಳು. ಅದಕ್ಕೆ ಗುಂಡ, `ಆಹಾ... ಬ್ರೇಕ್‌ಫಾಸ್ಟ್ ಭಲೇ ಬೊಂಬಾಟಾಗಿದೆ,' ಎಂದು ಕಮೆಂಟ್‌ ಮಾಡಿದ. ಇದನ್ನು ಕಂಡು ಕೋಪಗೊಂಡ ಅವನ ಹೆಂಡತಿ, ಮಧ್ಯಾಹ್ನ 3 ಗಂಟೆ ಆದರೂ ಊಟ ಹಾಕಲಿಲ್ಲ. ನಂತರ ಮೆಲ್ಲಗೆ, 'ಊಟ ಮನೆಯಲ್ಲೇ ಮಾಡ್ತೀರೋ ಅಥವಾ ವಾಟ್ಸ್ಆ್ಯಪ್‌ನಲ್ಲೋ?' ಎಂದು ಪ್ರಶ್ನಿಸಿದಳು

 

ಮ್ಯಾನೇಜರ್‌ : ಏನಯ್ಯ ಗುಂಡ.... ಹೀಗಾ ಕೆಲಸ ಮಾಡೋದು? ಯಾವತ್ತಾದ್ರೂ ಗೂಬೆ ನೋಡಿದ್ದೀಯಾ?

ಗುಂಡ (ತಲೆ ಕೆಳಗೆ ಹಾಕುತ್ತಾ) : ಇಲ್ಲ ಸಾರ್‌...

ಮ್ಯಾನೇಜರ್‌ : ಅಲ್ಲೇನು ನೋಡ್ತೀಯಾ ನಿನ್ನ ತಲೆ.... ಇಲ್ಲಿ ನನ್ನ ಕಡೆ ನೋಡು!

 

ಪತ್ನಿ : ನೋಡ್ರಿ, ಇದೇ ತರಹ ನಿಮ್ಮ ಕೂದಲು ಉದುರುತ್ತಿದ್ದರೆ, ನಾನು ನಿಮಗೆ ವಿಚ್ಛೇದನ ಕೊಡ್ಬೇಕಾಗುತ್ತೆ.

ಪತಿ : ಛೇ....ಛೇ, ಮೊದಲೇ ಹೇಳಬಾರದಿತ್ತೇ? ಕಡು ಮೂರ್ಖನಂತೆ ಕಂಡ ಕಂಡ ಹೇರ್‌ ಆಯಿಲ್ ‌ಬಳಸಿ ಅದನ್ನು ಕಾಪಾಡಿಕೊಳ್ಳಲು ಎಷ್ಟು ಕಷ್ಟಪಡ್ತಿದ್ದೀನಿ!

 

ಕಿರಣ್‌ : ಈ ವಿಮೆಯ ಕಂಪನಿಗಳವರು ನಿಜಕ್ಕೂ ಕೆಟ್ಟವರು. ಹೆಚ್ಚು ಗಳಿಸುವವರ ಹೆಂಡತಿಯರೆದುರು ಕುಳಿತು, ಗಂಡ ಸತ್ತ ನಂತರ ಸಿಗುವ ಲಾಭಗಳ ಕುರಿತು ಹೇಳುತ್ತಲೇ ಇರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ