ಯಾವ ಕೆಲಸ ತನ್ನಷ್ಟಕ್ಕೇ ಕನಿಷ್ಠ ಎನಿಸುವುದಿಲ್ಲ. ಅದನ್ನು ನಿಷ್ಠೆಯಿಂದ, ಶ್ರದ್ಧೆಯಿಟ್ಟು ಗುರಿ ಸಾಧಿಸುವ ಅಗತ್ಯವಿದೆ. ಆಗ ಮಾತ್ರ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದರಲ್ಲಿ ನಂಬಿಕೆ ಇಡಿ. ತಮ್ಮ ಕಠಿಣ ಪರಿಶ್ರಮ ಹಾಗೂ ಆಸಕ್ತಿಯಿಂದ ಶೆಫ್ ರಾಜೀವ್ ಇಂದು ಅನೇಕ ಹೆಂಗಸರಿಗೆ ಪ್ರೇರಣಾದಾಯಕರಾಗಿದ್ದಾರೆ. ಅವರ ಪಾಲಿಗಂತೂ ಅಡುಗೆ ಕೆಲಸವೇ ಅಲ್ಲ, ಬದಲಿಗೆ ಪ್ರೀತಿಯ ಹವ್ಯಾಸ! ಇದು ಇವರನ್ನು ಲಕ್ಷಾಂತರ ರೆಸಿಪೀಸ್ ಕರಗತ ಮಾಡಿಕೊಳ್ಳುವಲ್ಲಿ ಸಹಕರಿಸಿದೆ.
ರಾಜೀವ್ ಇದನ್ನು ಶುರು ಮಾಡಿದ್ದು ಹೇಗೆ?
ತಮ್ಮ ಮನೆಯಲ್ಲೇ ವಿಭಿನ್ನ ಸಾಂಪ್ರದಾಯಿಕ ಭಾರತೀಯ ವ್ಯಂಜನಗಳನ್ನು ತಯಾರಿಸುವುದರಿಂದ ಇವರ ಜರ್ನಿ ಶುರುವಾಯ್ತು. ತಮ್ಮ ಪತಿಯ ಪ್ರೇಮ, ಪ್ರೋತ್ಸಾಹಗಳ ಕಾರಣ ಆಕೆ ತಮ್ಮನ್ನು ತಾವು ಈ ನಿಟ್ಟಿನಲ್ಲಿ ಮುಂದೆ ಕೊಂಡೊಯ್ಯಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಹೆಚ್ಚಿನ ದಕ್ಷತೆ ಸಾಧಿಸಲು ಶೆಫ್ ರಾಜೀವ್ 36ರ ಹರೆಯದಲ್ಲಿ ಮುಂಬೈನ ಒಂದು ಪ್ರಸಿದ್ಧ ಕುಕಿಂಗ್ ಅಕ್ಯಾಡೆಮಿ ಸೇರಿದರು. ಈ ರೀತಿ ಅವರು ತಮ್ಮ ಕಲಿಯುವಿಕೆಯನ್ನು ಈಗಲೂ ಮುಂದುವರಿಸಿದ್ದಾರೆ.
ಶೆಫ್ ರಾಜೀವ್ ಡ್ರಿಂಕ್ಸ್ ಕಾಕ್‌ಟೇಲ್ ಫುಡ್ ಸರ್ವಿಂಗ್ಸ್ ಅಂದ್ರೆ ಪಾನ್ ಲಡ್ಡು, ಸ್ಟಫ್ಡ್ ಬ್ರೆಡ್ ಡೆ, ಕೇಕ್, ಕುಕೀಸ್ ಇತ್ಯಾದಿಗಳಲ್ಲಿ ಮಹಾರಥಿ ಎನಿಸಿದ್ದಾರೆ. ತಮ್ಮ ಶ್ರದ್ಧೆ, ಪರಿಶ್ರಮದಿಂದಾಗಿ ಆಕೆ ಪಾಕಲೋಕದಲ್ಲಿ ಮಿಂಚುತ್ತಿದ್ದಾರೆ. ಬನ್ನಿ, ಅವರೊಂದಿಗೆ ಒಂದಿಷ್ಟು ಮಾತನಾಡೋಣ :
ಇತ್ತೀಚೆಗೆ ಜನ ಬಹಳ ಹೆಲ್ತ್ ಕಾನ್ಶಿಯಸ್ ಆಗುತ್ತಿದ್ದಾರೆ. ಹೀಗಿರುವಾಗ ನೀವು ಯಾವ ತರಹದ ಹೆಲ್ದಿ ಡಿಶೆಸ್ ತಯಾರಿಸಿ, ಅದರಲ್ಲಿ ರುಚಿಯನ್ನೂ ಉಳಿಸಿಕೊಳ್ಳಬಲ್ಲಿರಿ?
ವಾಸ್ತವದಲ್ಲಿ ಜನ ಈಗ ಹೆಚ್ಚು ಹೆಲ್ತ್ ಕಾನ್ಶಿಯಸ್ ಆಗಿದ್ದಾರೆ. ಅದರ ಜೊತೆಗೆ ಅವರಿಗೆ ರೆಸಿಪೀಸ್ ಟೇಸ್ಟಿ ಆಗಿಯೂ ಇರಬೇಕು. ಹೀಗಾಗಿ ನಾನು ಪ್ರೋಟೀನ್ ರಿಚ್ ಡಿಶೆಸ್ ತಯಾರಿಸಲು ಹೆಚ್ಚು ಒತ್ತು ಕೊಡ್ತೀನಿ. ಇದು ಟೇಸ್ಟಿ ಜೊತೆ ಹೆಲ್ದಿ ಕೂಡ ಆಗಿದೆ. ನನ್ನ ಪ್ರತಿಯೊಂದು ಡಿಶ್ ಜನರಿಗೆ ಬಹಳ ಇಷ್ಟವಾಗುತ್ತಿದೆ. ಹೀಗಾಗಿ ನಾನು ಪ್ರತಿ ಸಲ ಏನಾದರೊಂದು ಹೊಸತನ್ನು ತಯಾರಿಸಲು ಪ್ರಯತ್ನಿಸುತ್ತಿರುತ್ತೇನೆ.
ನಿಮ್ಮ ಕುಟುಂಬದವರ ಸಪೋರ್ಟ್ ಹೇಗಿದೆ?
ನನ್ನ ಜೀವನವೇ ನನ್ನ ಕುಟುಂಬ! ಇಂದು ನಾನು ಏನಾಗಿದ್ದೇನೋ ಅದು ನನ್ನ ಕುಟುಂಬದವರ ಸಹಾಯದಿಂದ ಮಾತ್ರ. ನಮ್ಮ ಕುಟುಂಬದಲ್ಲಿ ನನ್ನ ಪತಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರೇ ನನ್ನ ತಾಕತ್ತು!
ನೀವು ಯಾವ ಶೆಫ್‌ರಿಂದ ಪ್ರಭಾವಿತರು?
ನಾನು ಜೂಲಿಯೇ ಚೈಲ್ಡ್ ರಿಂದ ಹೆಚ್ಚು ಪ್ರಭಾವಿತೆ. ಏಕೆಂದರೆ ಆಕೆ ಮದುವೆ ಆದ ನಂತರವೇ ಕುಕಿಂಗ್‌ನ್ನು ತಮ್ಮ ಕೆರಿಯರ್ ಆಗಿಸಿಕೊಂಡಿದ್ದರು, ನಾನೂ ಸಹ.
ನೀವು ನಿಮ್ಮ ಕೆಲಸ ಕುಟುಂಬ ಎರಡನ್ನೂ ಹೇಗೆ ಮ್ಯಾನೇಜ್ ಮಾಡ್ತೀರಿ?
ನಾನು ನನ್ನ ಕೆರಿಯರ್ ಆರಂಭಿಸಿದಾಗ, ನನ್ನ ಮಕ್ಕಳಿಬ್ಬರೂ ಮಾಧ್ಯಮಿಕ ಶಾಲೆಗೆ ಬಂದಿದ್ದರು. ಆಗಿನಿಂದ ತಮ್ಮ ಎಲ್ಲಾ ಕೆಲಸಗಳನ್ನೂ ಅವರು ತಾವೇ ಸಂಭಾಳಿಸುತ್ತಿದ್ದರು, ನಾನು ಮೇಜರ್ ಆಗಿ ಆದನ್ನು ಗಮನಿಸಿಕೊಳ್ಳುತ್ತಿದ್ದೆ. ಕುಟುಂಬದವರೇ ನಿಮ್ಮ ಕೈ ಹಿಡಿಯದಿದ್ದರೆ ನೀವು ಕೆರಿಯರ್‌ನಲ್ಲಿ ಯಶಸ್ಸು ಕಾಣಲು ಹೇಗೆ ಸಾಧ್ಯ?