ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ.

ಅಯೋಧ್ಯಾ ನಗರದ ಸೂರ್ಯ ವಂಶ ಇಲ್ಲವೇ ಇಕ್ಷ್ವಾಕು ವಂಶ ಅಥವಾ ರಘು ವಂಶದ ರಾಜ ದಶರಥನಿಗೆ ಕೌಸಲ್ಯೆ, ಸುಮಿತ್ರ ಮತ್ತು ಕೈಕೇಯಿ ಎಂಬ ಮೂವರು ರಾಣಿಯರಿದ್ದರೂ, ಆತನಿಗೆ ಮಕ್ಕಳಾಗದೇ ಹೋದಾಗ, ತನ್ನ ವಂಶೋದ್ಧಾರಕರನ್ನು ಪಡೆಯುವ ಸಲುವಾಗಿ ಆಸ್ಥಾನ ಪುರೋಹಿತರಾದ ವಶಿಷ್ಠ ಮಹರ್ಷಿಗಳ ಆಣತಿಯಂತೆ ಋಷಿ ಋಷ್ಯಶೃಂಗರೊಡನೆ ಸರಯು ನದಿಯ ತಟದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಕ್ಕೆ ಭಗವಂತನು ಸಂತೃಷ್ಟಗೊಂಡು ಅಗ್ನಿಯ ಮೂಲಕ ಪಾಯಸ ತುಂಬಿದ್ದ ಪಾತ್ರೆಯನ್ನು ನೀಡಿ ಅದನ್ನು ಆವರ ರಾಣಿಯರಿಗೆ ಸೇವಿಸಲು ತಿಳಿಸುತ್ತಾನೆ. ಅಗ್ನಿ ದೇವರ ಅನುಗ್ರದಂತೆ ಆ ಪಾಯಸವನ್ನು ತನ್ನ ರಾಣಿಯರಿಗೆ ಕೊಟ್ಟ ಪರಿಣಾಮ ಚೈತ್ರ ಮಾಸದ ನವಮಿಯಂದು ಅಥಾತ್ ಚೈತ್ರ ಶುಕ್ಲ ನವಮಿಯಂದು ರಾವಣನ ಸಂಸಾರ ಮಾಡುವ ಸಲುವಾಗಿ ಕೌಸಲ್ಯಾ ದೇವಿಗೆ ಭಗವಾನ್ ವಿಷ್ಣುವಿನ ಹತ್ತು ಅವತಾರಗಳಲ್ಲಿ ಏಳನೇ ಅವತಾರವಾಗಿ ಶ್ರೀರಾಮನ ಜನನವಾಗುತ್ತದೆ. ನಂತರ ಸುಮಿತ್ರಾ ದೇವಿಗೆ ಲಕ್ಷ್ಮಣ ಮತ್ತು ಶತ್ರುಘ್ಞ ಎಂಬ ಮಕ್ಕಳು ಮತ್ತು ಕೈಕೇಯಿಗೆ ಭರತ ಎಂಬ ಪುತ್ರನ ಜನನವಾಗುತ್ತದೆ.

ಬಹಳ ವರ್ಷಗಳ ನಂತರ ಅಯೋಧ್ಯಾ ನಗರಿಗೆ ಶ್ರೀ ರಾಮಚಂದ್ರನ ಮೂಲಕ ವಾರಸುದಾರ ಜನನವಾಗಿದ್ದು ಇದು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸೂಚಿಸುತ್ತದೆ ಎಂಬ ನಂಬಿಕೆಯಿಂದ ಅಂದು ಅಯೋಧ್ಯೆ ಇಡೀ ಸಂಗೀತ, ನೃತ್ಯ ಮತ್ತು ವಿವಿಧ ಅಲಂಕರಾಗಳನ್ನೊಳಗೊಂಡ ಭವ್ಯ ರಥೋತ್ಸವಗಳೊಂದಿಗೆ ರಾಮನ ಜನನವನ್ನು ಸಡಗರದಿಂದ ಸಂಭ್ರಮಿಸಿದ್ದರು. ತ್ರೇತಾಯುಗ ಕಳೆದು, ದ್ವಾಪರಯುಗವಾಗಿ ಈಗ ಕಲಿಯುಗದಲ್ಲೂ ಸಹಾ ಅಂದು ರಾಮನ ಜನನ್ವನ್ನು ಸಡಗರದಿಂದ ಸ್ವಾಗತಿಸಿದಂತೆಯೇ ಇಂದಿಗೂ ಸಹಾ ಪ್ರಪಂಚಾದ್ಯಂತ ಮಾಸದ ಒಂಬತ್ತೂ ದಿನಗಳನ್ನು ನವರಾತ್ರಿ ಎಂದು ಉಪವಾಸ ಮಾಡುತ್ತಾ, ಭಕ್ತಿಯಿಂದ ರಾಮನ ಪೂಜೆ ಮತ್ತು ಭಜನೆಗಳನ್ನು ಮಾಡಿ ಒಂಭತ್ತನೆಯ ದಿನ ಅರ್ಥಾತ್ ರಾಮನವಮಿಯಂದು, ಬಾಲ ರಾಮನ ವಿಗ್ರಹಕ್ಕೆ ಸ್ನಾನ ಮಾಡಿಸಿ ಶುಚಿರ್ಭೂತಗೊಳಿಸಿ, ಹೊಸಾ ಬಟ್ಟೆಯನ್ನು ತೊಡಿಸಿ, ತೊಟ್ಟಿಲಲ್ಲಿ ಮಲಗಿಸಿ ವಿವಿಧ ಭಜನೆಗಳು ಮತ್ತು ಕೀರ್ತನೆಗಳನ್ನು ಗಾಯನ ಮಾಡಿದರೆ ಇನ್ನೂ ಕೆಲವೆಡೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಒಳಗೊಂಡ ಭವ್ಯ ಮೆರವಣಿಗೆ ಅರ್ಥಾತ್ ಶೋಭಾ ಯಾತ್ರೆಗಳನ್ನು ಮಾಡಲಾಗುತ್ತದೆ

ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ ಮಾಡಿ, ನವಮಿ ದಿನದಂದು ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಬಂಧು ಮಿತ್ರರ ಒಡಗೂಡಿ ರಾಮೋತ್ಸವ ಮಾಡಿ ಹಬ್ಬವನ್ನು ಆಚರಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ