ಜೇಷ್ಠ ಮಾಸ ಇನ್ನೇನು ಮುಗಿಯುತ್ತಿದ್ದು, ಆಷಾಡ ಮಾಸ ಆರಂಭವಾಗುತ್ತಲಿದೆ. ಆಷಾಡ ಮಾಸದ ಗಾಳಿಯ ರಭಸ ಈಗಾಗಲೇ ಹೆಚ್ಚಾಗಿಯೇ ಹೋಗಿದೆ. ಹೇಳೀ ಕೇಳಿ ಭಾನುವಾರ ಎಂದರೆ ಬಹಳಷ್ಟು ಬೆಂಗಳೂರಿಗರಿಗೆ ಬೆಳಾಗಾಗುವುದೇ ಸೂರ್ಯ ನೆತ್ತಿಗೆ ಬಂದ ಮೇಲೆಯೇ ಎಂದರೆ ತಪ್ಪಾಗಲಾರದೇನೋ? ಆದರೆ ಅದಕ್ಕೆ ಅಪವಾದ ಎಂಬಂತೆ ಇಂದು ಬೆಂಗಳೂರಿನ ಉತ್ತರದ ಭಾಗದ ಸಹಕಾರ ನಗರದಲ್ಲಿ ಬೆಳ್ಳಂಬೆಳ್ಳಗ್ಗೆಯೇ ಹಬ್ಬದ ವಾತಾವರಣ ಮೂಡಿತ್ತು ಎಂದರೆ ತಪ್ಪಾಗಲಾದರದು.
ಕಾರು, ಬಸ್, ನಾನಾ ತರಹದ ದ್ವಿಚಕ್ರ ವಾಹನಗಳು ಮುಂತಾದ ಮೋಟಾರು ವಾಹನಗಳ ದಟ್ಟಣೆ ಅವುಗಳು ಉಗುಳುವ ಹೊಗೆಯಿಂದ ಕನಿಷ್ಠ ಪಕ್ಷ ಒಂದು ಅರ್ಧ ದಿನವಾದರೂ ಹೊರಬಂದು ಸ್ವಚ್ಚ ವಾತಾವರಣದಲ್ಲಿ ಮನಸ್ಸಿಗೆ ನೆಮ್ಮದಿ ಮತ್ತು ದೈಹಿಕ ಪರಿಶ್ರಮದ ಸಮ್ಮಿಲವಾದ ಸೈಕಲ್ ದಿನವನ್ನಾಗಿ ಆಚರಿಸಲು ಸಹಕಾರ ನಗರದ ಮಹಿಳಾ ಕಲ್ಯಾಣ ಸಂಘದವರು ನಿರ್ಧರಿಸಿ ಅದನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದರು. ಕೇವಲ ಸಹಕಾರ ನಗರ ಮಾತ್ರವಲ್ಲದೇ ಅಕ್ಕ ಪಕ್ಕ ಬಡಾವಣೆಯ ಸುಮಾರು ಇನ್ನೂರಕ್ಕೂ ಹೆಚ್ಚಿನ ಸೈಕಲ್ ಸವಾರರು ಅದಲ್ಲೂ ಶಾಲಾಮಕ್ಕಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೈಕಲ್ ತುಳಿಯುವ ಮೊದಲು ಬಂದವರೆಲ್ಲರಿಗೂ ಒಂದು ಹತ್ತು ನಿಮಿಷಗಳಷ್ಟು ಸಂಗೀತದೊಂದಿಗೆ ಝುಂಬಾ ನೃತ್ಯ ಮಾಡಿಸಿ ಮೈಕೈ ಸಡಿಲಗೊಳಿಸಿ ಸರಾಗವಾಗಿ ಸೈಕಲ್ ತುಳಿಯುವುದಕ್ಕೆ ಅನುಕೂಲ ಮಾಡಿಕೊಟ್ಟರು. ಸ್ಥಳೀಯ ಶಾಸಕರು ಮತ್ತು ರಾಜ್ಯದ ಮಂತ್ರಿಗಳಾದ ಶ್ರೀ ಕೃಷ್ಣಾ ಭೈರೇಗೌಡರು ಸ್ವಲ್ಪ ದೂರ ಸೈಕಲ್ ತುಳಿಯುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ರೀತಿಯ ಸೈಕಲ್ ತುಳಿಯುವುದು ಕೇವಲ ಈ ರೀತಿಯ ಕಾರ್ಯಕ್ರಮಕ್ಕೋ ಇಲ್ಲವೇ ಒಂದೇ ಒಂದು ದಿನಕ್ಕೇ ಸೀಮಿತವಾಗದೇ ಸೈಕಲ್ ತುಳಿಯುವುದನ್ನು ನಮ್ಮ ಜೀವನದ ಶೈಲಿಯಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯಕ್ಕೂ ಉತ್ತಮ ಮತ್ತು ಪರಿಸರ ಹಾನಿಯನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದಾಗಿದೆ ಎಂದು ತಿಳಿಸಿದರು. ಇಡೀ ಕಾರ್ಯಕ್ರಮದಲ್ಲಿ ಇಬ್ಬರು ಅತ್ಯಂತ ಆಕರ್ಷಣೆಯಾಗಿದ್ದರು. ಮೊದಲಿಗೆ ಸುಮಾರು ಒಂದು, ಒಂದೂವರೆ ವರ್ಷದ ಪುಟ್ಟ ಬಾಲಕ ತನ್ನ ಪುಟ್ಟ ಸೈಕಲ್ ಜೊತೆ ಎಲ್ಲರೊಂದಿಗೆ ಭಾಗವಹಿಸಿದರೆ ಮತ್ತೊಂದು ಶ್ರೀ ಶ್ರೀಧರ್ ಜೋಷಿಯವರ ಮಕ್ಕಳಾದ ಶ್ರೀದತ್ತ ಜೋಷಿ ಮತ್ತು ಶ್ರೀವತ್ಸ ಜೋಷಿಯವರು ಮೂರು ಚಕ್ರದ ಸೈಕಲ್. ಎರಡು ಒಂದೇ ರೀತಿಯ ಸೈಕಲ್ಗಳನ್ನು ಸ್ವತಃ ಶ್ರೀ ದತ್ತ ಜೋಷಿ ತನ್ನ ಸಹೋದರನ ಜೊತೆ ಸೇರಿ, ಮೂರು ಚಕ್ರದ ಸೈಕಲ್ಲನ್ನಾಗಿಸಿ ಸಹೋದರರಿಬ್ಬರೂ ಒಂದಾಗಿ ಸೈಕಲ್ ತುಳಿದಿದ್ದದ್ದು ಪ್ರಮುಖ ಅಂಶವಾಗಿದ್ದಲ್ಲದೆ, ಕಾರ್ಯಕ್ರಮದ ನಂತರ ಸೈಕಲನ್ನು ವೇದಿಕೆಯ ಮೇಲೆ ಇರಿಸಿ ಅನೇಕರು ಅದರ ಜೊತೆ ತಾಮುಂದು ನಾಮುಂದು ಎಂದು ಫೋಟೋ ತೆಗೆಸಿಕೊಳ್ಳುತ್ತಿದ್ದದ್ದು ಆ ಸಹೋದರರು ಮತ್ತು ಅವರ ತಂದೆ ಶ್ರೀಧರ್ ಜೋಷಿಯವರ ಮುಖದ ಮೇಲೆ ಮಂದಹಾಸ ಮೂಡಿಸುತ್ತಿತ್ತು.
ಇಂದಿನ ಕಾಲದ ಮಕ್ಕಳಿಗೆ ಆಟಗಳು ಎಂದರೆ ಅದು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಯಾವುದೇ ದೈಹಿಕ ಪರಿಶ್ರಮವಿಲ್ಲದೆ, ಕಣ್ಣುಗಳಿಗೆ ಮಾರಕವಾಗುವಂತಹ ಮೊಬೈಲ್ ಆಟಗಳೇ ಆಗಿಹೋಗಿರುವುದು ದುರ್ದೈವ ಮತ್ತು ಕಳವಳಕಾರಿಯಾಗಿದೆ. ಮೊಬೈಲ್ ಹೊರತಾಗಿ ಹೊರಾಂಗಣ ಆಟ ಎಂದರೆ ಕ್ರಿಕೆಟ್ ಇಲ್ಲವೇ ಫುಟ್ಬಾಲ್ ಮತ್ತು ಟೆನಿಸ್ ಆಟಗಳ ಹೊರತಾಗಿ ಬೇರಾವ ಆಟಗಳೂ ಇಂದಿನ ಮಕ್ಕಳಿಗೆ ತಿಳಿದಿಲ್ಲದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಸುಮಾರು ಒಂದು ಹೊತ್ತು ಸೈಕಲ್ ತುಳಿದು ಸುಸ್ತಾಗಿದ್ದವರೆಲ್ಲರ ಮನಸ್ಸನ್ನು ಮುದಗೊಳಿಸಲು ಆಯೋಜಕರು ನಮ್ಮ ದೇಸಿ ಆಟಗಳಾದ ಗಿಲ್ಲಿ ದಾಂಡು, ಲಗೋರಿ, ಅಳುಗುಳಿ ಮಣೆ, ಚೌಕಾಬಾರ, ಪಗಡೆ, ಚೆದುರಂಗ, ಟೈ






