ಅಂತರಾಷ್ಟ್ರೀಯ ಮಟ್ಟದ ಕಲಾಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ “ಸ್ಯಾಮ್ ಗಿಲ್ಲಿಯಾಮ್​ ಪ್ರಶಸ್ತಿ”ಗೆ ಕರ್ನಾಟಕದ ಹಿರಿಯ ಕಲಾವಿದೆ ಶೀಲಾ ಗೌಡ ಭಾಜನರಾಗಿದ್ದಾರೆ. ದಿಯಾ ಆರ್ಟ್ ಫೌಂಡೇಷನ್ ಮತ್ತು ಗಿಲ್ಲಿಯಾಮ್​ ಫೌಂಡೇಷನ್​ ಜಂಟಿಯಾಗಿ “ಸ್ಯಾಮ್ ಗಿಲ್ಲಿಯಾಮ್”  ಪ್ರಶಸ್ತಿ ನೀಡುತ್ತವೆ.

ಶೀಲಾ ಗೌಡ ಅವರು ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು  63.49 ಲಕ್ಷ ರೂ. (75000 ಡಾಲರ್) ಮೊತ್ತದ್ದಾಗಿದೆ. ಪ್ರಶಸ್ತಿಯ ಜೊತೆಗೆ, ದಿಯಾ ಆರ್ಟ್ ಫೌಂಡೇಷನ್​ನ ವೇದಿಕೆಯಲ್ಲೂ ಅವಕಾಶ ನೀಡಲಾಗುತ್ತದೆ.

ಕಳೆದ ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕಲಾ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದ ಪೋಷಕ ಸಂಸ್ಥೆಗಳು, ಈಗ 2025ನೇ ಸಾಲಿನ ಪ್ರಶಸ್ತಿಗೆ ಕನ್ನಡತಿ ಶೀಲಾ ಗೌಡ ಅವರನ್ನು ಆಯ್ಕೆ ಮಾಡಿವೆ. ಚೊಚ್ಚಲ ಪ್ರಶಸ್ತಿಯನ್ನು 2024ರಲ್ಲಿ ಘಾನಾ ದೇಶದ ಇಬ್ರಾಹಿಂ ಮಹಾಮಾ ಅವರಿಗೆ ನೀಡಲಾಗಿತ್ತು.

68 ವರ್ಷದ ಕ್ರಿಯಾಶೀಲ, ಸಮಕಾಲೀನ ಕಲಾವಿದೆ ಶೀಲಾ ಗೌಡ ಅವರು ಮೂಲತಃ ಭದ್ರಾವತಿಯವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ವರ್ಣಚಿತ್ರಕಾರರಾಗಿ ತರಬೇತಿ ಪಡೆದಿರುವ ಶೀಲಾ, ಭಾರತದ ಅಂಚಿನಲ್ಲಿರುವ ಜನರ ಕಾರ್ಮಿಕರ ದೈನಂದಿನ ಅನುಭವಗಳಿಂದ ಸ್ಫೂರ್ತಿ ಪಡೆದು ತಮ್ಮ ಪ್ರಕಿಯೆ, ಪ್ರಧಾನವಾದ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಶೀಲಾ ಗೌಡ ಅವರ ಕಲಾಕೃತಿಗಳಲ್ಲಿ ಎದ್ದು ಕಾಣುವುದು ಸಾಮಾಜಿಕ ಕಳಕಳಿ. ಇವರ ಕಲಾಕೃತಿಗಳಲ್ಲಿ ಭಾರತದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮೊದಲಾದ ವಿಷಯಗಳು ಅದ್ಭುತವಾಗಿ ಬಿಂಬಿತವಾಗಿವೆ. ಕಲಾಕೃತಿಗಳ ರಚನೆಗೆ ಅನುಸರಿಸಿರುವ ಮಾರ್ಗ ಕೂಡ ಬೆರಗು ಹುಟ್ಟಿಸುತ್ತವೆ. ಸಿದ್ಧ ಮಾದರಿಯನ್ನು ಬದಿಗಿಟ್ಟು ಸಾಂಪ್ರದಾಯಿಕವಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಕಲಾಕೃತಿಗಳನ್ನು  ನಿರ್ಮಿಸುವ ಇವರ ಕೌಶಲ್ಯ ಎಂತಹವರನ್ನೂ ನಿಬ್ಬೆರಗಾಗಿಸುವಂಥದ್ದು. ಬಣ್ಣಗಳ ಬದಲಿಗೆ ಹಸುವಿನ ಸಗಣಿ, ಬೂದಿ, ದಾರ ಹಾಗೂ ಕೂದಲುಗಳನ್ನು ಉಪಯೋಗಿಸಿಕೊಂಡು ಕಲಾಕೃತಿಗಳನ್ನು ರಚಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ