ಉಪ್! ಜೀವನದಲ್ಲಿ ದೊಡ್ಡ ಯು ಟರ್ನ್ ಬೇಕು ಸಾಕಾಗಿದೆ ಈ ಬದುಕಿನ ಜೊತೆಗೆ ರಾಜಿ ಮಾಡಿಕೊಂಡು ಅದೇ ಜೀವನ? ಅದೇ ಕೆಲಸ?ಅದೇ ಜನ? ಅದೇ ಬದುಕು? ಕೊನೆ ಇಲ್ಲದ ಯಕ್ಷ ಪ್ರೆಶ್ನಗಳು ಉತ್ತರ ಸಿಗದೇ ಅಸಮಾಧಾನದ ಅತೃಪ್ತ ಭಾವಗಳ ನೀವೇದನೆ.
ಸಮಾಧಾನವಿಲ್ಲದ ಮನಸಿಗೆ ಸಮಾಧಾನ ಅನ್ನೋ ಬೆಟ್ಟ ದೂರವೇ ಆಗಿ ಬಿಡುತ್ತದೆ.
ಜೀವನ ಬದ್ಲಾವಣೆ ಆಗ್ಬೇಕು ಅನ್ಕೊಂಡ್ರೆ ಏನು ಬದ್ಲಾಗಲ್ಲ ನಾವು ಮಾಡೋ ಪ್ರಯತ್ನನು ಜೊತೆಗೆ ಇರ್ಬೇಕು ಅದೃಷ್ಟವು ಇರ್ಬೇಕು ಅರ್ಥ ಮಾಡಿಕೊಳ್ಳದೆ ಬದಲಾವಣೆಯನ್ನು ಹುಡುಕುತ್ತ ಹೊರಟರೆ ಬದುಕು ಮುಗಿದು ಹೋಗುತ್ತದೆ ಅಷ್ಟೇ! ಖುಷಿ ಸಿಗುವುದಲ್ಲ ಸಣ್ಣ ಪುಟ್ಟ ಖುಷಿಯನ್ನು ಅನುಭವಿಸಿ ಜೀವವನ್ನು ಸುಂದವಾಗಿಸಿಕೊಳ್ಳಬೇಕೆ ವರೆತು, ಇಲ್ಲ ಸಲ್ಲದ ಅಸಮಾಧಾನವನ್ನು ಸೃಷ್ಟಿಸಿ , ನಮಗೆ ನಾವೇ ಬದುಕಿನಲ್ಲಿ ಸಿಗುವ ಆನಂದದಿಂದ ವಂಚಿತರಾಗುತ್ತೇವೆ ಅಷ್ಟೇ.
ಇರುವಂತೆ ಸ್ವೀಕರಿಸಿ ಜೊತೆಗೆ ನಡೆಯುವ ಬದುಕು ಬಹು ಚಂದವೇ ಅದ್ರಲ್ಲಿರೋ ನೆಮ್ಮದಿ ಮತ್ತೆ ಯಾವುದರಲ್ಲೂ ಇಲ್ಲ. ನಾವು ಬದಲಾವಣೆ ಬಯಸಿದಂತೆಲ್ಲ ಬದಲಾಗುವಂತಿದ್ದರೆ, ಅಂದುಕೊಂಡತೆ ಯಾವುದೇ ಕೊರತೆ ಇಲ್ಲದೆ ಎಲ್ಲರು ಜೀವಿಸಿ ಬಿಡುತ್ತೇವೆ ಅಷ್ಟೇ ಅದಕ್ಕೆ ಬದುಕು ನಡೆಸುವ ವಿಧಿ ಸಾಹೇಬ ಅಡ್ಡ ಬಂದಿರಬೇಕು ಬದುಕನ್ನು ಮತ್ತು ಬದುಕುವ ರೀತಿಯನ್ನು ಅರ್ಥ ಮಾಡಿಸಲು ಎಲ್ಲವು ಸುಲಭವಾಗಿ ಸಿಕ್ಕಿ ಬಿಟ್ಟರೆ ಕಷ್ಟದ ಪರಿಚವೇ ಆಗುತ್ತಿರಲಿಲ್ಲ ಎಲ್ಲರು ಸುಖ ಜೀವಿ ಗಳಾಗಿ ಜೀವಿಸುತ್ತಿದ್ದರು ಬಹುಷಃ!
ಜೀವನದ ದಾರಿಯೆ ಬೇರೆ ನಮಗೆ ತಿಳಿಯದಂತಹ ತಿರುವು ಅರಿವುಗಳು ನಮಗೆ ಅರ್ಥ ಮಾಡಿಸಲು ಉದಯವಾಗುತ್ತದೆ. ಅರ್ಥ ಮಾಡಿಕೊಳ್ಳವ ಮನಸ್ಥಿತಿ ಬೇಕು ಅಷ್ಟೇ.
ವಾಣಿ ಮೈಸೂರು