ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ನಿಮ್ಮ ಹಳೆಯ ಸ್ನೇಹಿತರು, ಸಂಬಂಧಿಕರು ಮತ್ತು ಸಮಾಜದಲ್ಲಿ ನಡೆಯುವ ಘಟನೆಗಳ ಮಾಹಿತಿಯನ್ನು ನೀಡುತ್ತಿರುತ್ತವೆ. ಇಂತಹ ಜಾಲತಾಣದಲ್ಲಿ ನೀವು ಫೇಕ್‌ ಅಕೌಂಟ್ ಒಂದನ್ನು ಓಪನ್‌ ಮಾಡಿ ಸಾಕಷ್ಟು ಮಜ ಪಡೆಯಬಹುದು.

ಈ ಮಜವನ್ನು ಕೇವಲ ಯುವ ಪೀಳಿಗೆಯವರಷ್ಟೇ ಪಡೆಯಬೇಕು, ನಾವಲ್ಲ ಎಂದು ನೀವು ಯೋಚಿಸಬಾರದು. ನೀವು ವಿವಾಹಿತರಾಗಿದ್ದು, ಸಾಕಷ್ಟು ವಯಸ್ಸಾಗಿದ್ದರೂ ಕೂಡ, ಸಾಕಷ್ಟು ಮಜ ಪಡೆಯಬಹುದು. ಅಂದರೆ ಪ್ರತಿಯೊಂದು ವಯಸ್ಸಿನವರು ಇದನ್ನು ಎಂಜಾಯ್‌ ಮಾಡಬಹುದು.

ಈಚೆಗಷ್ಟೆ 75 ವಯಸ್ಸಿನ ವೃದ್ಧರೊಬ್ಬರು ತಮ್ಮ ವಯಸ್ಸನ್ನು ಮರೆಮಾಚಿ 25 ವರ್ಷದ ಯುವಕನ ಜೊತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್‌ ಮಾಡಿದರು. ಅವರು ಹೀಗೆ ಮಾಡಲು ಪ್ರಮುಖ ಕಾರಣ ತಮ್ಮ ಏಕಾಂಗಿತನ ಹೋಗಲಾಡಿಸುವುದಾಗಿತ್ತು.

ಫೇಸ್‌ಬುಕ್‌ ಚ್ಯಾಟ್‌ನಲ್ಲಿ ಇಬ್ಬರೂ ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಆ ಯುವಕ ಭೇಟಿ ಆಗಲು ಒತ್ತಾಯಿಸತೊಡಗುತ್ತಿದ್ದಂತೆ ವೃದ್ಧೆ ತನ್ನ ಅಕೌಂಟ್‌ ಡೀ ಆ್ಯಕ್ಟಿವೇಟ್‌ ಮಾಡಿದರು. ಇದಕ್ಕೂ ಮುಂಚೆ ಆ ಅಜ್ಜಿ ಚಾಟ್‌ನ ಮಜವನ್ನು ಸಾಕಷ್ಟು ಅನುಭವಿಸಿದ್ದರು.

ಇಂದಿನ ಧಾವಂತದ ಜೀವನದಲ್ಲಿ ಯಾರಿಗೇ ಆಗಲಿ ಭೇಟಿಯಾಗುವಷ್ಟು ಸಮಯಾವಕಾಶ ಇಲ್ಲ. ತಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆಯಿದ್ದರೆ, ಅವರಿಗೆ ವಾಟ್ಸ್ಆ್ಯಪ್‌, ಫೇಸ್‌ಬುಕ್‌ ಮೂಲಕವೇ ಸಲಹೆ ನೀಡಲಾಗುತ್ತದೆ.

ಇಂದಿನ ಇ-ಯುಗದಲ್ಲಿ ಫೇಕ್‌ ಐಡಿಯಿಂದ ಎಷ್ಟೊಂದು ಮಜ ಪಡೆಯಬಹುದಲ್ವ?

ಏನಿದು `ಇ-ಸ್ನೇಹ'?

ಇಬ್ಬರು ವ್ಯಕ್ತಿಗಳ ನಡುವೆ ಇ-ಮಾಧ್ಯಮ ಅಂದರೆ ಇಮೇಲ್‌, ಫೇಸ್‌ಬುಕ್‌ ಮುಖಾಂತರ ಸ್ನೇಹ ಏರ್ಪಟ್ಟಲ್ಲಿ ಅದನ್ನು `ಇ-ಸ್ನೇಹ' ಎನ್ನುತ್ತಾರೆ. ಇದರಲ್ಲಿ `ಇ-ಮಾಧ್ಯಮ'ದ ಮುಖಾಂತರವೇ ಪರಸ್ಪರರನ್ನು ಕಾಣುತ್ತಾರೆ ಅಥವಾ ಶಬ್ದಗಳ ಮುಖಾಂತರವೇ ಸ್ನೇಹ ಗಟ್ಟಿಗೊಳಿಸುತ್ತಾರೆ. ಎಷ್ಟೋ ಸಲ ಈ ಸ್ನೇಹ ಸಂಗಾತಿತನಕದ ರೂಪ ಪಡೆದುಕೊಳ್ಳುತ್ತದೆ.

ನಕಲಿ `ಇ-ಸ್ನೇಹ' ಹೇಗೆ?

ನಕಲಿ `ಇ-ಸ್ನೇಹ' ಮಾಡುವುದು ತುಂಬಾ ಸುಲಭ. ಇದರಲ್ಲಿ ನಿಮ್ಮ ಹೆಸರು ಹಾಗೂ ಗುರುತನ್ನು ಗೌಪ್ಯವಾಗಿಡಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಹೊಸ ಅಕೌಂಟ್‌ ಮಾಡಲು ಇಮೇಲ್ ಐಡಿ, ಹುಟ್ಟಿದ ವರ್ಷ, ಲಿಂಗ ಮುಂತಾದಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. `ಫೇಕ್‌ ಇ-ಸ್ನೇಹ'ಕ್ಕಾಗಿ ತಪ್ಪು ಮಾಹಿತಿ ಕೊಡಿ. ಇಲ್ಲದಿದ್ದರೆ ನಿಮ್ಮ ಒಂದು ತಪ್ಪು ನಿಮಗೆ ದುಬಾರಿಯಾಗಿ ಪರಿಣಮಿಸಬಹುದು.

ಫೇಕ್‌ ಇ-ಸ್ನೇಹದ ಲಾಭಗಳು

ಟೈಮ್ ಪಾಸ್ : ನೀವು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದಾಗ ಏಕಾಂಗಿತನದ ಅನುಭವ ಮಾಡಿಕೊಳ್ಳುತ್ತಿದ್ದರೆ, ಇಂತಹ ಸಂದರ್ಭದಲ್ಲಿ ನಿಮಗೆ ಇ-ಸ್ನೇಹ ಸಾಕಷ್ಟು ಉಪಯೋಗಕ್ಕೆ ಬರಬಹುದು. ತಕ್ಷಣವೇ ನಿಮ್ಮ ಲ್ಯಾಪ್‌ಟಾಪ್‌ ಆನ್‌ ಮಾಡಿ ನಿಮ್ಮ ಇ-ಸ್ನೇಹಿತನ ಜೊತೆ ಸಂಪರ್ಕ ಬೆಳೆಸಿಕೊಳ್ಳಿ.

ನಿಮ್ಮ ಈ ಪ್ರಶ್ನೆಗಳಿಂದ ಅವನೂ ಕೂಡ ನಿಮಗೆ ಪ್ರಶ್ನೆ ಮಾಡಬಹುದು. ನಿಮ್ಮ ಬಗ್ಗೆ ತಿಳಿದುಕೊಳ್ಳಲು ಅವನ ಕುತೂಹಲ ಹೆಚ್ಚಬಹುದು. ನಿಮ್ಮಿಬ್ಬರ ನಡುವಿನ ಮಾತುಕತೆ ಹೆಚ್ಚು ದಿನ ಮುಂದುವರಿಯಬಹುದು. ಆದರೆ ನಿಮ್ಮ ನಿಜವಾದ ಗುರುತು ಯಾವುದೇ ಕಾರಣಕ್ಕೂ ಹೇಳಲು ಹೋಗಬೇಡಿ. ಇಲ್ಲದಿದ್ದರೆ ನಿಮ್ಮ ಇಡೀ ಆಟವೇ ಕೆಟ್ಟುಹೋಗುತ್ತದೆ.

ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ 

ಇ-ಸ್ನೇಹದ  ಅರ್ಥ ನಿಮ್ಮ ಸ್ನೇಹದ ಬಗ್ಗೆಯೇ ಮಾತಾಡಬೇಕು ಎಂದಲ್ಲ. ಏಕೆಂದರೆ ಇದರಿಂದ ನಿಮಗೆ ಕೆಲವು ದಿನಗಳ ಬಳಿಕ ಬೋರ್‌ ಅನಿಸಲಾರಂಭಿಸುತ್ತದೆ. ದಿನ ಒಂದೇ ರೀತಿಯ ಮಾತುಗಳು ನಿಮ್ಮ ಉತ್ಸಾಹವನ್ನು ಕಡಿಮೆಗೊಳಿಸುತ್ತವೆ. ಇದರ ಬದಲು ಪ್ರಚಲಿತ ವಿದ್ಯಮಾನ ಹಾಗೂ ಬೇರೆ ಕೆಲವು ಆಸಕ್ತಿದಾಯಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿ. ಇದರಿಂದ ನಿಮಗೆ ಹೊಸ ವಿಚಾರಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ