ಕರ್ನಾಟಕ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿದ್ದ ಈ ಕ್ರೀಡೋತ್ಸವ ಅಂದು ನೂತನ ರಾಷ್ಟ್ರೀಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿತ್ತು. ಹದಿನೇಳರ ಹರೆಯದ ಯುವ ಈಜುಗಾರ್ತಿ 200 ಮೀ. ಬಟರ್‌ ಪ್ಲೈ ವಿಭಾಗದಲ್ಲಿ 2:21:24 ಕ್ಷಣಗಳಲ್ಲಿ ಗುರಿಮುಟ್ಟಿ ಈ ದಾಖಲೆ ಸ್ಥಾಪಿಸಿದ್ದರು! ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಇನ್ನಷ್ಟು ಉತ್ತಮಪಡಿಸಿ ಕೊಂಡಿದ್ದರು ಎನ್ನುವುದು ಇನ್ನೊಂದು ವಿಶೇಷ.

ಇಂತಹ ಸಾಧನೆ ಮಾಡಿದ ಆ ಯುವ ಈಜುತಾರೆ  ದಾಮಿನಿ ಗೌಡ.

ಸ್ನೇಹಿತರು ಹಾಗೂ ಕ್ರೀಡಾ ಪ್ರೇಮಿಗಳು ಇವರಿಗೆ ಕೊಟ್ಟಿರುವ ಹೆಸರು ಈಜುಕೊಳದ `ಚಿಟ್ಟೆ.' `ಬಟರ್‌ ಫ್ಲೈ' ವಿಭಾಗದಲ್ಲಿ ಈ ಯುವ ಈಜುಗಾರ್ತಿ ಹೊಂದಿರುವ ಪರಿಣತಿ ಅಪಾರ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ ಒಟ್ಟು 100ಕ್ಕೂ ಮಿಕ್ಕಿ ಪದಕ ಗಳಿಸಿರುವ ಈಕೆ ಮುಂದೆ ಒಲಿಂಪಿಕ್ಸ್ ನಂಥ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಪದಕಗಳೊಂದಿಗೆ ಕೀರ್ತಿ ತರುವರೆನ್ನುವುದು ಅವರು ತರಬೇತಿ ಪಡೆಯುತ್ತಿರುವ ಬಸವನಗುಡಿ ಈಜುಕೊಳದ ಸಿಬ್ಬಂದಿಗಳ ಭರವಸೆಯ ನುಡಿ. ಇತ್ತೀಚೆಗೆ ಗೌಹಾತಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಎರಡು ವೈಯಕ್ತಿಕ ವಿಭಾಗದ ಪದಕ ಸೇರಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ತಮ್ಮ ಕೊರಳಿಗೆ ಏರಿಸಿಕೊಂಡಿರುವ ಇವರ ಸಾಧನೆಯನ್ನು ಅವಲೋಕಿಸಿದಾಗ ಇದೇನೂ ಉತ್ಪ್ರೇಕ್ಷೆಯ ನುಡಿಗಳಲ್ಲ ಎನಿಸಿತು. ತನ್ನ ಏಳನೇ ವಯಸ್ಸಿನಲ್ಲಿಯೇ ಈಜುಕೊಳಕ್ಕೆ ದುಮುಕಿದ್ದ ದಾಮಿನಿ ಅಂದಿನಿಂದಲೇ ತಮ್ಮ ಪದಕ ಬೇಟೆಯನ್ನು ಪ್ರಾರಂಭಿಸಿದ್ದರು. ಇದೀಗ ಅವರ ಈ ಅಪೂರ್ವ ಪ್ರತಿಭೆಯನ್ನು ಗುರುತಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ಪ್ರಸಕ್ತ ಸಾಲಿನ `ಏಕಲವ್ಯ' ಪುರಸ್ಕಾರ ನೀಡಿ ಗೌರವಿಸಿದೆ.

DG04

ಅಂದಹಾಗೆ ಇವರು ಈ ಕ್ಷೇತ್ರಕ್ಕೆ ಬರುವುದಕ್ಕೂ ಹಿಂದೆ ಒಂದು ಸ್ವಾರಸ್ಯಕರ ಸನ್ನಿವೇಶವಿತ್ತು. ಅವರೇ ಹೇಳುವಂತೆ, ``ಆಗ ನನಗೆ 6-7 ವರ್ಷ. ನನ್ನ ತಾಯಿ ಹೇಮಲತಾರಿಗೆ ನಾನು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲವಿತ್ತು. ಅದಕ್ಕಾಗಿ ಅವರು ನನ್ನನ್ನು ನೃತ್ಯ, ಚಿತ್ರಕಲೆ ಸೇರಿದಂತೆ ಬ್ಯಾಡ್ಮಿಂಟನ್‌ ತರಬೇತಿಗೂ ಕಳಿಸಿದ್ದರು. ಅದೇ ಪ್ರಕಾರವಾಗಿ ಈಜು ತರಬೇತಿಯೂ ನಡೆದಿತ್ತು.

``ನಾನು ಬೇರೆಲ್ಲಾ ತರಬೇತಿಗಿಂತಲೂ ಈಜು ತರಬೇತಿಯಲ್ಲಿ ಅತ್ಯಂತ ಶೀಘ್ರವಾಗಿ ಪರಿಣತಿ ಸಾಧಿಸಿದೆ. ಹಾಗೆ 2006ರಲ್ಲಿ ತಮಿಳುನಾಡಿನ ನೈವೇಲಿಯಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಜಯಿಸಿದ್ದೆ. ಇದರ ನಂತರದಲ್ಲಿ ಈಜು ಅಭ್ಯಾಸಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ಕಳೆದ ಹತ್ತು ವರ್ಷಗಳ ಪಯಣ ನನ್ನಲ್ಲಿ ಸಂತಸ ಮೂಡಿಸಿದೆ. ಕೆಲವೊಮ್ಮೆ ಬೇಸರದ ಸಂಗತಿಗಳು ನಡೆದಿವೆ. ಕಷ್ಟಗಳು ಎದುರಾಗಿವೆ, ಆದರೆ ಎಲ್ಲ ಒಂದು ಪಾಠವೆಂದು ಭಾವಿಸಿದ್ದೇನೆ.’’

DG06

ನೀರಿಗಿಳಿದರೆ ಸಾಕು ರೆಕ್ಕೆ ಮೂಡಿದ ಮೀನಿನಂತೆ ಈಜುತ್ತಾರೆ ದಾಮಿನಿ. ಇವರ ತಂದೆ ಕೃಷ್ಣಪ್ಪ ಮತ್ತು ತಾಯಿ ಹೇಮಲತಾ. ಕೃಷ್ಣಪ್ಪನವರು ಸಹ ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು. ಇನ್ನು ತಾಯಿ ಹೇಮಲತಾ ರಾಜ್ಯಮಟ್ಟದ ಖೋಖೋ ಆಟಗಾರ್ತಿ. ಹೀಗಾಗಿ ಮನೆಯಲ್ಲಿ ಸಹಜವಾಗಿ ಕ್ರೀಡಾ ಸ್ಛೂರ್ತಿಯ ವಾತಾವರಣವಿತ್ತು. ಇದೇ ಕಾರಣದಿಂದ ದಾಮಿನಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೆಲ್ಲಾ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ