ವಿನಯಾ ಪ್ರಸಾದ್‌ ಅಭಿನೇತ್ರಿ, ನಿರ್ದೇಶಕಿ, ನಿರ್ಮಾಪಕಿ

ಖಿನ್ನತೆ ಎಲ್ರಿಗೂ ಬಂದು ಹೋಗುತ್ತೆ. ಬಂದ ತಕ್ಷಣ ಕೊಡವಿಕೊಂಡು ಎದ್ದು ನಿಲ್ಲುವಂಥ ಮನೋಭಾವನೆ ಬೆಳೆಸಿಕೊಳ್ಳಬೇಕು. ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಹೇಳುವ ಖ್ಯಾತ ಪ್ರಬುದ್ಧ ಕಲಾವಿದೆ ವಿನಯಾ ಪ್ರಸಾದ್ ಅವರ ಬಗ್ಗೆ ಸಂಪೂರ್ಣ ವಿವರ ಪಡೆಯೋಣವೇ…..?

''ಕನ್ನಡ ಚಿತ್ರರಂಗದ ಖ್ಯಾತ ಕಲಾವಿದೆ ವಿನಯಾ ಪ್ರಸಾದ್‌ ಅವರ ಬಗ್ಗೆ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ ಅನಿಸುತ್ತೆ. ತನ್ನ ಸಹಜ ಸುಂದರ ಅಭಿನಯದಿಂದ ಕನ್ನಡದ ಪ್ರೇಕ್ಷಕರ ಮನಗೆದ್ದಂಥ ಈ ಕಲಾವಿದೆ `ಗಣೇಶನ ಮದುವೆ' ಚಿತ್ರದ ಮೂಲಕ ಅನಂತ್‌ನಾಗ್‌ ಅವರ ಜೊತೆ ನಟಿಸಿ ಪರಿಚಯವಾದರು. ಅದಕ್ಕೂ ಮೊದಲು `ನಮ್ಮ ನಮ್ಮಲ್ಲಿ' ಧಾರಾವಾಹಿಯಲ್ಲಿ ನಟಿಸಿದ್ದರು. ಬಹುತೇಕ ಕನ್ನಡದ ಎಲ್ಲ ನಾಯಕ ನಟರುಗಳ ಜೊತೆ ನಟಿಸಿರುವ ವಿನಯಾ ಪ್ರಸಾದ್‌ ತಮಿಳು, ತೆಲುಗು ಹಾಗೂ ಹೆಚ್ಚಾಗಿ ಮಲಯಾಳಂ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಬಂದಂಥ `ಬೆಂಗಳೂರ್‌ ಡೇಸ್‌' ಮಲಯಾಳಂ ಚಿತ್ರದಲ್ಲಿ ವಿನಯಾ ಪ್ರಸಾದ್‌ ಸಾಕಷ್ಟು ಗಮನ ಸೆಳೆದಿದ್ದಾರೆ. ಕ್ರಿಯೇಟಿವಿಟಿಯತ್ತ ಹೆಚ್ಚು ಆಸಕ್ತಿ ವಹಿಸುವಂಥ ವಿನಯಾ, ಕ್ಯಾಮೆರಾ ಹಿಂದೆ ಕೂಡಾ ಸಾಕಷ್ಟು ಸಾಧನೆ ಮಾಡಿದ್ದಿದೆ. ಇತ್ತೀಚೆಗಷ್ಟೆ ವಿನಯಾ, `ಲಕ್ಷ್ಮಿನಾರಾಯಣರ ಪ್ರಪಂಚವೇ ಬೇರೆ' ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣದಲ್ಲಿ ಬಿಝಿಯಾಗಿರುವ ವಿನಯಾ ಬಿಡುವು ಮಾಡಿಕೊಂಡು ಮಾತನಾಡಿದ್ದಾರೆ. ನಟಿಯಾಗಿ, ಪತ್ನಿಯಾಗಿ, ಗೃಹಿಣಿಯಾಗಿ, ಅಮ್ಮನಾಗಿ ಹಾಗೂ ಒಬ್ಬ ಮಹಿಳಾ ನಿರ್ದೇಶಕಿಯಾಗಿ ತಮ್ಮೆಲ್ಲ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪಕ್ಕದ್ಮನೆ ಹುಡುಗಿ ಇಮೇಜಿದ್ದ ನಿಮಗೆ ಗ್ಲಾಮರಸ್‌ ಲೋಕದಲ್ಲಿ ಬೇರೆ ನಟಿಯರ ಜೊತೆ  ಸ್ಪರ್ಧೆಗಿಳಿದಾಗ ಹೇಗನಿಸಿತ್ತು?

ಕಥೆ, ಪಾತ್ರ, ನಿರ್ದೇಶಕ ಇವೆಲ್ಲ ಬಹಳ ಮುಖ್ಯ ಎಂಬುದು ನನಗೆ ಗೊತ್ತಿತ್ತು. ಫಣಿರಾಮಚಂದ್ರ ಅವರು `ಗಣೇಶನ ಮದುವೆ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗ ಲಂಗದಾವಣಿ, ಕನ್ನಡಕ ಧರಿಸಿ ಸಂಗೀತದತ್ತ ಒಲವಿರುವ ಹುಡುಗಿಯಾಗಿ, ಅಷ್ಟೇ ಜಗಳಗಂಟಿಯಾಗಿರುವಂಥ ಪಾತ್ರವನ್ನು ಹೆಗಲಿಗೇರಿಸಿದ್ದರು. ಜನಕ್ಕೆ ಇಷ್ಟವಾಯ್ತು, ಬರೀ ಗ್ಲಾಮರ್‌ ಅಷ್ಟೆ ಸಾಲದು. ಪಾತ್ರಕ್ಕೆ ಲೈಫ್‌ ಇರಬೇಕು ಎಂಬುದು ಸಾಬೀತಾಗಿತ್ತು. ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವಂಥ ಪಾತ್ರಗಳೇ ನನಗೆ ಸಿಗುತ್ತ ಹೋಯ್ತು. ಪ್ರಭಾಕರ್‌ ಅವರ ಜೊತೆ ನಟಿಸಿದ್ದಂಥ `ಕರುಳಿನ ಕೂಗು' ಚಿತ್ರ ಬಹಳ ಜನಪ್ರಿಯವಾಗಿತ್ತು. ವಿಷ್ಣುರ್ಧನ್‌ ಅವರ ಜೊತೆಯಲ್ಲೂ ಸಾಕಷ್ಟು ಚಿತ್ರಗಳಲ್ಲಿ  ನಟಿಸಿದೆ. `ಬಾರೆ ಸಂತೆಗೆ ಹೋಗೋಣ ಬಾ' ಹಾಡು ಇಂದಿಗೂ ಜನಪ್ರಿಯ.

ಪರಭಾಷಾ ಚಿತ್ರಗಳಲ್ಲೂ ನಟಿಸಿದ್ದೀರಿ.... ಹೇಗಿತ್ತು  ಅನುಭವ?

ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಸರಳತೆಗೆ ಹೆಚ್ಚು ಒತ್ತು ಕೊಡುತ್ತಾರೆ. ಸ್ಟಾರ್‌ಗಳಂತೆ ಯಾರೂ ವರ್ತಿಸೋದಿಲ್ಲ. ಕಥೆಗಾರನಿಗೆ  ಹೆಚ್ಚು ಗೌರವ. ಕಥೆ ಕೇಳುವಾಗ ನಾಯಕರು ಅವರ ಕಾಲ ಬಳಿ ಕುಳಿತು ಕೇಳುವುದನ್ನು ನಾನೇ ನೋಡಿದ್ದೀನಿ. ಪ್ರತಿಯೊಂದು ಪ್ರಾತಕ್ಕೂ ಇಂಪಾರ್ಟೆನ್ಸ್ ಕೊಡಲಾಗುತ್ತೆ.

`ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ'.....  ಏನಿದು ನಿಮ್ಮ ಹೊಸ ಪ್ರಾಜೆಕ್ಟ್?

ನೂರಾರು ಚಿತ್ರಗಳಲ್ಲಿ ನಟಿಸಿ  ಮನೆ ಮಾತಾಗಿರುವೆ. ನಾನು ಬಹಳ ವರ್ಷಗಳಿಂದ ಒಂದೊಳ್ಳೆ ಚಿತ್ರ ನಿರ್ದೇಶಿಸಬೇಕು ಅಂದುಕೊಳ್ತಿದ್ದೆ. `ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ' ಎನ್ನುವ ಚಿತ್ರದ ಮೂಲಕ ಆ್ಯಕ್ಷನ್‌ ಕಟ್‌ ಹೇಳಿದ್ದೀನಿ. ನನ್ನ ಮಗಳಾದ ಪ್ರಥಮಾ ನಾಯಕಿಯಾಗಿ ನಟಿಸಿದ್ದಾಳೆ. ಕಥೆ, ಚಿತ್ರಕಥೆ ನನ್ನ ಪತಿ ಜ್ಯೋತಿ ಪ್ರಕಾಶ್‌ ಅತ್ರೆ ರಚಿಸಿದ್ದಾರೆ. ನಿರ್ಮಾಣ, ನಿರ್ದೇಶನ ನನ್ನದು. ಈ ಕಥೆ ಹೊಳೆದದ್ದು ಹದಿನೆಂಟು ವರ್ಷಗಳ ಹಿಂದೆ, ನಾನಾಗ `ಮಂಗಳಸೂತ್ರ' ಚಿತ್ರದಲ್ಲಿ ವಿಷ್ಣು ಅವರ ಜೊತೆ ನಟಿಸುತ್ತಿದ್ದೆ. ನಾವಿಬ್ಬರೂ ಒಟ್ಟಿಗೆ ನಟಿಸಬೇಕು, ನಾನು ನಿರ್ದೇಶಿಸಬೇಕು ಅಂತ ಅಂದುಕೊಂಡಿದ್ದೆ. ಆದರೆ ಕೂಡಿಬರಲಿಲ್ಲ. ನಾನು ನಿರ್ದೇಶನ ಮಾಡುವುದಾದರೆ ಇದೇ ಕಥೆಯನ್ನೇ ಮಾಡಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಕಥೆ, ಚಿತ್ರಕಥೆ ನನ್ನನ್ನು ತುಂಬಾ ಆಕರ್ಷಿಸಿಬಿಟ್ಟಿತ್ತು. ನನ್ನ ಮಗಳನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡೆ. ಏಕೆಂದರೆ ಆ ಪಾತ್ರಕ್ಕೆ ಆಕೆ ಸೂಟ್‌ ಆಗ್ತಾಳೆ. ವಿಭಿನ್ನ ಶೀರ್ಷಿಕೆಯಾಗಿರೋದ್ರಿಂದ ಹೆಚ್ಚು ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ