ರಾಜಾಸ್ಥಾನ್‌ ರಾಜ್ಯದ ಅಧಿಕಾರ ಇದೀಗ ವಸುಂಧರಾ ರಾಜೆ ಕೈಯಿಂದ ಜಾರಿಹೋಗಿದೆ, ಹೀಗಾಗಿ ಸದ್ಯದಲ್ಲಿ ಇಡೀ ದೇಶದಲ್ಲಿ ಏಕೈಕ ಮಹಿಳಾ ಮುಖ್ಯಮಂತ್ರಿ ಎಂದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ. ಕೆಲವು ವರ್ಷಗಳ ಹಿಂದ ಅಂದ್ರೆ 2011-14ರವರೆಗೂ ಭಾರತದಲ್ಲಿ 4 ರಾಜ್ಯಗಳ ಜವಾಬ್ದಾರಿ ಮಹಿಳಾ ಮುಖ್ಯಮಂತ್ರಿಗಳದ್ದೇ ಆಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ, ಗುಜರಾತ್‌ ನಲ್ಲಿ ಆನಂದಿ ಬೇನ್‌ ಪಟೇಲ್‌, ರಾಜಾಸ್ಥಾನದಲ್ಲಿ ವಸುಂಧರಾ ರಾಜೆ ಹಾಗೂ ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ. ಇದಕ್ಕೆ ಮೊದಲು ತಮಿಳುನಾಡಿನಲ್ಲಿ ಜಯಲಲಿತಾ ಸಹ ಇದ್ದರು. ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ಭಾರತದಲ್ಲಿ ಒಟ್ಟು 16 ಮಂದಿ ಮಹಿಳಾ ಮುಖ್ಯಮಂತ್ರಿಗಳು ಆರಿಸಿ ಬಂದಿದ್ದಾರೆ. ಇವರಲ್ಲಿ ಉಮಾಭಾರತಿ, ರಾಬ್ಡೀದೇವಿ, ಶೀಲಾ ದೀಕ್ಷಿತ್‌, ಮಾಯಾವತಿ ಸಹ ಪ್ರಮುಖರು.

ನಮ್ಮ ದೇಶದಲ್ಲಿ ಮಹಿಳಾ ಮುಖ್ಯಮಂತ್ರಿಗಳ ಸಂಖ್ಯೆ ಬಹು ಕಡಿಮೆ ಆಗಿರಬಹುದು, ಆದರೆ ಇಂದಂತೂ ಅಲ್ಲಗಳೆಯಲಾಗದ ಸತ್ಯ, ಏನೆಂದರೆ, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯಂಥವರು ಭಾರತದ ಅತಿ ಶಕ್ತಿಶಾಲಿ ಮುಖ್ಯಮಂತ್ರಿಗಳಲ್ಲಿ ಅಗ್ರಗಣ್ಯರೆನಿಸುತ್ತಾರೆ. ಇವರ ಅಧಿಕಾರಾವಧಿ ಸಾಕಷ್ಟು ಪ್ರಭಾವಶಾಲಿ ಆಗಿತ್ತು. ಅದು ತಮಿಳುನಾಡಿನಲ್ಲಿ ಜಯಲಲಿತಾರ ಜನಹಿತದ ಯೋಜನೆಗಳಿರಲಿ, ಉ.ಪ್ರದೇಶದಲ್ಲಿ ಮಾಯಾವತಿಯವರ ಕಾನೂನು ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವುದಾಗಲಿ ಅಥವಾ ಮಮತಾ ಎಲ್ಲರ ಮನಸ್ಸನ್ನು ಗೆಲ್ಲುವುದಾಗಲಿ, ಇವರು ತಮ್ಮದೇ ವಿಧಾನಗಳಿಂದ ಖ್ಯಾತರಾದರು.

ಆದರೆ ಇದೇ ಮಹಿಳೆಯರು ಸಾಮಾನ್ಯ ಹೆಂಗಸರ ಹಿತಕ್ಕಾಗಿ ಏನೇನು ಕಾರ್ಯ ಕೈಗೊಂಡರೆಂದು ಲೆಕ್ಕ ಹಾಕಿದಾಗ ಬಹಳ ಯೋಚಿಸಬೇಕಾಗುತ್ತದೆ. ಅಸಲಿಗೆ ಈ ಕ್ಷೇತ್ರದಲ್ಲಿ ಇವರುಗಳು ನೆನಪಿಡತಕ್ಕಂಥ ಕೆಲಸ ಮಾಡಿಯೇ ಇಲ್ಲ!  ಇದು ಕೇವಲ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯ ಅತಿ ಉನ್ನತ ಹುದ್ದೆ ಅಲಂಕರಿಸಿದ ಮಹಿಳೆಯರಿಗಷ್ಟೇ ಅನ್ವಯ ಅಂತಲ್ಲ, ಆದರೆ ರಾಜಕೀಯದಲ್ಲಿ ಉನ್ನತ ಅಧಿಕಾರ ಹೊಂದಿದ ಪ್ರತಿಯೊಬ್ಬ ಮಹಿಳಾ ನಾಯಕಿಯರಿಗೂ ಅನ್ವಯಿಸುತ್ತದೆ, ತಮ್ಮದೇ ಅಧಿಕಾರ ಹೊಂದಿದ್ದಾಗ್ಯೂ ಸಹ, ಹೆಂಗಸರ ಹಿತಕ್ಕಾಗಿ ಇವರುಗಳು ಹೆಚ್ಚಿಗೇನೂ ಮಾಡಲೇ ಇಲ್ಲ ಎಂಬುದು.

ಪ್ರಭಾವಶಾಲಿ ಸಮಾನತೆಯ ಹಕ್ಕು ಒಂದು ಸಾಮಾನ್ಯ ಯೋಚನೆ ಎಂದರೆ, ಹೆಂಗಸರು ಇಂಥ ಉನ್ನತ ಹುದ್ದೆಗೆ ಬಂದಾಗ, ಹೆಂಗಸರ ಹಿತದ ಕುರಿತಾಗಿ ಖಂಡಿತಾ ಏನಾದರೂ ಉತ್ತಮ ಕೆಲಸ ಮಾಡಿಯೇ ತೀರುತ್ತಾರೆ ಎಂದು. ಆದರೆ ಅಂಥ ಮಹತ್ವದ ಚಟುವಟಿಕೆಗಳೇನೂ ಜರುಗಲೇ ಇಲ್ಲ. ಇಂದಿರಾಗಾಂಧಿ ದೇಶದ ಪ್ರಧಾನ ಮಂತ್ರಿ ಆಗಿದ್ದಾಗ, ಯಾವ ದೊಡ್ಡ ಮಹಿಳಾ ಕ್ರಾಂತಿಯೂ ಆಗಲಿಲ್ಲ ಅಥವಾ ಯಾವ ರಾಜ್ಯಗಳಲ್ಲಿ ಮಹಿಳೆಯರು ಮುಖ್ಯಮಂತ್ರಿಗಳಾಗಿದ್ದರೋ ಅಲ್ಲಿ ಸಾಮಾನ್ಯ ಹೆಂಗಸರ ಸ್ಥಿತಿ ಉನ್ನತ ಮಟ್ಟಕ್ಕೇರಿತು ಎಂದೇನೂ ಇಲ್ಲವೇ ಇಲ್ಲ. ನಾವು ಅಲ್ಲಗಳೆಯಲಾಗದ ಮತ್ತೊಂದು ಸಂಗತಿ ಎಂದರೆ, ಗಂಡಸರಾದ ರಾಜಕೀಯ ಧುರೀಣರು ಹೆಂಗಸರ ಕುರಿತಾಗಿ ಉತ್ತಮ ನಿರ್ಣಯ ಕೈಗೊಳ್ಳಲು ಆಗುವುದೇ ಇಲ್ಲ ಎಂಬುದು. ಆದರೆ ಹೆಂಗಸರಿಗೆ ಸಂಬಂಧಿಸಿದ ಸಂವೇದನಾಶೀಲ ವಿಷಯಗಳನ್ನು ಮಹಿಳಾ ನಾಯಕಿಯರೇ ಖುದ್ದಾಗಿ ಹೆಚ್ಚಿನ ಕಾಳಜಿ ವಹಿಸಿ ಪರಿಶೀಲನೆ ನಡೆಸುವುದು, ಹೆಚ್ಚು ಪ್ರಭಾವಶಾಲಿ ಮತ್ತು ಸಮಾನತೆಯ ಹಕ್ಕಿನಿಂದ ಕೂಡಿದ್ದಾಗಿರುತ್ತದೆ ಎಂಬುದೂ ಅಷ್ಟೇ ಸತ್ಯ. ಹೆಂಗಸರು ಗಂಡಸರು ತಮ್ಮದೇ ದೃಷ್ಟಿಕೋನದಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾರೆ ಎಂಬುದು ನಿಶ್ಚಯ ಸಂಗತಿ. ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಸರೋಗೆಸಿ ಬಿಲ್ ‌ಪಾಸ್‌ ಆಯ್ತು. ಸಂಸತ್ತಿನಲ್ಲಿ 90% ಸಾಂಸದರು ಗಂಡಸರೇ ಆಗಿದ್ದರು, ಹೀಗಾಗಿ ಅವರಂತೂ ಗರ್ಭ ಧರಿಸುವವರಲ್ಲ... ಆದರೂ ಈ ಗಂಡಸರು ಆ ಬಿಲ್ ಪಾಸ್‌ ಮಾಡಿಸಿದರು. ನಮ್ಮ ನೀತಿಗಳು ದೇಶದ 50% ಜನಸಂಖ್ಯಾ ಪ್ರತಿನಿಧಿಗಳಾದ ಹೆಂಗಸರ ಅಗತ್ಯಗಳಿಗೆ ಪೂರಕವಾದುದಲ್ಲ. ಹೀಗಾಗಿ ಹೆಂಗಸರಿಗೆ ಸಂಬಂಧಿಸಿದ ವಿಷಯಗಳನ್ನು ಸಂವೇದನಾಶೀಲವಾಗಿ ಪರಿಶೀಲಿಸ ತಕ್ಕಂಥ ಮಹಿಳಾ ನಾಯಕಿಯರ ಅಗತ್ಯ ಖಂಡಿತಾ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ