``ಅಕ್ಕಾ..... ಬಾಗಿಲು ಹಾಕ್ಕೊ, ಇದೋ ನಾನೀಗ ಹೊರಟೆ. ಇವತ್ತು ಬರುವಾಗ ಸ್ವಲ್ಪ ತಡವಾಗಬಹುದು. ನನ್ನ ಸ್ಕೂಟಿ ಸರ್ವೀಸಿಂಗ್‌ ಬಿಡಬೇಕು.....'' ನಸೀಮಾ ಜೋರಾಗಿ ಹೇಳಿದಳು.

``ಅಪ್ಪ ಹೇಳಿದ್ರಲ್ಲ.... ಮನೆಯ ಕಂದಾಯದ ಹಣ ಕಟ್ಟಬೇಕು ಅಂತ, ಅದನ್ನು ಮರೆಯಬೇಡ.''

``ಹ್ಞೂಂ....ಹ್ಞೂಂ.... ನೆನಪಿದೆ ಬಿಡು. ರಿಯಾದ್‌-ಶಗುಫ್ತಾರ ವಿವಾಹ ವಾರ್ಷಿಕೋತ್ಸವ ಹತ್ತಿರ ಬಂತಲ್ಲ..... ಅವರಿಗಾಗಿ ಗಿಫ್ಟ್ ತಗೋಬೇಕು ಅದೂ ಇವತ್ತೇ......''

``ಸರಿ.... ಸರಿ..... ಏನೇ ಇರಲಿ ಬೇಗ ಬಂದು ಬಿಡು.... 2-3 ಗಂಟೆಗಿಂತ ಖಂಡಿತಾ ತಡ ಮಾಡಬಾರದು!'' ಎನ್ನುತ್ತಾ ಅಕ್ಕಾ ಬಾಗಿಲು ಹಾಕಿಕೊಂಡಳು.

ನಸೀಮಾ ಇದೀಗ ಮುಂದಿನ 2-3 ಗಂಟೆಗಳವರೆಗೆ ಬಿಲ್‌ಕುಲ್‌ ಸ್ವತಂತ್ರಳಾಗಿದ್ದಳು. ಅವಳು ಮನೆಯಿಂದ ಹೊರಗೆ ಹೊರಡುವಾಗೆಲ್ಲ ಇಂತಿಷ್ಟೇ ಸಮಯಕ್ಕೆ ಹಿಂದಿರುಗಿ ಬಂದುಬಿಡಬೇಕು ಎಂದು ತಾಕೀತು ಮಾಡಲಾಗುತ್ತಿತ್ತು. ಆ ಎಚ್ಚರಿಕೆಯ ನುಡಿಗಳು ಸದಾ ಅವಳನ್ನು ಕಂಟ್ರೋಲ್ ಮಾಡುತ್ತಲೆ ಇರುತ್ತವೆ. ಅಪರಾಧ ಪ್ರಪಂಚದ ಕುರಿತು, ಹೆಣ್ಣಾದ ಕಾರಣ ಸದಾ ಅಪಾಯದ ಮಧ್ಯೆ ಸಿಲುಕಬೇಕಾದ ಭಯ, ಮನೆತನದ ಮರ್ಯಾದೆ ಸದಾ ಉನ್ನತಾಗಿರಬೇಕೆಂಬ ಆರ್ಡರ್‌..... ಇವೆಲ್ಲ ಉಳಿಸಿಕೊಳ್ಳುವ ಸಲುವಾಗಿ ಅವಳು ಬೇಗ, ಬೇಗ ತನ್ನೆಲ್ಲ ಹೊರಗಿನ ಕೆಲಸ ಮುಗಿಸಿ ಮನೆ ಸೇರಿಕೊಂಡು ಪ್ರತಿಸಲ ನಿಟ್ಟುಸಿರಿಡುತ್ತಾಳೆ.

ಛೇ....ಛೇ..... ತಾನು ಇದೆಂಥ ಮೂಢನಂಬಿಕೆಗಳ ಸಂದಿಗ್ಧತೆಗಳ ಮಧ್ಯೆ ಸಿಲುಕಿದ್ದೇನೆ..... ಇದೆಲ್ಲ ಸಾಲದೆಂದು ಬುರ್ಖಾ, ತಲೆಯ ಮೇಲೊಂದು ಹಿಜಾಬ್‌ (ಸ್ಕಾರ್ಫ್‌ ತರಹ ಪೂರ್ತಿ ತಲೆ, ಕುತ್ತಿಗೆ ಕವರ್‌ ಮಾಡುವುದು) ಮುಂತಾದುವನ್ನೂ ಸಂಭಾಳಿಸಬೇಕು. ಮನೆಯವರಿಗೆ ಹೇಗೂ ಗೊತ್ತಾಗಲ್ಲ, ತಾನೇಕೆ ಈ 2-3 ಗಂಟೆಗಳ ಕಾಲ ಇನ್ನೆಲ್ಲ ತೆಗೆದಿರಿಸಿ ಹಾಯಾಗಿ ಓಡಾಡಬಾರದು.....?

ನಸೀಮಾಳ ತಂದೆ ಹೋಮಿಯೋಪತಿ ಡಾಕ್ಟರ್‌. 70ರ ಹರೆಯದಲ್ಲೂ ಅವರ ಪ್ರಾಕ್ಟೀಸ್‌ ಬಲು ಜೋರಾಗಿ ನಡೆದಿತ್ತು. ಇವಳ ಹಿಂದಿನ ತಲೆಮಾರಿನಿಂದ ಆ ಮನೆತನಕ್ಕೆ ಇಡೀ ಮೊಹಲ್ಲಾದಲ್ಲಿ ಅತಿ ಉತ್ತಮ, ದೂರಾಲೋಚನೆಯ ಮಂದಿ ಎಂಬ ಹೆಸರಿತ್ತು.

ಹೆತ್ತವರಿಗೆ ಇವರು 6 ಜನ ಹೆಣ್ಣುಮಕ್ಕಳು. ನಸೀಮಾ ಎಲ್ಲರಿಗಿಂತ ಕಿರಿಯಳು. ಅವಳು ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ ಪದವೀಧರೆ. ಇವಳ ಅಕ್ಕಂದಿರು ಸಹ ಪಿ.ಯು.ಸಿ. ಡಿಗ್ರಿ ಪಡೆದ ಪದವೀಧರೆಯರು. ಅಕ್ಕತಂಗಿಯರು ಬಲು ಪರಿಶ್ರಮ ವಹಿಸಿ, ನಿಷ್ಠೆಯಿಂದ ಅತ್ಯುತ್ತಮ ಫಲಿತಾಂಶ ಪಡೆದು ಓದಿನಲ್ಲಿ ಮುಂದೆ ಬಂದರು. ಓದಿನ ನಂತರ ಉತ್ತಮ ಕೆರಿಯರ್‌ ರೂಪಿಸಿಕೊಳ್ಳ ಬೇಕೆಂಬುದು ಅವಳಾಸೆ.

ಅವಳಿಗೆ ಒಂದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜೀವವಶಾಸ್ತ್ರ ಬೋಧಿಸುವ ಉತ್ತಮ ನೌಕರಿ ಸಿಕ್ಕಿತ್ತು. ಆದರೆ ಮಹಾ ಕಟ್ಟುನಿಟ್ಟಿನ ಕಂದಾಚಾರದ ಸಂಕೋಲೆಗೆ ಸಿಲುಕಿದ ಅವರು ಈ ಕಿರಿ ಮಗಳಿಗೆ ಆ ಮಟ್ಟದ ಆರ್ಥಿಕ ಸ್ವಾತಂತ್ರ್ಯ ಕೊಡಲು ಬಯಸಲಿಲ್ಲ, ಹೀಗಾಗಿ ಕೆಲಸಕ್ಕೆ ಕತ್ತರಿ ಬಿದ್ದಿತ್ತು.

ಹಿರಿಯಕ್ಕಾ ಜುಬೇದಾ ಮಾತ್ರವೇ ಹೆಚ್ಚು ಓದದವಳು. ಬೇರೆಯವರೆಲ್ಲ ಚೆನ್ನಾಗಿಯೇ ಕಲಿತಿದ್ದರು. ಏನಾದರೇನು? ಅವರೆಲ್ಲ ಈಗ ತಂತಮ್ಮ ಅತ್ತೆಮನೆಯಲ್ಲಿ ಕಂದಾಚಾರದ ಕಪಿಮುಷ್ಟಿಗೆ ಸಿಲುಕಿ ಬುರ್ಖಾಧಾರಿಗಳಾಗಿ ಕೈದಿಗಳಾಗಿದ್ದರು. ಹ್ಞಾಂ..., ನಸೀಮಾ ಪ್ರಕಾರ ಅವರೆಲ್ಲ ಪಕ್ಕಾ ಕೈದಿಗಳೇ! ಅವರು ತಮ್ಮ ಯೋಗ್ಯತೆ, ಶಿಕ್ಷಣ, ಕಲಿಕೆಗಳನ್ನೆಲ್ಲ ಸಂಪ್ರದಾಯದ ಪೆಠಾರಿಯಲ್ಲಿ ಕೂಡಿಟ್ಟು, ಬಂದ ಪರಿಸ್ಥಿತಿಗೆ ತಲೆಬಾಗಿ ಅದರಲ್ಲಿ ಸುಖ ಕಾಣಲು ಯತ್ನಿಸುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ