ಆದರೆ ಅಂದಿನಿಂದ ಕೆಲವು ದಿನಗಳವರೆಗೂ ಅವನು ಪ್ರತಿದಿನ ಮನೆ ಮುಂದೆ ಗಂಟೆಗಳ ಕಾಲ ನಿಂತಿರುತ್ತಿದ್ದ. ಕೆಲವೊಮ್ಮೆ ಮಹಡಿ ಮೇಲಿರುವ ನನ್ನ ಕೋಣೆಯತ್ತ ಇಲ್ಲವೇ ತನ್ನ ಕೈಯಲ್ಲಿದ್ದ ಮೊಬೈಲ್ ‌ನೋಡುತ್ತಿರುತ್ತಿದ್ದ. ಅವನ ಬಗ್ಗೆ ನನಗೆ ನಾನಾ ವಿಧವಾದ ಯೋಚನೆಗಳು ಪ್ರಾರಂಭವಾದವು. `ಅವನೇನಾದರೂ ನನಗೆ ಕರೆ ಮಾಡಲು ಬಯಸುತ್ತಿರುವನೆ?' `ಅವನ ಬಳಿ ನನ್ನ ಮೊಬೈಲ್ ‌ನಂಬರ್‌ ಇದೆಯೇ?' ನನಗೆ ತಿಳಿಯಲಿಲ್ಲ. ನೋಡಲು ಸುಂದರವಾಗಿದ್ದ ಅವನು ಒಂದುವೇಳೆ ಒಳ್ಳೆಯ ಸಂಪ್ರದಾಯಸ್ಥ ಮನೆತನದಿಂದ ಬಂದಿರಬಹುದೆಂದು ನನ್ನಲ್ಲೇ ಲೆಕ್ಕಾಚಾರ ಹಾಕತೊಡಗಿದೆ. ಹೀಗೆ ಹತ್ತು ದಿನಗಳು ಸರಿದವು. ನಿತ್ಯ ಅವನು ನಮ್ಮ ಮನೆಯ ಮುಂದೆ ನಿಲ್ಲುತ್ತಿದ್ದ. ನನ್ನಲ್ಲಿ ಏನೇನೋ ಭಾವನೆಗಳು ಉಕ್ಕುತ್ತಿದ್ದವು.

`ನಾನೇನಾದರೂ  ಅವನನ್ನು ಪ್ರೀತಿಸುತ್ತಿದ್ದೇನೆಯೇ?'

`ಹೌದು! ನಾನವನನ್ನು ಪ್ರೀತಿಸುತ್ತಿದ್ದೇನೆ.'

`ಆದರೆ ಅವನು ನನ್ನನ್ನು ಪ್ರೀತಿಸುತ್ತಿದ್ದಾನೆಯೇ?' ಇದಕ್ಕೆ ನನ್ನಲ್ಲಿ ಉತ್ತರವಿಲ್ಲ. ನನ್ನಲ್ಲಿ ಆತಂಕ ಮನೆ ಮಾಡಿತು. `ಅವನೂ ನನ್ನನ್ನು ಪ್ರೀತಿಸುತ್ತಿದ್ದಲ್ಲಿ ಎಷ್ಟು ಚೆನ್ನ?' ನಾನು ಕಡೆಗೊಮ್ಮೆ ನನ್ನ ಧೈರ್ಯವನ್ನು ಒಟ್ಟಾಗಿಸಿ. ಈ ವಿಷಯವನ್ನು ಅಮ್ಮನ ಬಳಿ ಹೇಳಲು  ತೀರ್ಮಾನಿಸಿದೆ.

``ಅಮ್ಮಾ.... ನಾನು ನಿನಗೊಂದು ವಿಷಯ ಹೇಳಬೇಕು?'' ಎನ್ನುತ್ತಾ ಅಡುಗೆಮನೆಯಲ್ಲಿ ಕಾಫಿ ಮಾಡುತ್ತಿದ್ದ ಅಮ್ಮನ ಬಳಿ ಹೋಗಿ ಹೇಳಿದೆ. ನಾನು ಆ ಯುವಕನನ್ನು ನೋಡಿದಾಗಿನಿಂದ ನನ್ನ ಪ್ರೀತಿಯ ವಿಚಾರವನ್ನು ತಿಳಿಸಿದೆ.

ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದಂತೆ ಕಂಡರೂ ``ಈ ಕುರಿತು ನಾಳೆ ಮಾತನಾಡೋಣ,'' ಎಂದರು.

ಮರುದಿನ ಬೆಳಗ್ಗೆ ಅವನು ಮತ್ತೆ ನಮ್ಮ ಮನೆ ಮುಂದೆ ನಿಂತು ಮೊಬೈಲ್‌ನಲ್ಲಿ ಏನೋ ಮಾಡುತ್ತಿದ್ದ. ಆಗ ನನ್ನ ತಂದೆ ಅವನನ್ನು ಮನೆಗೆ ಕರೆದರು. ಅವನು ಅಪ್ಪಾಜಿಗೆ `ಧನ್ಯವಾದ' ಹೇಳುತ್ತಾ ಒಳಗೆ ಬಂದ.

ಉಭಯಕುಶಲೋಪರಿಗಳಾದ ನಂತರ ತಂದೆ ಕೇಳಿದರು, ``ನಾವೀಗ ನಿನ್ನ ತಂದೆತಾಯಿಗಳ ಬಗೆಗೆ ಕೇಳಬಹುದೆ?''

``ಯಾವುದರ ಕುರಿತು ಕೇಳಲಿದ್ದೀರಿ?'' ಅವನು ಕೇಳಿದ.

ಅಷ್ಟರಲ್ಲಿ ಅಮ್ಮ ಅವನಿಗೂ, ನನಗೂ ಎಲ್ಲರಿಗೂ ಕಾಫಿ, ಬಿಸ್ಕೆಟ್‌ ತಂದಿಟ್ಟಳು. ಅವನು ನಿಧಾನವಾಗಿ ಕಾಫಿ ಕುಡಿಯಲಾರಂಭಿಸಿದ.

``ನೀನು ಪ್ರತಿದಿನ ನಮ್ಮ ಮನೆಯ ಎದುರು ನಿಂತು ಮೇಲಿನ ಕೋಣೆ ಕಿಟಕಿಯತ್ತ ನೋಡುತ್ತಿರುತ್ತೀ....?''

``ಓಹ್‌! ಬೇಡ. ನನ್ನ ತಾಯಿಗೆ ಇದರ ಕುರಿತು ಏನೂ ಹೇಳಬೇಡಿ.''

``ಏಕೆ?''

``ಅವರು ನನ್ನೊಂದಿಗೆ ಜಗಳವಾಡುತ್ತಾರೆ.''

``ಅವರೇಕೆ ನಿನ್ನೊಂದಿಗೆ ಜಗಳವಾಡುತ್ತಾರೆ?  ತನ್ನ ಮಗ ಮದುವೆಯಾಗಲು ಒಪ್ಪಿಕೊಂಡಿದ್ದಾನೆ ಎಂದರೆ ಅವರಿಗೆ  ಸಂತಸವಾಗುತ್ತದೆಯಲ್ಲವೇ?''

``ಏನು?!''

``ನೀನು ನನ್ನ ಮಗಳು ಲಿಖಿತಾಳನ್ನು ಪ್ರೀತಿಸುತ್ತಿರುವೆಯಾ?''

``ಹಾಂ, ನನಗೆ ಯಾವ ಹುಡುಗಿಯೂ ಪರಿಚಯವಿಲ್ಲ. ನೀವು ಏನೇನೋ ಹೇಳುತ್ತಿರುವಿರಿ.....''

``ಏನು....?!'' ನನ್ನ ತಂದೆ ಅಚ್ಚರಿಯಿಂದ ಕೇಳಿದರು.

``ಹೌದು, ನನಗೆ ಇಲ್ಲಿ ಯಾರ ಪರಿಚಯ ಇಲ್ಲ.''

``ಹಾಗಾದಲ್ಲಿ ನೀನೇಕೆ ನಮ್ಮ ಮನೆ ಎದುರಿಗೆ ನಿಂತು ಮೇಲಿನ ಕಿಟಕಿಯತ್ತ ನೋಡುತ್ತಿದ್ದೆ?''

``ಓಹ್‌! ಅದು ನಾನಿಲ್ಲಿ ನಿಮ್ಮ ಮನೆಯ ಕೆಳಗೆ ಬಂದಾಗ ನನ್ನ ಮೊಬೈಲ್‌ಗೆ ವೈಫೈ ಕನೆಕ್ಟ್ ಆಗುತ್ತಿತ್ತು. ಆದರೆ ಕೆಲವೊಮ್ಮೆ ನೆಟ್‌ ವರ್ಕ್‌ ಸರಿಯಾಗಿ ಸಿಗುತ್ತಿರಲಿಲ್ಲ. ಆಗಾಗ ಕೈಕೊಡುತ್ತಿದ್ದ ನೆಟ್‌ವರ್ಕ್‌ಗಾಗಿ ನಾನು ಆಕಾಶದತ್ತ ನೋಡುತ್ತಿದ್ದೆ. ಆದರೆ ನಾನೆಂದೂ ನಿಮ್ಮ ಮಗಳ ಕೋಣೆಯತ್ತ ನೋಡಿಯೇ ಇಲ್ಲ. ನನಗೆ ಅವಳ ಪರಿಚಯ ಇಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ