ಕಥೆ - ಸುಧಾ ಪ್ರಮೋದ್ 

ತಿಂಗಳ ಅವಧಿ ಕಳೆದ ನಂತರ ಗೀತಾ ತಾನು ಕೆಲಸ ಮಾಡುತ್ತಿದ್ದ ಶಾಲೆಗೆ ಹೋದಳು. ಮೊದಲಿದ್ದ ಪ್ರಿನ್ಸಿಪಾಲ್ ವರ್ಗವಾಗಿ 2 ದಿನಗಳ ಹಿಂದೆಯಷ್ಟೇ ಹೊಸ ಪ್ರಿನ್ಸಿಪಾಲರು ಬಂದಿರುವರೆಂದು ಸ್ಕೂಲ್‌ ಗೇಟ್‌ನ ಹತ್ತಿರವೇ ಸಿಕ್ಕಿದ ಮೀರಾ ಹೇಳಿದಳು. ಸ್ಟಾಫ್‌ ರೂಮ್ ಪ್ರವೇಶಿಸುತ್ತಿದ್ದಂತೆಯೇ ಸಹೋದ್ಯೋಗಿಗಳೆಲ್ಲ ಹತ್ತಿರ ಬಂದು ಸಂತಾಪ ಸೂಚಿಸಿದರು.

``ಗೀತಾ, ನೀನು ಮತ್ತೆ ಜಾಯಿನ್‌ ಆಗಿದ್ದು ಒಳ್ಳೆಯದಾಯಿತು. ಆ ದುಃಖದ ವಾತಾವರಣದಿಂದ ಸ್ವಲ್ಪ ಹೊರಗೆ ಬಂದರೆ ನಿನ್ನ ಮನಸ್ಸು ಹಗುರವಾಗುತ್ತದೆ. ಹೊಸ ಪ್ರಿನ್ಸಿಪಾಲ್‌ ಸರ್‌ ಇಂದು ಎಲ್ಲ ಸ್ಟಾಫ್‌ನ್ನು ಭೇಟಿ ಮಾಡಲೆಂದು ಒಂದು ಮೀಟಿಂಗ್‌ ಇಟ್ಟಿದ್ದಾರೆ. ನೀನೂ ಒಟ್ಟಿಗೆ ಭೇಟಿ ಮಾಡಬಹುದು. ಇಲ್ಲ ಅಂದರೆ ಆಮೇಲೆ ನೀನೊಬ್ಬಳೇ ಹೋಗಿ ಭೇಟಿ ಮಾಡಬೇಕಾಗುತ್ತಿತ್ತು.''

ಪ್ರೇಯರ್‌ ಮುಗಿಸಿ ಪ್ರಿನ್ಸಿಪಾಲ್ ಚೇಂಬರ್‌ ಮುಂದೆ ಹಾದುಹೋಗುವಾಗ ಗೀತಾಳಿಗೆ ಅವರ ನೇಮ್ ಪ್ಲೇಟ್‌ ಕಾಣಿಸಿತು. ಅದರಲ್ಲಿ `ಪ್ರಿನ್ಸಿಪಾಲ್ ವಿನಯ್‌ ಕುಮಾರ್‌' ಎಂದು ಬರೆದಿತ್ತು.

ಸಂಜೆ ಮೀಟಿಂಗ್‌ ಮುಗಿಸಿ ಮನೆಗೆ ಹೋಗುವಾಗ ಗೀತಾಳಿಗೆ ಕೊಂಚ ಹಾಯಾದ ಅನುಭವವಾಯಿತು. ಇಲ್ಲವಾದರೆ ಅದೇ ಮಾತುಗಳು..... ಕೇಳಿ ಕೇಳಿ ಅವಳಿಗೆ ಬದುಕುವ ಇಚ್ಛೆಯೇ ಇಲ್ಲವಾದಂತಿತ್ತು. ಹೊಸ ಪ್ರಿನ್ಸಿಪಾಲರ ಸೌಮ್ಯ ಸ್ವಭಾವದ ಬಗ್ಗೆ ಯೋಚಿಸುತ್ತಾ ನಡೆದವಳಿಗೆ ಮನೆ ತಲುಪಿದ್ದೇ ತಿಳಿಯಲಿಲ್ಲ.

ರವೀಂದ್ರನ ಆಕಸ್ಮಿಕ ಮರಣದಿಂದ ಅವಳಿಗೆ ದಿಕ್ಕು ತೋಚದಂತಾಗಿತ್ತು. ಅವನೊಡನೆ ಕಳೆದ ಹತ್ತು ವರ್ಷಗಳ ವೈವಾಹಿಕ ಜೀವನದಿಂದ ಅವಳು ರೋಸಿಹೋಗಿದ್ದಳು. ಮದುವೆಯಾಗುವಾಗ ಅವಳೂ ಎಲ್ಲ ಹುಡುಗಿಯರಂತೆ ಭಾವೀ ಜೀವನದ ಬಗ್ಗೆ ಕನಸು ಕಂಡಿದ್ದಳು. ಆದರೆ ನಾಲ್ಕೇ ದಿನಗಳಲ್ಲಿ ರವೀಂದ್ರನ ಮದ್ಯವ್ಯಸನ ಮತ್ತು ಕಟು ಸ್ವಭಾವ ಅವಳನ್ನು ಕಂಗೆಡಿಸಿದ್ದವು.

ತಂದೆ-ತಾಯಿಯರ ಏಕಮಾತ್ರ ಪುತ್ರನಾಗಿದ್ದ ರವೀಂದ್ರ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ. ಆದರೆ ಮದ್ಯಪಾನದ ಚಟ ಅವನ ತಲೆಗೇರಿತ್ತು. ಮದ್ಯಪಾನವಿಲ್ಲದೆ ಅವನು ಒಂದು ದಿನ ಇರಲಾಗುತ್ತಿರಲಿಲ್ಲ. ಗೀತಾ ಪ್ರಾರಂಭದಲ್ಲಿ ಅವನ ಚಟ ತಪ್ಪಿಸಲು ಬಹಳ ಪ್ರಯತ್ನಪಟ್ಟಳು. ಆದರೆ ವರ್ಷಗಳ ಅಭ್ಯಾಸ ಅವನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು.

ಅಂಗಡಿ ಮುಚ್ಚಿದ ಮೇಲೆ ರವೀಂದ್ರ ಗೆಳೆಯರೊಡನೆ ಸರಿರಾತ್ರಿಯವರೆಗೆ ಮಜಾ ಮಾಡಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು. ಆ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಪತ್ನಿಯನ್ನು ಎಳೆದುಕೊಂಡು ಕಾಮಕೇಳಿ ನಡೆಸುವುದು ಅವನ ಮತ್ತೊಂದು ಚಟವಾಗಿತ್ತು. ಅದನ್ನು ಗೀತಾ ವಿರೋಧಿಸಿದರೆ ಹೊಡೆತ ತಿನ್ನಬೇಕಾಗುತ್ತಿತ್ತು.

ಹೀಗೆ 1 ತಿಂಗಳ ಹಿಂದೆ ಮದ್ಯಪಾನ ಮಾಡಿ ಬೈಕ್‌ ನಡೆಸಿಕೊಂಡು ಬರುತ್ತಿದ್ದ ರವೀಂದ್ರ ಕಾರೊಂದಕ್ಕೆ ಡಿಕ್ಕಿ ಹೊಡೆದು ಅಸುನೀಗಿದ. ಅವನ ಸಾವಿನಿಂದ ಗೀತಾ ಮತ್ತು ಅವಳ ಅತ್ತೆ ಮಾವಂದಿರು ಕಂಗಾಲಾದರು. ಬಂದಿದ್ದ ನೆಂಟರಿಷ್ಟರೆಲ್ಲ ಶೋಕ ಸಂತಾಪ ಸೂಚಿಸುತ್ತಾ 13ನೇ ದಿನಗಳ ಕಾರ್ಯದ ನಂತರ ಒಬ್ಬೊಬ್ಬರಾಗಿ ಹೊರಟುಹೋದರು.

ರವೀಂದ್ರ ಹೆಸರಿಗೆ ಮಾತ್ರ ಗೀತಾಳ ಪತಿಯಾಗಿದ್ದ. ಆದರೆ ಅವನ ದುರ್ನಡತೆಯಿಂದಾಗಿ ಅವಳಿಗೆ ಎಂದೂ ಪತಿಯ ಬಗ್ಗೆ ಪ್ರೀತಿಯ ಭಾವನೆ ಮೂಡಲಿಲ್ಲ. ಬದಲಾಗಿ ಅವಳಿಗೆ ಅತ್ತೆ ಮಾಂದಿರ ಬಗೆಗೇ ಹೆಚ್ಚಿನ ಪ್ರೀತಿ ಇತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ